ಅಲ್ಲಲ್ಲಿ ಕಂಡುಬರುತ್ತಿವೆ ಹೆಬ್ಬಾವುಗಳು ! ಮಿಲನ ಸಮಯದಲ್ಲಿ ಓಡಾಟ ಹೆಚ್ಚಳ


Team Udayavani, Feb 23, 2022, 12:59 PM IST

ಅಲ್ಲಲ್ಲಿ ಕಂಡುಬರುತ್ತಿವೆ ಹೆಬ್ಟಾವುಗಳು! ಮಿಲನ ಸಮಯದಲ್ಲಿ ಓಡಾಟ ಹೆಚ್ಚಳ

ಉಡುಪಿ : ಉಡುಪಿ ನಗರ ಸಹಿತ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಕೆಲವು ದಿನಗಳಿಂದ ಹೆಬ್ಬಾವು (ಇಂಡಿಯನ್‌ ರಾಕ್‌ ಪೈಥಾನ್‌) (Indian rock python) ಓಡಾಟ ಹೆಚ್ಚುತ್ತಿವೆ.

ಮಲ್ಪೆ, ಅಂಬಲಪಾಡಿ, ಗುಂಡಿಬೈಲು, ದೊಡ್ಡಣಗುಡ್ಡೆ, ಮಠದಬೆಟ್ಟು, ಬಡಾನಿಡಿ ಯೂರು ಹಂಪನಕಟ್ಟೆ, ಕೆಮ್ಮಣ್ಣು, ಸಂತೆಕಟ್ಟೆ, ಉದ್ಯಾವರ, ಉಪ್ಪೂರು ಭಾಗದ ಮನೆಯ ಆವರಣ, ಗಾರ್ಡನ್‌, ದನದ ಕೊಟ್ಟಿಗೆ, ಕೋಳಿ ಗೂಡು ಸಮೀಪ ಹೆಬ್ಬಾವು ಕಾಣಿಸಿಕೊಳ್ಳುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಮನೆ ಪರಿಸರದಲ್ಲಿ ಸಂಜೆ, ರಾತ್ರಿ ವೇಳೆ ಹೆಬ್ಬಾವು ಕಂಡ ಕೂಡಲೇ ಜನರು ಉರಗ ತಜ್ಞರು, ಅರಣ್ಯ ಇಲಾಖೆಯನ್ನು ಸಂಪರ್ಕಿಸುತ್ತಿದ್ದಾರೆ.

ಕೃಷಿ ಚ ಟುವಟಿಕೆ ಹೆಚ್ಚಿರುವ ಕಡೆಗಳಲ್ಲಿ ಹೆಬ್ಬಾವುಗಳಿರುತ್ತವೆ. ಉಡುಪಿ ಪರಿಸರ ಆಧುನಿಕವಾಗಿ ಬೆಳೆಯುತ್ತಿದೆ. ಹಾವುಗಳು ಸಾಮಾನ್ಯವಾಗಿ ಮನುಷ್ಯರಿಂದ ಮರೆ ಯಲ್ಲಿ ಬದುಕಲು ಪ್ರಯತ್ನಿಸುತ್ತಿವೆ. ಮಿಲನ ಸಮಯದಲ್ಲಿ ಅವುಗಳ ಓಡಾಟ ಅನಿವಾರ್ಯವಾದ್ದರಿಂದ ಜನರಿಗೆ ಕಣ್ಣಿಗೆ ಬೀಳುತ್ತಿವೆ ಎನ್ನುತ್ತಾರೆ ಉರಗ ತಜ್ಞರು.

