ಪಂಚ ರಾಜ್ಯಗಳ ಚುನಾವಣೆ ಬಳಿಕ ತೈಲ ದರ ಶಾಕ್? ಪ್ರತಿ ಲೀಟರ್‌ಗೆ 9 ರೂ. ಹೆಚ್ಚಳ
ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲೂ ಭಾರೀ ಪ್ರಮಾಣದ ಕುಸಿತವಾಗಿದೆ.
Team Udayavani, Mar 3, 2022, 10:27 AM IST
ನವದೆಹಲಿ: ಒಂದು ವೇಳೆ ಈಗ ಪಂಚ ರಾಜ್ಯ ಚುನಾವಣೆ ಇಲ್ಲದೇ ಹೋಗಿದ್ದಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಮುಖಿಯಾಗಿರುತ್ತಿತ್ತು! ಇದು ಮಾರುಕಟ್ಟೆ ಪಂಡಿತರ ವಿಶ್ಲೇಷಣೆ.
ಇದನ್ನೂ ಓದಿ:ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?
ಇದಕ್ಕೆ ಕಾರಣ, ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆ ಲ್‌ಗೆ 110 ಡಾಲರ್ ತಲುಪಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಚ್ಚಾ ತೈಲದ ದರ ಈ ಪ್ರಮಾಣಕ್ಕೆ ಮುಟ್ಟಿದೆ. ಇದಕ್ಕೆ ಅನುಗುಣವಾಗಿ ಇಲ್ಲಿಯೂ ದರ ಏರಿಕೆ ಮಾಡಲಾಗುತ್ತಿತ್ತು. ಆದರೆ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಇರುವುದರಿಂದ ತೈಲ ಕಂಪನಿಗಳು ಬೆಲೆ ಏರಿಕೆಯನ್ನು ಫ್ರೀಜ್ ಮಾಡಿವೆ. ಆದರೆ, ಇನ್ನು ನಾಲ್ಕೈದು ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರೀ ಪ್ರಮಾಣದಲ್ಲಿಯೇ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮಾ.7ಕ್ಕೆ ಉತ್ತರ ಪ್ರದೇಶದ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮಾ.10ಕ್ಕೆ ಫಲಿ ತಾಂಶ ಪ್ರಕಟವಾಗಲಿದೆ. ಆದರೂ, ತೈಲ ಕಂಪನಿಗಳು ಮಾ.7ರ ನಂತರ ದರ ಏರಿಕೆ ಮಾಡ ಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 2014ರ ಆಗಸ್ಟ್‌ನಲ್ಲಿ ಪ್ರತಿ ಬ್ಯಾರೆ ಲ್‌ಗೆ 102 ಡಾಲರ್ ತಲುಪಿತ್ತು. ಇದನ್ನು ಬಿಟ್ಟರೆ ಈಗಲೇ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 110 ಡಾಲ ರ್‌ಗೆ ಏರಿಕೆಯಾಗಿದೆ.
5.7 ರೂ. ನಷ್ಟ : ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ( ಐಒ ಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)ಗಳಿಗೆ ಪ್ರತಿ ಲೀ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 5.7 ರೂ. ನಷ್ಟವಾಗುತ್ತಿದೆ. ಈಗಿರುವ ಕಚ್ಚಾ ತೈಲದ ದರವನ್ನು ಮುಂದಿಟ್ಟುಕೊಂಡರೆ, ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬೇಕಾದರೆ ಪ್ರತಿ ಲೀ.ಗೆ 9 ರೂ. ಅಥವಾ ಶೇ.10ರಷ್ಟು ದರ ಹೆಚ್ಚಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
110 ಡಾಲರ್‌ಗೆ ಏರಿಕೆಯಾದ ಕಚ್ಚಾ ತೈಲ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗು ತ್ತಲೇ ಇದೆ. ಬುಧವಾರ ಮತ್ತೆ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಮೇಲೆ 5.24 ಡಾಲರ್ ಹೆಚ್ಚಳ ವಾಗಿ, 108.60 ಡಾಲರ್‌ಗೆ ಏರಿಕೆಯಾಯಿತು. ಇದು ಬೆಂಚ್ ಮಾರ್ಕ್ ಯುಎಸ್ ಕಚ್ಚಾ ತೈಲದ ದರ. ಆದರೆ, ಬ್ರೆಂಟ್ ಕಚ್ಚಾ ತೈಲದ ದರ 5.43 ಡಾಲರ್ ಹೆಚ್ಚಳವಾಗಿ, 110.40 ಡಾಲರ್‌ಗೆ ಏರಿಕೆಯಾಯಿತು.
