ಫಿಲಿಪ್ಪೀನ್ಸ್ ನಲ್ಲಿ ವಾಯುಪಡೆ ವಿಮಾನ ಪತನ: 31 ಯೋಧರು ಜೀವಂತ ದಹನ
ಫಿಲಿಪ್ಪೀನ್ಸ್‌ನ ಜೊಲೊ ವಿಮಾನ ನಿಲ್ದಾಣದ ಬಳಿ ನಡೆದ ದುರ್ಘಟನೆ
Team Udayavani, Jul 4, 2021, 8:53 PM IST
ಮನಿಲಾ: ಫಿಲಿಪ್ಪೀನ್ಸ್ ಯೋಧರನ್ನು ಕರೆದೊಯ್ಯುತ್ತಿದ್ದ ವಾಯುಪಡೆ ವಿಮಾನ ಅಪಘಾತಕ್ಕೀಡಾಗಿದ್ದು 31 ಯೋಧರು ಜೀವಂತವಾಗಿ ದಹನವಾಗಿರುವ ಘಟನೆ ಭಾನುವಾರ ಫಿಲಿಪ್ಪೀನ್ಸ್‌ನ ಸುಲು ಪ್ರಾಂತ್ಯದ ಜೊಲೊ ವಿಮಾನ ನಿಲ್ದಾಣದ ಬಳಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವಾಗ ಪೈಲಟ್‌ಗಳ ನಿಯಂತ್ರಣ ತಪ್ಪಿದ ವಿಮಾನ, ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ತೆಂಗಿನ ತೋಟದಲ್ಲಿ ಬಿದ್ದಿದೆ. ಆ ಸಂದರ್ಭದಲ್ಲಿ ತೆಂಗಿನ ತೋಟದಲ್ಲಿ ವಿಮಾನ ಬಿದ್ದ ಜಾಗದಲ್ಲಿದ್ದ ಇಬ್ಬರು ಹಳ್ಳಿಗರೂ ಸಾವನ್ನಪ್ಪಿದ್ದಾರೆ. ಹೊತ್ತಿ ಉರಿಯಲಾರಂಭಿಸಿದ ವಿಮಾನದಿಂದ 50 ಯೋಧರನ್ನು ಸಂರಕ್ಷಿಸಲಾಗಿದೆ.
ವಿಮಾನವು ತೆಂಗಿನ ತೋಟದ ಕಡೆಗೆ ನಿಧಾನವಾಗಿ ವಾಲುತ್ತಿರುವಾಗಲೇ ಅಪಾಯದ ಮುನ್ಸೂಚನೆ ಅರಿತ ಕೆಲವು ಯೋಧರು, ವಿಮಾನದಿಂದ ಹೊರಗೆ ಜಿಗಿದರೆಂದು ಸ್ಥಳೀಯರು ಹೇಳಿದ್ದಾರೆ. ಆದರೆ, ವಿಮಾನದಿಂದ ಜಿಗಿದವರ ಯೋಧರ ಬಗ್ಗೆ ಸುಳಿವು ಸಿಕ್ಕಿಲ್ಲ. ಅವರ ಹುಡುಕಾಟಕ್ಕಾಗಿ ಸೇನೆಯ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ : ಎಪಿಎಂಸಿ ದುರ್ಬಲಗೊಳಿಸೋದು ಸರಿಯಲ್ಲ : ಎಚ್.ಕೆ.ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್