ವ್ಯಾಪಾರಿ ಹಡಗುಗಳ ಉತ್ತೇಜನಕ್ಕೆ ಯೋಜನೆ
Team Udayavani, Feb 1, 2021, 12:30 AM IST
ದೇಶದಲ್ಲಿ ವ್ಯಾಪಾರಿ ಹಡಗುಗಳಿಗೆ ಉತ್ತೇಜನ ನೀಡಲು ಸಚಿವಾಲಯಗಳು ಮತ್ತು ಕೇಂದ್ರದ ಸಾರ್ವಜನಿಕ ವಲಯ ಉದ್ದಿಮೆಗಳು (ಸಿಪಿಎಸ್‌ಸಿ) ಆಹ್ವಾನಿಸುವ ಜಾಗತಿಕ ಟೆಂಡರ್‌ಗಳಲ್ಲಿ ಭಾರತೀಯ ಹಡಗು ಕಂಪನಿಗಳಿಗೆ ಸಬ್ಸಿಡಿ ಒದಗಿಸಲು ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐದು ವರ್ಷಗಳಲ್ಲಿ 1,624 ಕೋಟಿ ರೂ. ಹಣ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆಯು ಜಾಗತಿಕ ಶಿಪ್ಪಿಂಗ್‌ನಲ್ಲಿ ಭಾರತೀಯ ಕಂಪನಿಗಳ ಪಾಲುದಾರಿಕೆ ಹೆಚ್ಚಿಸುವುದರ ಜೊತೆಗೆ ಭಾರತೀಯ ಕಡಲತೀರ ದವರಿಗೆ ತರಬೇತಿ ಹಾಗೂ ಉದ್ಯೋಗದ ವಿಪುಲ ಅವಕಾಶಗಳನ್ನು ಒದಗಿಸಲಿದೆ.
ಬೃಹತ್ ಬಂದರುಗಳು ತಮ್ಮ ಕಾರ್ಯಾಚರಣಾ ಸೇವೆಗಳ ನಿರ್ವಹಣೆಗೆ ಸ್ವಂತ ಸಾಮಾರ್ಥಯದ ಬದಲಿಗೆ ಖಾಸಗಿ ಸಹಭಾಗಿತ್ವದತ್ತ ವಾಲುತ್ತಿವೆ. ಈ ಉದ್ದೇಶಕ್ಕಾಗಿ ದೊಡ್ಡ ಬಂದರುಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ನಿರ್ವಹಣೆಗೆ 2021-22ನೇ ಸಾಲಿನಲ್ಲಿ 2 ಸಾವಿರ ಕೋಟಿ ರೂ. ಮೊತ್ತದ 7 ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.
ಹಡಗು ಮರುಬಳಕೆ ಸಾಮರ್ಥಯ ದ್ವಿಗುಣ
“ಹಡಗುಗಳ ಮರುಬಳಕೆ ಕಾಯ್ದೆ-2019′ ಜಾರಿಗೆ ತರುವ ಮೂಲಕ ಭಾರತವು ಹಾಂಕಾಂಗ್ ಇಂಟರ್‌ನ್ಯಾಷನ್ ಕನ್ವೇನ್‌ಷನ್‌ಗೆ ಸೇರಿಕೊಂಡಿದೆ. ಗುಜರಾತಿನ ಅಲಾಂಗ್‌ನಲ್ಲಿ ಈಗಾಗಲೇ ಸುಮಾರು 90 ಹಡಗು ಮರುಬಳಿಕೆ ಯಾರ್ಡ್‌ಗಳು ಹಾಂಕಾಂಗ್ ಇಂಟರ್‌ನ್ಯಾಷನ್ ಕನ್ವೇನ್‌ಷನ್ ಗುರಿ ಸಾಧಿಸಿವೆ. ಮುಂದುವರಿದು ಯುರೋಪ್ ಮತ್ತು ಜಪಾನ್‌ನಿಂದ ಹೆಚ್ಚು ಹಡಗುಗಳನ್ನು ಭಾರತಕ್ಕೆ ತರಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುವುದು. ಹಡಗು ಮರುಬಳಕೆ ಪ್ರಮಾಣ ಈಗಿರುವ 4.5 ಎಲ್‌ಡಿಟಿ ಇದನ್ನು 2024ರ ವೇಳೆಗೆ ದ್ವಿಗುಣಗೊಳಿಸಲಾಗುವುದು. ಇದು ನಮ್ಮ ಯುವಕರಿಗೆ ಹೆಚ್ಚುವರಿ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.