

Team Udayavani, Jan 30, 2025, 10:47 AM IST
ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಬಳಿ ಭೀಕರ ವಿಮಾನ ದುರಂತವೊಂದು ಸಂಭವಿಸಿದೆ. ಲ್ಯಾಂಡ್ ಆಗುತ್ತಿದ್ದ ಪ್ರಯಾಣಿಕ ವಿಮಾನಕ್ಕೆ ಮಿಲಿಟರಿ ಹೆಲಿಕಾಪ್ಟರ್ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಒಟ್ಟು 68 ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ 15 ವರ್ಷಗಳಲ್ಲೇ ಅತ್ಯಂತ ಭೀಕರ ದುರಂತ ಎನಿಸಿಕೊಂಡಿದೆ.
ಅಮೆರಿಕನ್ ಈಗಲ್ ವಿಮಾನ 60 ಮಂದಿ ಪ್ರಯಾಣಿಕರು ಹಾಗೂ 4 ಮಂದಿ ಸಿಬಂದಿಯೊಂದಿಗೆ ವಾಷಿಂಗ್ಟನ್ನ ರೋನಾಲ್ಡ್ ರೇಗನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ತಯಾರಿ ನಡೆಸಿತ್ತು. ಈ ಸಮಯದಲ್ಲಿ ಪೊಟೋಮ್ಯಾಕ್ ನದಿಯ ಮೇಲೆ ಅಭ್ಯಾಸದಲ್ಲಿ ತೊಡಗಿದ್ದ ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್ ವಿಮಾನಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು 68 ಮಂದಿ ಸಾವಿಗೀಡಾಗಿದ್ದಾರೆ.
ಕೊನೇ ಕ್ಷಣದಲ್ಲಿ ರನ್‌ವೇ ಬದಲು: ವಾಷಿಂಗ್ಟನ್‌ನಲ್ಲಿ ಇಳಿಯಬೇಕಿದ್ದ ವಿಮಾನದ ರನ್‌ವೇಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿತ್ತು. ದುರಂತ ನಡೆಯುವುದಕ್ಕೂ ಕೆಲವು ನಿಮಿಷಗಳ ಮೊದಲು, ರನ್‌ವೇ-1 ಬದಲು ರನ್ ವೇ-33ರಲ್ಲಿ ಇಳಿಸುವಂತೆ ಎಟಿಸಿ ವಿಮಾನದ ಪೈಲಟ್‌ಗೆ ಸೂಚನೆ ನೀಡಿತ್ತು.
A helicopter and a commercial jet collided mid-air at the Reagan Washington National Airport
Prayers for everyone… this is horrible.. 🙏
• the small aircraft crashed into the Potomac River near Washington D.C., leading to a halt in all takeoffs pic.twitter.com/tZ8rZ77i09
— Mary (@Successful4444) January 30, 2025
ಕಾಪ್ಟರ್‌ಗೂ ಸೂಚನೆ: ಇದಾದ ಬಳಿಕ ಸೇನಾ ಹೆಲಿಕಾಪ್ಟರನ್ನು ಸಂಪರ್ಕಿಸಿದ ನಿಯಂತ್ರಣ ಟವರ್, ನಿಮ್ಮ ಮುಂದಿರುವ ವಿಮಾನದ ಬಳಿಕ ನೀವು ಸಾಗಿ ಎಂಬ ಸೂಚನೆ ನೀಡಲಾಗಿತ್ತು. ಹೆಲಿಕಾಪ್ಟರ್ ದಿಕ್ಕು ಬದಲಿಸದ ಕಾರಣ “ನಿಮ್ಮ ಮುಂದಿರುವ ವಿಮಾನ ಕಾಣುತ್ತಿಲ್ಲವೇ’ ಎಂದು ಟವರ್‌ನಿಂದ ಪ್ರಶ್ನಿಸಿದ್ದು, ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ದುರಂತ ಸಂಭವಿಸಿದೆ.
2009ರಲ್ಲಿ 49 ಮಂದಿ ಸಾವು: 2009 ರಲ್ಲಿ ಕೋಲ್ಗನ್ ಸಂಸ್ಥೆಯ ವಿಮಾನವೊಂದು ಲ್ಯಾಂ ಡಿಂಗ್ ವೇಳೆ ನೆಲಕ್ಕಪ್ಪಳಿಸಿದ್ದರಿಂದ 49 ಮಂದಿ ಮೃತ ಪಟ್ಟಿ ದ್ದರು. ಇದಾದ ಬಳಿಕ ಇದು ಭೀಕ ರ ದುರಂ ತ ಎನಿಸಿಕೊಂಡಿದೆ.
ವಿಮಾನ ಕಂಡ ತತ್‌ಕ್ಷಣ ಕಾಪ್ಟರ್ ವಾಪಸ್ ಏಕೆ ಹೋಗಲಿಲ್ಲ?: ಟ್ರಂಪ್
ವಾಷಿಂಗ್ಟನ್: ವಿಮಾನ ಎದುರಿಗೆ ಬರುತ್ತಿರು ವುದು ಕಾಣುತ್ತಿದ್ದರೂ ಕಾಪ್ಟರ್ ವಾಪಸ್ ಹೋಗದೇ ಅಥವಾ ಮೇಲೆ, ಕೆಳಗೆ ಹೋಗದೆ ನೇರವಾಗಿ ಬಂದು ಏಕೆ ಢಿಕ್ಕಿ ಹೊಡೆ ಯಿತು? ಹೀಗೆಂದು ಅಮೆ ರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಸಾಮಾ ಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ವಿಮಾನ ಲ್ಯಾಂಡಿಂಗ್‌ಗಾಗಿ ಬರು ತ್ತಿತ್ತು. ವಿಮಾನ ನಿಯಂತ್ರಕ ಸಂಸ್ಥೆ ಕೂಡ ವಿಮಾನ ಕಾಣಿಸಿತೇ ಎಂದು ಕಾಪ್ಟರ್‌ಗೆ ಕೇಳುವ ಬದಲು ಆ ಕ್ಷಣಕ್ಕೆ ಏನು ಮಾಡಬೇಕು ಎಂಬುದನ್ನು ಏಕೆ ಹೇಳಲಿಲ್ಲ’ ಎಂದಿದ್ದಾರೆ.
India PM ಮೇಲೆ ನನಗೆ ಅಪಾರ ಗೌರವವಿದೆ, ಆದರೆ..: ಮಸ್ಕ್ ನಿರ್ಧಾರ ಸಮರ್ಥಿಸಿಕೊಂಡ ಟ್ರಂಪ್
Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?
Isaac Newton: ಇನ್ನು 35 ವರ್ಷಗಳ ಬಳಿಕ ವಿಶ್ವ ಅಂತ್ಯ- ನ್ಯೂಟನ್ ಭವಿಷ್ಯ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
You seem to have an Ad Blocker on.
To continue reading, please turn it off or whitelist Udayavani.