ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಮೋದಿ ಸೂಚನೆ
Team Udayavani, Jan 22, 2022, 9:15 PM IST
ನವದೆಹಲಿ: ಜನರ ಜೀವನ ಹಸನಾಗಿಸುವಂಥ ಆಡಳಿತವನ್ನು ಒಂದು ನಿರ್ದಿಷ್ಟ ಗಡುವಿನೊಳಗೆ ಜಾರಿಗೊಳಿಸುವ ನಿರ್ಧಾರವನ್ನು ಎಲ್ಲಾ ಜಿಲ್ಲಾಡಳಿತಗಳು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಕೆಲವು ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮೋದಿ, “ಜನರಿಗೆ ಸರ್ಕಾರದ ಸೇವೆಗಳು, ಸೌಕರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ತಲುವುದು ಹಾಗೂ ಅವರ ಜೀವನ ಮಟ್ಟ ಸುಧಾರಿಸುವುದು ಶೇ. 100 ಕರಾರುವಾಕ್ ಆಗಿ ನಡೆಯುವಂತಾದಾಗ ಮಾತ್ರ ದೇಶದ ಅಭಿವೃದ್ಧಿ ಕನಸು ನನಸಾಗುತ್ತದೆ. ಇಂಥ ವ್ಯವಸ್ಥೆಯನ್ನು ನಿಗದಿತ ಅವಧಿಯಲ್ಲಿ ಕಾರ್ಯಗತಗೊಳಿಸುವುದಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳು ಪಣ ತೊಡಬೇಕು” ಎಂದು ಸೂಚಿಸಿದರು.
ಇದನ್ನೂ ಓದಿ:ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ
ಇದೇ ವೇಳೆ, ಪ್ರತಿಯೊಂದು ಜಿಲ್ಲೆಯೂ ಮಹತ್ವಾಕಾಂಕ್ಷೆಯ ಜಿಲ್ಲೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಮೋದಿ, ಅಭಿವೃದ್ಧಿಯ ಮಹತ್ವಾಕಾಂಕ್ಷೆಯನ್ನು ಹೊಂದಿರುವಂಥ ಜಿಲ್ಲೆಗಳು ದೇಶದ ಅಭಿವೃದ್ಧಿಗೆ ಇರುವ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕುತ್ತವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.