ಇದರ ನಡುವೆಯೇ ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ 31 ಸದಸ್ಯರ ಮಂಡಳಿ ಮಂಗಳ ವಾರವಷ್ಟೇ ಮೀಸಲಾಗಿ ಇರಿಸಲಾಗಿರುವ ಕಚ್ಚಾ ತೈಲದಲ್ಲಿ 60 ದಶಲಕ್ಷ ಬ್ಯಾರೆಲ್ ಅನ್ನು ಬಿಡು ಗಡೆ ಮಾಡಲು ಒಪ್ಪಿಗೆ ನೀಡಿದೆ. ಜತೆಗೆ ಅಮೆರಿಕವೂ ಮೀಸಲಾಗಿಟ್ಟಿರುವ ತೈಲದಲ್ಲಿ 30 ದಶ ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರ ನಡು ವೆಯೂ ತೈಲ ಬೆಲೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಷೇರುಪೇಟೆ ಕುಸಿತ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಗತ್ತಿನ ಎಲ್ಲಾ ಷೇರುಮಾರುಕಟ್ಟೆಗಳು ಕುಸಿತ ಕಂಡಿವೆ. ಇದಕ್ಕೆ ಪೂರಕವಾಗಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲೂ ಭಾರೀ ಪ್ರಮಾಣದ ಕುಸಿತವಾಗಿದೆ. ಬುಧವಾರ ಮಧ್ಯಂತರದಲ್ಲಿ 1,200 ಅಂಕಗಳಷ್ಟು ಸೆನ್ಸೆಕ್ಸ್ ಕುಸಿದಿತ್ತು. ನಿಫ್ಟಿ ಕೂಡ 187.95 ಅಂಕಗಳಷ್ಟು ಕುಸಿತವಾಗಿತ್ತು. ಆದರೆ, ಸೆನ್ಸೆಕ್ಸ್ ನಲ್ಲಿ ಮಧ್ಯಾಹ್ನದ ನಂತರ ಕೊಂಚ ಏರಿಕೆಯಾಗಿ ದಿನದಂತ್ಯಕ್ಕೆ 778.38 ಅಂಕಗಳ ಕುಸಿತದೊಂದಿಗೆ ವಹಿವಾಟು ಅಂತ್ಯವಾಯಿತು. ಅಂದರೆ, 55,468.90 ಸೂಚ್ಯಂಕಗಳಿಗೆ ವಹಿ ವಾಟು ಮುಗಿಸಿತು. ಫ್ಟಿ 16,605.95 ಅಂಕಗಳಿಗೆ ವಹಿವಾಟು ಮುಗಿಸಿತು. ಬುಧವಾರ ಹೆಚ್ಚು ನಷ್ಟ ಅನುಭವಿಸಿದ್ದು ಮಾರುತಿ ಸುಜುಕಿ ಷೇರುಗಳು. ಶೇ.6ರಷ್ಟು ಕುಸಿತವಾಯಿತು. ಉಳಿದಂತೆ ಡಾ.ರೆಡ್ಡೀಸ್, ಏಷಿಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ಸಿ ಟ್ವಿನ್ಸ್, ಅಲ್ಟ್ರಾ ಟೆಕ್ ಸಿಮೆಂಟ್‌ನಲ್ಲಿಯೂ ಶೇ.5.14ರಷ್ಟು ಕುಸಿತವಾಯಿತು.
ರೂಪಾಯಿ 44 ಪೈಸೆ ಕುಸಿತ
ಇನ್ನು ಡಾಲರ್ ವಿರುದ್ಧ ರೂಪಾಯಿ ಮೌಲ್ಯವೂ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಫಾರೆಕ್ಸ್ ಟ್ರೇಡಿಂಗ್ ನಲ್ಲಿ 44 ಪೈಸೆ ಕುಸಿತವಾಗಿದ್ದು, ದಿನದಂತ್ಯಕ್ಕೆ ಪ್ರತಿ ಡಾಲರ್ ಮುಂದೆ ಭಾರತೀಯ ರೂಪಾಯಿ ಮೌಲ್ಯ 75.77ಕ್ಕೆ ನಿಂತಿತು. ಬುಧವಾರ ಬೆಳಗ್ಗೆ ವಿದೇಶಿ ವಿನಿಮಯ ಮಾರುಕ ಟ್ಟೆಯಲ್ಲಿ ರೂಪಾಯಿ ಮೌಲ್ಯ 75.78ರಿಂದ ಆರಂಭವಾಯಿತು. ಆದರೆ, ಮಧ್ಯಂತರದಲ್ಲಿ 75.86 ರೂ.ಗೆ ಕುಸಿಯಿತು. ದಿನದಿಂತ್ಯಕ್ಕೆ 75.77 ರೂ.ಗೆ ಅಂತ್ಯವಾಯಿತು.
ಚಿನ್ನದ ದರ ಏರಿಕೆ
ಅತ್ತ ಚಿನಿವಾರ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬುಧವಾರ ನವದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರ 1,202 ರೂ.ನಷ್ಟು ಏರಿಕೆಯಾಯಿತು. ಅದೇ ಬೆಳ್ಳಿ ದರ, ಪ್ರತಿ ಕೆಜಿಗೆ 2,148 ರೂ.ಗೆ ಏರಿಕೆಯಾಯಿತು.
ಮುಖ್ಯಾಂಶಗಳು
10 ಗ್ರಾಂ ಚಿನ್ನದ ದರ – 51,889 ರೂ.
1 ಕೆಜಿ ಬೆಳ್ಳಿ ದರ – 67,956 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.