ಕೇಂದ್ರ ನೌಕರರಿಗೆ ವೇತನ ಕಡಿತದ ತೂಗುಗತ್ತಿ! ಈ ವರ್ಷದಿಂದಲೇ ಹೊಸ ನಿಯಮ ಜಾರಿ
ವರ್ಗೀಕರಣದ ಆಧಾರದಲ್ಲಿ ಸಂಬಳ
Team Udayavani, Feb 23, 2021, 6:50 AM IST
ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ನೌಕರರ ದಕ್ಷತೆ ಆಧಾರಿತ ವೇತನ (ಪಿಆರ್‌ಪಿ) ಆ ಕಂಪೆನಿಯ ಸಾಧನೆಗೆ ಅನುಗುಣವಾಗಿ ಸಿಗಲಿದೆ.
ಕೇಂದ್ರ ಸಚಿವಾಲಯಗಳು ತಮ್ಮ ಅಧೀನದಲ್ಲಿರುವ ಎಲ್ಲ ಸರಕಾರಿ ಸ್ವಾಮ್ಯದ ಕಂಪೆನಿ (ಪಿಎಸ್‌ಯು)ಗಳ ಜತೆಗೆ ಮಾಡಿಕೊಳ್ಳುತ್ತಿರುವ ಹೊಸ ಒಪ್ಪಂದಗಳಲ್ಲಿ ಪಿಆರ್‌ಪಿಯ ಪರಿಷ್ಕೃತ ನಿಯಮಾವಳಿಗಳನ್ನು ಅಳವಡಿಸಲಾಗುತ್ತಿದ್ದು, ಈ ಆರ್ಥಿಕ ವರ್ಷದಲ್ಲೇ ನಿಯಮ ಜಾರಿಯಾಗಲಿದೆ.
ಏನಿದು ಹೊಸ ನಿಯಮ?
ಪ್ರತೀ ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆ (ಸಿಪಿಎಸ್‌ಇ)ಯ ಸಾಧನೆಯನ್ನು ಎಂ-ಕ್ಯಾಪ್, ರಿಟರ್ನ್ ಆನ್ ಕ್ಯಾಪಿಟಲ್, ಅಸೆಟ್ ಟರ್ನ್ ಓವರ್ ರೇಶಿಯೊ ಮತ್ತು ಕ್ಯಾಪೆಕ್ಸ್ ಆ್ಯಂಡ್ ಪ್ರೊಡಕ್ಷನ್ ಟಾರ್ಗೆಟ್ ಆಧಾರದಲ್ಲಿ ಅಳೆಯಲಾಗುತ್ತದೆ. ಇದಕ್ಕಾಗಿ ಒಟ್ಟು 100 ಅಂಕಗಳನ್ನು ಗೊತ್ತುಪಡಿಸಲಾಗಿದೆ. ಒಂದು ಕಂಪೆನಿಯ ಸಾಧನೆಯ ಆಧಾರದಲ್ಲಿ ಅದರ ಮೌಲ್ಯಮಾಪನ ಮಾಡಲಾಗುತ್ತದೆ.
ಉದ್ದೇಶವೇನು?
ಇದರ ಹಿಂದೆ ಸಿಪಿಎಸ್‌ಇ ವಲಯದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಉದ್ದೇಶ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವೇತನ ಕಡಿತ ಎಷ್ಟು?
ಒಟ್ಟು 100 ಅಂಕಗಳಲ್ಲಿ 90ಕ್ಕೂ ಹೆಚ್ಚು ಅಂಕ ಗಳಿಸಿದ ಕಂಪೆನಿಗಳನ್ನು ಅತ್ಯುತ್ತಮ ಎಂದು ಪರಿಗಣಿಸಿ, ಅವುಗಳ ನೌಕರರಿಗೆ ಶೇ. 100ರಷ್ಟು ಪಿಆರ್‌ಪಿ ವೇತನ ನೀಡ ಲಾಗುತ್ತದೆ. ಅಂದರೆ ಈ ಕಂಪೆನಿಗಳ ನೌಕರರ ವೇತನದಲ್ಲಿ ಕಡಿತ ಇಲ್ಲ. ಆದರೆ ಉತ್ತಮ, ಸಾಧಾರಣ ಎಂದು ಪರಿಗಣಿತ ವಾಗುವ ಕಂಪೆನಿಗಳ ನೌಕರರಿಗೆ ಕ್ರಮವಾಗಿ ಶೇ. 80 ಮತ್ತು ಶೇ. 60ರಷ್ಟು ಮಾತ್ರ ವೇತನ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.