ಶೇ. 15ರಷ್ಟು ಬಸ್ ಪ್ರಯಾಣ ದರ ಹೆಚ್ಚಳ
ಕರಾವಳಿಯಲ್ಲಿ ಸುರಕ್ಷಾ ಕ್ರಮಗಳೊಂದಿಗೆ ನಾಳೆಯಿಂದ ಬಸ್ ಪುನರಾರಂಭ
Team Udayavani, May 31, 2020, 5:40 AM IST
ಸಾಂದರ್ಭಿಕ ಚಿತ್ರ.
ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೂ. 1ರಿಂದ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಆರಂಭವಾಗಲಿದ್ದು, ವಾರದೊಳಗೆ ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಸಂಚರಿಸಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದರು.
ಬಸ್ ಸಂಚಾರ ಪುನರಾರಂಭಕ್ಕೆ ಸರಕಾರ ಸೂಚಿಸಿದೆ ಎಂದು ಶನಿವಾರ ಎರಡೂ ಜಿಲ್ಲೆಗಳ ಬಸ್ ಮಾಲಕರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಮೂರು ತಿಂಗಳ ತೆರಿಗೆ ರಿಯಾಯಿತಿಗಾಗಿ ಮನವಿ ಮಾಡಿದ್ದು, ಎರಡು ತಿಂಗಳ ರಿಯಾಯಿತಿ ಸಿಕ್ಕಿದೆ. ಇನ್ನೊಂದು ತಿಂಗಳಿಗೂ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ಶೇ. 15 ದರ ಹೆಚ್ಚಳಕ್ಕೆ ಅನುಮತಿ
ಸರಕಾರವು ಶೇ. 15 ಪ್ರಯಾಣದರ ಹೆಚ್ಚಳಕ್ಕೆ ಒಪ್ಪಿದೆ. ಅದರಂತೆ ದರ ಹೆಚ್ಚಳ ಮಾಡಲಿದ್ದು, ಚಿಲ್ಲರೆ ಅಭಾವ ನೀಗಿಸಲು ದರವನ್ನು ರೌಂಡ್ ಅಪ್ ಮಾಡುತ್ತೇವೆ. ಕೋವಿಡ್-19 ಸಂಬಂಧ ಸುರಕ್ಷಾ ನಿಯಮಾವಳಿ ಪಾಲಿಸುತ್ತೇವೆ ಎಂದು ಬಲ್ಲಾಳ್ ತಿಳಿಸಿದರು.ಕೋವಿಡ್-19 ಮುಗಿಯುವವರೆಗೆ ರಿಯಾಯಿತಿ ಇರದು.ಈಗಾಗಲೇ ಮಾಡಿಸಿಕೊಂಡ ಸಿಸಿಬಿ ಪಾಸುಗಳನ್ನು ಕ್ಯಾಶ್ ಕಾರ್ಡ್ ಆಗಿ ಪರಿವರ್ತಿಸಲಾಗುವುದು ಎಂದು ವಿವರಿಸಿದರು.
ನಮಗೆ ಕೊಟ್ಟ ಶೇ. 15 ಹೆಚ್ಚುವರಿ ದರ ಏನೂ ಸಾಲದು. ಈಗ ಸಂಚರಿಸುತ್ತಿರುವ ಪ್ರಯಾಣಿಕರ ಅಭಿಪ್ರಾಯ ಪಡೆದು ಸೋಮವಾರದಿಂದ ಪ್ರಯಾಣ ದರ ಸ್ವಲ್ಪ ಹೆಚ್ಚಿಸುತ್ತಿದ್ದೇವೆ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರ. ಕಾರ್ಯದರ್ಶಿ, ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ್ ನಾಯಕ್ ತಿಳಿಸಿದರು.
ಬೆಳಗ್ಗೆ 7ರಿಂದ ರಾತ್ರಿ 7
ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಬಸ್ ಸಂಚರಿಸಲಿದ್ದು, ಸರಕಾರ ಸಮಯ ವಿಸ್ತರಿಸಿ ದರೆ ಪಾಲಿಸುವುದಾಗಿ ಕೆನರಾಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಚಾತ್ರ ಮತ್ತು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದರು.
ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ಟನೆಯ 135, ಉಡುಪಿ ಸಿಟಿ ಬಸ್ ಮಾಲಕರ ಸಂಘಟನೆಯ 22, ಕೆನರಾ ಬಸ್ ಮಾಲಕರ ಸಂಘಟನೆಯ 500 ಬಸ್‌ಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆ ಅಧರಿಸಿ ಎಲ್ಲ ಮಾರ್ಗಗಳಲ್ಲಿಯೂ ಆರಂಭಿಸಲಾಗುವುದು ಎಂದು ತಿಳಿಸಿದರು. ಪ್ರಯಾಣಿಕರೇ ಅವರವರ ಸುರಕ್ಷೆ ಕೈಗೊಳ್ಳಬೇಕು ಎಂದರು.
ಶೀಘ್ರವೇ ಬೆಂಗಳೂರಿಗೆ ರಾತ್ರಿ ಬಸ್
ಬೆಂಗಳೂರಿಗೆ ರಾತ್ರಿ ಬಸ್ ಸಂಚಾರಕ್ಕೂ ಸರಕಾರ ಶೀಘ್ರ ಅನುಮತಿ ಕೊಡುವ ಸಾಧ್ಯತೆ ಇದೆ. ಉಡುಪಿ- ಬೆಂಗಳೂರು ಪ್ರಯಾಣ ದರವನ್ನು 1,200 ರೂ.ಗೆ ಏರಿಸಿದ್ದೇವೆ ಎಂದು ಸದಾನಂದ ಚಾತ್ರ ತಿಳಿಸಿದರು.
ಉಡುಪಿ: ಇಂದೂ ಉಚಿತ ಬಸ್
ಉಡುಪಿಯಲ್ಲಿ ಉಚಿತ ಬಸ್ ಸಂಚಾರ ರವಿವಾರ ಕೊನೆಗೊಳ್ಳಲಿದ್ದು, ಸೋಮವಾರದಿಂದ ಇರದು ಎಂದು ಕೆ. ಸುರೇಶ್ ನಾಯಕ್ ತಿಳಿಸಿದರು. ಚಲೋ ಕಾರ್ಡ್ ಅನ್ನು ಸೋಮವಾರದಿಂದ ಆರಂಭಿಸಲಿದ್ದು, ಸಿಟಿ ಬಸ್ ನಿಲ್ದಾಣ, ಮಲ್ಪೆ, ಸಂತೆಕಟ್ಟೆ, ಮಣಿಪಾಲದ ಬಸ್ ನಿಲ್ದಾಣಗಳಲ್ಲಿ ದೊರೆಯಲಿದೆ ಎಂದರು.
ಶಿವಮೊಗ್ಗ ಬಸ್ ಸಂಚಾರಕ್ಕೆ ಸಭೆ
ಕರಾವಳಿಯಿಂದ ಶಿವಮೊಗ್ಗಕ್ಕೆ ಬಸ್ ಸಂಚಾರ ಕುರಿತು ಸೋಮವಾರ ಶಿವಮೊಗ್ಗ ದಲ್ಲಿ ಸಭೆ ಕರೆಯಲಾಗಿದೆ.
ಸಿಟಿ ಬಸ್: ಕನಿಷ್ಠ ದರ 10 ರೂ.
ಸಿಟಿ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರ 10 ರೂ. ಇರಲಿದೆ. ಅನಂತರದ ಸ್ಟೇಜ್‌ಗಳಿಗೆ 12, 15, 20 ರೂ.ಗಳಂತೆ ನಿಗದಿಪಡಿಸಲಾಗಿದೆ.
ಪ್ರಯಾಣ ದರ ಪರಿಷ್ಕರಣೆ
ಬಸ್‌ಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ, ಸ್ಯಾನಿಟೈಸರ್ ಬಳಕೆ, ಬಸ್ ಸ್ಯಾನಿಟೈಸೇಶನ್ ಇತ್ಯಾದಿ ಖರ್ಚುಗಳನ್ನು ಆಧರಿಸಿ ಪ್ರಯಾಣದರ ಪರಿಷ್ಕರಿಸಲಾಗಿದೆ ಎಂದಿದೆ ಮಾಲಕರ ಸಂಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.