Pepper price Rise: ಕಾಳುಮೆಣಸು ಕೆ.ಜಿ.ಗೆ 600 ರೂಪಾಯಿ.!
ಧಾರಣೆ ಇನ್ನಷ್ಟು ಏರಿಕೆ ಕಾಣುವ ಸಂಭವ ಇದೆ.
Team Udayavani, Jul 26, 2023, 10:55 AM IST
ಪುತ್ತೂರು: ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಜಿಗಿತ ನಾಗಲೋಟದಲ್ಲಿ ಮುಂದುವರಿದಿದ್ದು ಸುಮಾರು 7
ವರ್ಷಗಳ ಅನಂತರ 600 ರೂ. ಗಡಿ ದಾಟಿದೆ. ಜು. 24ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 590 ರೂ.ನಿಂದ 605 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 550 ರೂ. ತನಕ ಧಾರಣೆ ಇತ್ತು. ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40ರಿಂದ 50 ರೂ. ತನಕ ಹೆಚ್ಚಾಗಿತ್ತು.
ದಾಖಲೆಯ ದರ
2015-16ರಲ್ಲಿ ದಾಖಲಾಗಿದ್ದ 675 ರೂ.ನಿಂದ 700 ರೂ. ಗರಿಷ್ಠ ಧಾರಣೆಯಾಗಿತ್ತು. ಅನಂತರ 300 ರೂ. ತನಕ ಇಳಿದಿತ್ತು. ಕಳೆದ 3 ವರ್ಷಗಳಿಂದ ಧಾರಣೆ 500 ರೂ. ಗಡಿ ದಾಟಿರಲಿಲ್ಲ. 2023ರ ಜುಲೈಯಲ್ಲಿ 600 ರೂ. ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ದಿನೇ ದಿನೆ ಬೇಡಿಕೆ ಕಂಡು ಬಂದಿದ್ದು ಹೀಗಾಗಿ ಧಾರಣೆ ಇನ್ನಷ್ಟು ಏರಿಕೆ ಕಾಣುವ ಸಂಭವ ಇದೆ.
ಕ್ಯಾಂಪ್ಕೊದಲ್ಲಿ ಒಂದೇ ದಿನದಲ್ಲಿ 30 ರೂ. ಏರಿಕೆ
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಜು. 22ರಂದು 510 ರೂ. ಇತ್ತು. ಜು. 24ರಂದು 520ಕ್ಕೆ ಏರಿತ್ತು. ಜು. 25ರಂದು 550ಕ್ಕೆ ನೆಗೆಯಿತು. ತನ್ಮೂಲಕ ಒಂದೇ ದಿನದಲ್ಲಿ 30 ರೂ. ಏರಿಕೆ ಕಂಡಿತು.
ಹೊಸ ಅಡಿಕೆ ದರ ಏರಿಕೆ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಏರಿಕೆ ಮುಂದುವರಿದಿದ್ದು ಜು. 25ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 440 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 432 ರೂ. ಇತ್ತು. ಜು. 11 ರಂದು ಕ್ಯಾಂಪ್ಕೋದಲ್ಲಿ 425 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 430 ರೂ. ತನಕವು ಖರೀದಿಯಾಗಿತ್ತು. ಸಿಂಗಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.