ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆಂದು ಹುಸಿ ಕರೆ; ಮಾಜಿ ಸೈನಿಕ ಅರೆಸ್ಟ್!
Team Udayavani, Apr 27, 2019, 10:44 AM IST
ಬೆಂಗಳೂರು : 19 ಮಂದಿ ಉಗ್ರರು ನುಸುಳಿದ್ದಾರೆ ಎಂದು ಹುಸಿ ಕರೆ ಮಾಡಿದ ನಿವೃತ್ತ ಸೈನಿಕರೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಶನಿವಾರ ನಡೆದಿದೆ.
65 ರ ಹರೆಯದಸ್ವಾಮಿ ಸುಂದರ ಮೂರ್ತಿ ಬಂಧನಕ್ಕೊಳಗಾಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಉಗ್ರರು ನಸುಳಿರುವ ಕುರಿತು ಕರೆ ಮಾಡಿದ ಬೆನ್ನಲ್ಲೇ ಜಾಗೃತರಾದ ಕೋಲಾರ ಮತ್ತು ಬೆಂಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದಿದ್ದರು.
ಬೆಂಗಳೂರು ಹೊರವಲಯದ ಅವಲಹಳ್ಳಿ ಎಂಬಲ್ಲಿ ಸುಂದರ ಮೂರ್ತಿಯನ್ನು ಬಂಧಿಸಿದ್ದಾರೆ.
ಸಂದರಮೂರ್ತಿ ಮುನಿವೆಂಕಟಪ್ಪ ಲೇಔಟ್‌ನ ನಿವಾಸಿಯಾಗಿದ್ದು, ರಾಜ್‌ಗೊàಪಾಲ್ ಎನ್ನುವವರ ಮಗ. ಸಂದರ ಮೂರ್ತಿ ಅವರ ಮಗನೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು.
ನಾನು ಶ್ರೀಲಂಕಾದಲ್ಲಿ ಭೀಕರ ಸ್ಫೋಟಗಳು ನಡೆದ ಬಳಿಕ ರಾಜ್ಯಕ್ಕೂ ಉಗ್ರರು ನುಸುಳಿರಬಹುದು ಎಂದು ಅಂದಾಜಿಸಿದೆ ಎಂದು ಬಂಧನದ ಬಳಿಕ ಸುಂದರಮೂರ್ತಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.
ಸುಂದರಮೂರ್ತಿ ಅವರು 19 ಉಗ್ರರು ತಮಿಳುನಾಡಿನ ರಾಮಾನಾಥಪುರಂನಲ್ಲಿ ಅಡಗಿದ್ದಾರೆ ಎಂದು ಕರೆ ಮಾಡಿದ್ದರು. ಕರೆ ಬಂದ ಬಳಿಕ ಡಿಜಿ-ಐಜಿಪಿ ಅವರು ಎಲ್ಲಾ ಕಡೆಗಳಿಗೆ ಕರೆ ಮಾಡಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.