ಪೈಲಟ್ ಯೋಜನೆ ಇತರೆಡೆಗೂ ವಿಸ್ತರಣೆ: ಸುನಿಲ್ ಕುಮಾರ್
ರಾಜ್ಯದ ಮೊದಲ ಎಂಆರ್‌ಎಫ್ ಘಟಕ ಎ. 3ರಂದು ಲೋಕಾರ್ಪಣೆ
Team Udayavani, Mar 27, 2022, 6:35 AM IST
ಕಾರ್ಕಳ: ಸ್ವಚ್ಛತೆಗೆ ಸಂಬಂಧಿಸಿ ರಾಜ್ಯದ ಮೊದಲ ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಗ್ರಾಮೀಣ ಘಟಕವನ್ನು ಕಾರ್ಕಳದಲ್ಲಿ ಎ. 3ರಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದಲ್ಲಿ ಸಿದ್ಧಗೊಂಡ ಎಂಆರ್‌ಎಫ್ ಘಟಕ ಉದ್ಘಾಟನೆಯ ಪೂರ್ವಭಾವಿಯಾಗಿ ಮಾ. 26ರಂದು ತಾ.ಪಂ. ಕಚೇರಿಯಲ್ಲಿ ಏಳು ತಾಲೂಕುಗಳ ಅಧಿಕಾರಿಗಳು, ಗ್ರಾ.ಪಂ. ಪಿಡಿಒ, ಜನಪ್ರತಿನಿಧಿಗಳ ಸಭೆಯ ಬಳಿಕ ಅವರು ಮಾಹಿತಿ ನೀಡಿದರು. ರಾಜ್ಯದ ಮೊದಲ ಪೈಲಟ್ ಯೋಜನೆ ಇದು. ಸಾರ್ವಜನಿಕರಲ್ಲಿ ಸ್ವಚ್ಛತೆಗೆ ಸಂಬಂಧಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ನಡೆಯಬೇಕು. ಯೋಜನೆ ಇಲ್ಲಿ ಯಶಸ್ಸು ಕಂಡ ಬಳಿಕ ಇತರೆಡೆಗಳಿಗೆ ವಿಸ್ತರಿಸಲಾಗುತ್ತದೆ ಎಂದರು.
ಪೈಲಟ್ ಯೋಜನೆಯಡಿ ರಾಜ್ಯದ ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಎಂಆರ್‌ಎಫ್ ಘಟಕ ತೆರೆಯಲು ನಿರ್ಧರಿಸಲಾಗಿತ್ತು. ಕಾರ್ಕಳದಲ್ಲಿ 3 ಕೋ.ರೂ. ವೆಚ್ಚದಲ್ಲಿ ಘಟಕ ಸಿದ್ಧಗೊಂಡಿದೆ. ಕಾಪು, ಕಾರ್ಕಳ, ಹೆಬ್ರಿ -ಈ 3 ತಾಲೂಕುಗಳ 41 ಗ್ರಾ.ಪಂ.ಗಳಿಂದ ಕಸ ಸಂಗ್ರಹಿಸಿ ಘಟಕಕ್ಕೆ ಬರುತ್ತದೆ. ಇಲ್ಲಿ ತ್ಯಾಜ್ಯಗಳನ್ನು ವರ್ಗೀಕರಿಸಿ ಎರಡು ರೀತಿಯ ಉತ್ಪನ್ನ ಗಳನ್ನು ಉತ್ಪಾದಿಸಲಾಗುತ್ತದೆ. ಹಳ್ಳಿಗಳಲ್ಲಿ ಸ್ಥಳೀಯಾಡಳಿತಗಳ ಹೊರೆ ಇಳಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದರು.
ಉದಯವಾಣಿ ವರದಿ ಪ್ರಕಟಿಸಿತ್ತು
ಜಿ.ಪಂ. ಸಿಇಒ ಡಾ| ನವೀನ್ ಭಟ್, ಜಿ.ಪಂ. ಉಪಕಾರ್ಯದರ್ಶಿ ಕಿರಣ್ ಪಡೆ°ಕರ್, ಯೋಜನಾ ಧಿಕಾರಿ ಶ್ರೀನಿವಾಸ ರಾವ್, ಕಾರ್ಕಳ ತಾ.ಪಂ. ಇಒ ಗುರುದತ್, 7 ತಾಲೂಕುಗಳ ಇಒ, 41 ಗ್ರಾ.ಪಂ. ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು. ರಾಜ್ಯದ ಮೊದಲ ಘಟಕ ಕಾರ್ಕಳದಲ್ಲಿ ಸಿದ್ಧವಾಗುತ್ತಿರುವ ಬಗ್ಗೆ ಆ. 23ರಂದು ಉದಯವಾಣಿ ವರದಿ ಮಾಡಿತ್ತು.
ಕಾರ್ಕಳ ಪ್ರಯೋಗ ಶಾಲೆ
ಕೇಂದ್ರ, ರಾಜ್ಯ ಸರಕಾರದ ಹಲವು ಯೋಜನೆ ಗಳಿಗೆ ಕಾರ್ಕಳ ಪ್ರಯೋಗ ಶಾಲೆಯಾಗಿದೆ. ಎಸ್‌ಎಲ್‌ಆರ್‌ಎಂ ಘಟಕವನ್ನೂ ಮೊದಲಿಗೆ ಕಾರ್ಕಳದಲ್ಲಿ ಆರಂಭಿಸಲಾಗಿತ್ತು. ಬಳಿಕ ಹಲವು ಯೋಜನೆಗಳನ್ನು ಇಲ್ಲಿ ಆರಂಭಿಸಲಾಗಿದೆ. ಅವು ರಾಜ್ಯ, ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.