Uttar Pradesh: ಕಾಳಿಂಗ ಸರ್ಪವನ್ನು ಕೊಂದು ಮಗುವನ್ನು ರಕ್ಷಿಸಿದ ಪಿಟ್ ಬುಲ್ ಶ್ವಾನ!
ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಹರಿದಾಡುತ್ತಿರುತ್ತವೆ.
Team Udayavani, Sep 25, 2024, 12:26 PM IST
ಜಾನ್ಸಿ(ಉತ್ತರಪ್ರದೇಶ): ಮನೆಯ ಗಾರ್ಡ್ ನಲ್ಲಿ ಮನೆಗೆಲಸದ ಮಹಿಳೆಯ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ(King Cobra) ಬಂದಿದ್ದು, ಈ ವೇಳೆ ಮಗು ಕಿರುಚಿಕೊಂಡಿತ್ತು. ಆಗ ಮನೆಯ ಪಿಟ್ ಬುಲ್(Pit Bull) ನಾಯಿ ಓಡಿಬಂದು ಹಾವನ್ನು ಕಚ್ಚಿ ಕೊಲ್ಲುವ ಮೂಲಕ ಮಗುವನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಜಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಮನೆಯ ಗಾರ್ಡನ್ ನ ಒಂದು ಮೂಲೆಯಲ್ಲಿ ಪಿಟ್ ಬುಲ್ ಶ್ವಾನ “ಜೆನ್ನಿ”ಯನ್ನು ಕಟ್ಟಿಹಾಕಲಾಗಿತ್ತು. ಆದರೆ ಹಾವನ್ನು ಕಂಡು ಮಗು ಕಿರುಚಾಡುತ್ತಿರುವುದನ್ನು ಗಮನಿಸಿ ಸರಪಳಿಯನ್ನು ಹರಿದುಕೊಂಡು ಬಂದು ಹಾವನ್ನು ಕಚ್ಚಿ ಕೊಂದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ವೈರಲ್ ಆಗಿದೆ.
ವಿಡಿಯೋದಲ್ಲಿ, ಪಿಟ್ ಬುಲ್ ಕಾಳಿಂಗ ಸರ್ಪದ ತಲೆಯನ್ನು ಕಚ್ಚಿ ಬಲವಾಗಿ ಅಲ್ಲಾಡಿಸಿ ನೆಲಕ್ಕೆ ಬಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ಸುಮಾರು ಐದು ನಿಮಿಷಗಳ ಕಾಲ ಕಚ್ಚಿ ಎಳೆದಾಡಿದ ಪರಿಣಾಮ ಹಾವು ಸಾವನ್ನಪ್ಪಿರುವುದು ವಿಡಿಯೋದಲ್ಲಿದೆ.
ಈವರೆಗೆ 8-10 ಹಾವನ್ನು ಕೊಂದ ಪಿಟ್ ಬುಲ್ ಶ್ವಾನ!
ಶ್ವಾನ ಜೆನ್ನಿ (Jenny) ಇದೇ ಮೊದಲ ಬಾರಿಗೆ ಹಾವನ್ನು ಕೊಂದಿಲ್ಲ. ಈಗಾಗಲೇ 8-10 ಹಾವನ್ನು ಕೊಂದಿದ್ದು, ಜೀವವನ್ನು ಉಳಿಸುವ ಕೆಲಸ ಮಾಡಿದೆ ಎಂದು ಪೆಟ್ ಬುಲ್ ಮಾಲೀಕ ಪಂಜಾಬ್ ಸಿಂಗ್ ತಿಳಿಸಿದ್ದಾರೆ.
झांसी से एक हैरान करदेने वाला एक वीडियो सामने आया है.. जहां पिटबुल ने जहरीले सांप से बच्चों की जान बचाई.. सांप को दांतों से चबाकर मार डाला..शिवगणेश बिहार कॉलोनी के मकान में घुसा था सांप..#Jhansi #PitBull pic.twitter.com/n31fdyG6bU
— Vinit Tyagi(Journalist) (@tyagivinit7) September 24, 2024
ಮಂಗಳವಾರ (ಸೆ.24) ನಾನು ಮನೆಯಲ್ಲಿ ಇರಲಿಲ್ಲವಾಗಿತ್ತು. ಆದರೆ ನನ್ನ ಮಗ ಮತ್ತು ಕೆಲಸದವರ ಮಕ್ಕಳು ಇದ್ದಿದ್ದರು. ನಮ್ಮ ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆ ಗಾರ್ಡ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಜೆನ್ನಿ 8-10 ಹಾವನ್ನು ಕೊಂದಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.