ಹಿಂದೂ ಮುಖಂಡನ ಹತ್ಯೆಗೂ ಪಾಷಾ ಸಂಚು
ಸೇಠ್ ಹತ್ಯೆ ಯತ್ನ ಆರೋಪಿಯಿಂದ ಮಾಹಿತಿ
Team Udayavani, Nov 23, 2019, 6:00 AM IST
ಮೈಸೂರು: ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನದ ಆರೋಪಿ ಫರ್ಹಾನ್ ಪಾಷಾ ಹಿಂದೂ ಸಂಘಟನೆ ಮುಖಂಡರೊಬ್ಬರ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ರೋಚಕ ಮಾಹಿತಿ ಹೊರಬೀಳುತ್ತಿದ್ದು, ಕೇರಳ ಮಾದರಿ ಅನುಸರಿಸಿ ಮೈಸೂರಿನಲ್ಲಿ ಈ ಕಾರ್ಯಾಚರಣೆ ನಡೆಸಿರುವುದು ತನಿಖೆಯಿಂದ ಬಯಲಾಗಿದೆ.
ಪಾಷಾನಿಂದ ಈ ವಿಷಯ ಬಹಿ ರಂಗವಾಗುತ್ತಿದ್ದಂತೆಯೇ ಎಚ್ಚೆತ್ತು ಕೊಂಡಿರುವ ಪೊಲೀಸರು ಸ್ಥಳೀಯ ಹಿಂದೂ ಮುಖಂಡ ಕಲ್ಯಾಣಗಿರಿ ನಿವಾಸಿ ಎಚ್.ಜಿ. ಗಿರಿಧರ್ ಮನೆಗೆ ಪೊಲೀಸ್ ಭದ್ರತೆ ನೀಡಿ, ಅವರಿಗೆ ಗನ್‌ಮ್ಯಾನ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಸೇಠ್ ಪ್ರಕರಣ ಸಂಬಂಧ ಪೊಲೀಸರು ಇನ್ನೂ ಐವರನ್ನು ಬಂಧಿಸಿದ್ದಾರೆ. ನಾಯಿ ಕುತ್ತಿಗೆ ಕತ್ತರಿಸಿ ಪ್ರಯೋಗ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೂ ಮೊದಲು ಆರೋಪಿ ಫರ್ಹಾನ್ ಪಾಷಾ, ಹತ್ಯೆಗಾಗಿ ವಿಶೇಷ ತರಬೇತಿಯನ್ನೂ ಪಡೆದಿದ್ದ. ಮಾಂಸದಂಗಡಿ ಯಲ್ಲಿ ಬಳಸುವ ಕತ್ತಿಯಿಂದ ಮೊದಲು ಬಾಳೆದಿಂಡನ್ನು ಕತ್ತರಿಸಿ ಅಭ್ಯಾಸ ಮಾಡಿದ್ದ. ಬಳಿಕ ರಕ್ತದ ಮೇಲಿನ ಭಯ ಹೋಗಲು ನಾಯಿ ಕುತ್ತಿಗೆ ಕತ್ತರಿಸಿ, ಪ್ರಯೋಗವನ್ನೂ ಮಾಡಿದ್ದನು.
ಕೇರಳದಲ್ಲಿ ನಡೆದ ಕೆಲವು ಅಪರಾಧ ಪ್ರಕರಣಗಳಿಗೂ ಸೇಠ್ ಹತ್ಯೆ ಯತ್ನದ ಆರೋಪಿಗಳಿಗೂ ನಂಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.