ಪ್ರಧಾನಿ ಪರಿಹಾರ ನಿಧಿಗೆ 37 ಲಕ್ಷ ರೂ. ದೇಣಿಗೆ ನೀಡಿ ಮಾದರಿಯಾದ ಪ್ಯಾಟ್ ಕಮಿನ್ಸ್
Team Udayavani, Apr 27, 2021, 6:50 AM IST
ಹೊಸದಿಲ್ಲಿ: ಕೋಲ್ಕತಾ ನೈಟ್ರೈಡರ್ ತಂಡದ ಆಸ್ಟ್ರೇಲಿಯನ್ ವೇಗಿ ಪ್ಯಾಟ್ ಕಮಿನ್ಸ್ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ದೊಡ್ಡ ಮೊತ್ತದ ಆರ್ಥಿಕ ಬೆಂಬಲ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅವರು “ಪಿಎಂ ಕೇರ್ಸ್ ನಿಧಿ’ಗೆ 50 ಸಾವಿರ ಡಾಲರ್ (37.37 ಲಕ್ಷ ರೂ.) ದೇಣಿಗೆ ನೀಡಿದ್ದಾರೆ.
ಟ್ವೀಟ್ ಮೂಲಕ ಈ ವಿಚಾರವನ್ನು ತಿಳಿಸಿದ ಪ್ಯಾಟ್ ಕಮಿನ್ಸ್ “ಇದು ಪ್ರಾಣವಾಯು ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್ಗಳನ್ನು ಖರೀದಿಸಲು ನನ್ನದೊಂದು ಸಣ್ಣ ಕೊಡುಗೆಯಷ್ಟೇ. ನಾವು ಪ್ರೀತಿಸುವ ದೇಶಗಳಲ್ಲಿ ಭಾರತವೂ ಒಂದು.
ನಾನು ಎಲ್ಲೂ ನೋಡಿರದ, ಭೇಟಿಯಾಗಿರದ ವಿಶಾಲ ಹೃದಯದ ಜನ ಇಲ್ಲಿದ್ದಾರೆ. ನನ್ನ ದೇಶದಲ್ಲಿ ನನ್ನನು ಪ್ರೀತಿಸುವಂತೆ ಈ ದೇಶದಲ್ಲಿಯೂ ನನಗೆ ಅಭಿಮಾನಿಗಳಿದ್ದಾರೆ. ಇದೀಗ ಈ ದೇಶ ಕೊರೊನಾ ಬಿಕ್ಕಟ್ಟಿಗೆ ಸಿಲುಕಿರುವುದು ನೋವು ತಂದಿದೆ. ಇತರ ಐಪಿಎಲ್ ಆಟಗಾರರಿಗೂ ನಾನು ದೇಣಿಗೆ ನೀಡುವಂತೆ ಸೂಚಿಸುತ್ತೇನೆ’ ಎಂದು ಕಮಿನ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.