ಮೂರು ತಿಂಗಳು ಮಿಲನ ಕಾಲ
ಡಿಸೆಂಬರ್‌ನಿಂದ ಫೆಬ್ರವರಿವರೆಗೂ ಹೆಬ್ಬಾವುಗಳ ಮಿಲನ ಕಾಲವಾಗಿದೆ. ಹೆಬ್ಟಾವುಗಳು ದೈತ್ಯದೇಹಿ ಆಗಿರುವುದ ರಿಂದ ಶತ್ರುಗಳಿಂತ ತಮಗೆ ಆಗಬಹು ದಾದ ಅಪಾಯವನ್ನು ತಪ್ಪಿಸಿಕೊಳ್ಳಲು ರಾತ್ರಿ ವೇಳೆ ಹೆಚ್ಚು ಸಂಚರಿಸುತ್ತವೆ. ಮಿಲನ ಸಮಯದಲ್ಲಿ ಗಂಡು-ಹೆಣ್ಣುಗಳ ಸಂಪರ್ಕಕ್ಕೆ ಸಂಜೆ, ಹಗಲು ಹೊತ್ತಿನಲ್ಲಿ ಓಡಾಟ ಇರುತ್ತದೆ. ಈ ಸಮಯದಲ್ಲಿ ಮಾತ್ರ ಇವುಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ : ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ, ಸುಟ್ಟು ಕರಕಲಾದ ಖಾಸಗಿ ಬಸ್!

ಸಾಯಿಸಿದ್ರೆ ಜಾಮೀನು ರಹಿತ ಜೈಲು
ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯೆx ಅಡಿಯಲ್ಲಿ ಹುಲಿಯಷ್ಟೇ ಪ್ರಧಾನ ಆದ್ಯತೆಯನ್ನು ಹೆಬ್ಬಾವುಗಳ ಸಂರಕ್ಷಣೆಗೂ ನೀಡಲಾಗಿದೆ. ವನ್ಯಜೀವಿ ಕಾಯ್ದೆ ಸಂರಕ್ಷಿತ ಉರಗ ಪಟ್ಟಿಯಲ್ಲಿ ಶೆಡ್ನೂಲ್‌1, ಪಾರ್ಟ್‌ 1ರಲ್ಲಿ ಹೆಬ್ಟಾವಿಗೆ ಸ್ಥಾನ ನೀಡಲಾಗಿದೆ. ಅದರಂತೆ ಹೆಬ್ಬಾವುಗಳಿಗೆ ಹಿಂಸೆ ನೀಡಿ, ಹೊಡೆದು ಸಾಯಿಸಿದರೆ ಕಾನೂನು ಪ್ರಕಾರ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತದ ಹೆಬ್ಬಾವುಗಳು ಇದುವರೆಗೆ ಆಹಾರಕ್ಕಾಗಿ ಮನುಷ್ಯರನ್ನು, ಮಕ್ಕಳನ್ನು ನುಂಗಿದ ದಾಖಲೆ ಎಲ್ಲಿಯೂ ನಡೆದಿಲ್ಲ. ಎಲ್ಲ ಹಾವುಗಳಂತೆ ಹಿಡಿಯಲು ಹೋಗಿ ನೋವು ಮಾಡಿದರೆ ಇದು ಸಹ ಕಚ್ಚುತ್ತದೆ. ಇದರಲ್ಲಿ ವಿಷ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು, ಉರಗ ತಜ್ಞರು ತಿಳಿಸಿದ್ದಾರೆ.

ಕೃಷಿ ರಕ್ಷಕ ಹೆಬ್ಬಾವು
ಹೆಬ್ಟಾವುಗಳು ವಾಸ ಮಾಡುತ್ತಿರುವ ಜಾಗವನ್ನು ಆರೋಗ್ಯ ಪೂರ್ಣ ಪರಿಸರ ಎನ್ನುತ್ತಾರೆ. ಈ ಹಿಂದೆ ಉಡುಪಿ ಸುತ್ತಮುತ್ತ ವಿಶಾಲ ಕೃಷಿ ಪ್ರದೇಶಗಳಿದ್ದು, ಹೆಬ್ಬಾವುಗಳ ವಾಸಸ್ಥಾನವೂ ಆಗಿತ್ತು. ಬೆಳೆ ಕಟಾವು ಸಮಯದಲ್ಲಿ ಬೆಳೆ ನಾಶಪಡಿಸಲು ಬರುವ ಇಲಿ, ಹೆಗ್ಗಣಗಳನ್ನು ತಿಂದು ಬೆಳೆ ರಕ್ಷಣೆ ಮಾಡುತ್ತಿದ್ದವು. ಪ್ರಸ್ತುತ ಕೃಷಿ ವಿಮುಖವಾಗುತ್ತಿರುವುದರಿಂದ ಹೆಬ್ಬಾವುಗಳು ಆಹಾರ ಕೊರತೆ ಎದುರಿಸುತ್ತಿದ್ದು ಬೆಕ್ಕು, ಕೋಳಿ, ನಾಯಿಗಳನ್ನು ತಿನ್ನಲು ಜನ ವಸತಿ ಪ್ರದೇಶಕ್ಕೆ ಬರುತ್ತವೆ. ಈ ಸಮಯದಲ್ಲಿ ದೂರದಿಂದಲೇ ಉದ್ದದ ದೋಟಿಯಿಂದ ನೋವು ಮಾಡದಂತೆ ಸ್ವಲ್ಪ ಕಿರುಕುಳ ನೀಡಿದಲ್ಲಿ ಮತ್ತೆ ಹಾವುಗಳು ಆ ಜಾಗದ ಕಡೆಗೆ ತಲೆ ಹಾಕುವುದಿಲ್ಲ ಎನ್ನುತ್ತಾರೆ ಉರಗ ತಜ್ಞ ಗುರುರಾಜ್‌ ಸನಿಲ್‌.

