ಬೀದಿ ಬದಿಯ ಮಕ್ಕಳಿಗೆ ಆಸರೆಯಾಗಿದೆ “ಪೊಲೀಸ್ ಪಾಠ ಶಾಲೆ”..!
Team Udayavani, Aug 21, 2019, 5:30 PM IST
ಅಹಮದಬಾದ್ : ಶಿಕ್ಷಣ ಪ್ರತಿ ಮಕ್ಕಳ ಹಕ್ಕು. ಆದರೆ ಪ್ರತಿಯೊಬ್ಬರಿಗೂ ದಕ್ಕುವ ಹಕ್ಕಲ್ಲ. ಭಾರತ ಎಷ್ಟೇ ಮುಂದುವರೆದರೂ, ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರೂ, ಕೆಲ ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಬೀದಿ ಬದಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂಥವರ ಏಳಿಗೆಗಾಗಿ ನೂರಾರು ಸಂಘ ಸಂಸ್ಥೆಗಳು ದುಡಿಯುತ್ತಿದೆ. ಇದೀಗ ಗುಜುರಾತಿನ ಅಹಮದಬಾದ್ ಟ್ರಾಫಿಕ್ ಪೊಲೀಸರು ಬೀದಿ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಹೌದು. ಟ್ರಾಫಿಕ್ ಪೊಲೀಸರನ್ನು ವಾಹನ ತಡೆದು ದಂಡ ಹಾಕುವುದನ್ನು ನೋಡಿದ್ದೇವೆ. ಇಲ್ಲಿನ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಶಿಕ್ಷಣದಿಂದ ವಂಚಿತರಾಗಿರುವ ಫುಟ್ ಪಾತ್ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಆಹಾರವನ್ನು ನೀಡುತ್ತಿದೆ. ನಗರದ ಮೂರು ಕಡೆಗಳಲ್ಲಿ “ಪೊಲೀಸ್ ಪಾಠ ಶಾಲಾ” ಎನ್ನುವ ಕೇಂದ್ರವನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ.
ಸಂಚಾರ ಪೊಲೀಸ್ ಎ.ಸಿ.ಪಿ.ಅಂಕಿತ್ ಪಾಟೀಲ್ ಹೇಳುವ ಪ್ರಕಾರ “ಬೀದಿ ಬದಿಯಲ್ಲಿ ಅಲೆಯುವ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿರುತ್ತವೆ, ಅಂಥ ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರಲ್ಲಿ ವಿದ್ಯೆಯ ಬಗ್ಗೆ ಜ್ಞಾನವನ್ನು ಬಿತ್ತಿದರೆ ಅವರು ತಾವು ಆಗಿಯೇ ಪ್ರತಿನಿತ್ಯ ಶಾಲೆಗೆ ಬರುತ್ತಾರೆ” ಎನ್ನುತ್ತಾರೆ.
Gujarat: Ahmedabad City Traffic Police imparts free education to children residing on footpaths under their project called ‘Police Pathshala’. Around 150-200 children are getting education in three centers across the city. pic.twitter.com/YydKzeKMrJ
— ANI (@ANI) August 21, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.