ಇಲಾಖೆಗೆ ತಿಳಿಸಿ
ಹೆಬ್ಬಾವುಗಳು ಜನರಿಗೆ ತೊಂದರೆ ನೀಡುವ ಪ್ರಾಣಿಗಳಲ್ಲ. ಹಾವುಗಳೆಂದರೆ ಜನರಿಗೆ ಆತಂಕ ಇರುತ್ತದೆ. ಇಂಥ ಸಂದರ್ಭದಲ್ಲಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಉರಗ ತಜ್ಞರ ನೆರವಿನೊಂದಿಗೆ ಹೆಬ್ಬಾವುಗಳನ್ನು ರಕ್ಷಿಸಿ ದೂರದ ಅರಣ್ಯಕ್ಕೆ ಸುರಕ್ಷಿತವಾಗಿ ಅವುಗಳನ್ನು ಬಿಡಲಾಗುತ್ತದೆ.

– ಆಶಿಶ್‌ ರೆಡ್ಡಿ, ಡಿಎಫ್ಒ, ಅರಣ್ಯ ಇಲಾಖೆ (ಕುಂದಾಪುರ ವಿಭಾಗ)

ನಿರುಪದ್ರವಿ
ಡಿಸೆಂಬರ್‌ನಿಂದ ಫೆಬ್ರವರಿ ವರೆಗೂ ಹಾವುಗಳ ಮಿಲನ ಸಮಯವಾದ್ದರಿಂದ ಅವುಗಳ ಓಡಾಟ ಹೆಚ್ಚಿರುತ್ತದೆ. ಇತ್ತೀಚೆಗೆ ನಗರ, ಗ್ರಾಮೀಣದ ಜನರ ಒತ್ತಾಯ, ಅರಣ್ಯ ಇಲಾಖೆ ಕೋರಿಕೆಯಂತೆ ಈಗಾಗಲೇ 20ಕ್ಕೂ ಅಧಿಕ ಹೆಬ್ಬಾವುಗಳನ್ನು ರಕ್ಷಿಸಿ ದೂರದ ಕಾಡುಗಳಿಗೆ ಬಿಡಲಾಗಿದೆ. ಹೆಬ್ಟಾವುಗಳು ಅದರ ಪಾಡಿಗೆ ಅದೇ ಪರಿಸರದಲ್ಲಿರುವಂತೆ ಬಿಟ್ಟುಬಿಡಬೇಕು. ಹೆಬ್ಬಾವುಗಳು ಉಪದ್ರವ ಜೀವಿಗಳಲ್ಲ ಮತ್ತು ಅವುಗಳ ಮನುಷ್ಯರನ್ನು ನುಂಗುತ್ತವೆ ಎಂಬ ತಪ್ಪು ನಂಬಿಕೆ ಇಟ್ಟುಕೊಳ್ಳುವುದು ಸರಿಯಲ್ಲ.
– ಗುರುರಾಜ್‌ ಸನಿಲ್‌, ಉರಗ ತಜ್ಞ

– ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.