America Election:ಚುನಾವಣೆಯಲ್ಲಿ “ಕಡಿಮೆ ದುಷ್ಟರ”ನ್ನು ಆಯ್ಕೆ ಮಾಡಿ: ಪೋಪ್‌ ಫ್ರಾನ್ಸಿಸ್‌

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳು ಜೀವ ವಿರೋಧಿ ನಿಲುವು ತಳೆದಿದ್ದಾರೆ...

Team Udayavani, Sep 14, 2024, 1:13 PM IST

America Election:ಚುನಾವಣೆಯಲ್ಲಿ “ಕಡಿಮೆ ದುಷ್ಟರ”ನ್ನು ಆಯ್ಕೆ ಮಾಡಿ: ಪೋಪ್‌ ಫ್ರಾನ್ಸಿಸ್‌

ವ್ಯಾಟಿಕನ್:‌ ಮುಂಬರುವ ಅಮೆರಿಕದ ಅಧ್ಯಕ್ಷೀಯ(U.S. Presidential Election) ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್‌ ಫ್ರಾನ್ಸಿಸ್‌(Pope Francis), ಗರ್ಭಪಾತ ಮತ್ತು ವಲಸೆ ಬಗ್ಗೆ ಜೀವ ವಿರೋಧಿ ನಿಲುವು ತಳೆದಿರುವುದಾಗಿ ಆರೋಪಿಸಿರುವ ಅವರು, ಅಮೆರಿಕದ ಕ್ಯಾಥೋಲಿಕ್ಸ್‌ ಯಾರು ಕಡಿಮೆ ದುಷ್ಟರೋ ಅವರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.

ಅಧ್ಯಕ್ಷ ಸ್ಥಾನದ ಇಬ್ಬರೂ ಅಭ್ಯರ್ಥಿಗಳು ಜೀವ ವಿರೋಧಿಯಾಗಿದ್ದಾರೆ. ಒಬ್ಬರು ವಲಸಿಗರನ್ನು(ಟ್ರಂಪ್) ಹೊರಗಟ್ಟುವುದಾಗಿ ಹೇಳುತ್ತಾರೆ, ಮತ್ತೊಬ್ಬರು ಹುಟ್ಟುವ ಶಿಶುವನ್ನು ಕೊಲ್ಲುವ ಬಗ್ಗೆ(ಹ್ಯಾರಿಸ್) ಮಾತನಾಡುತ್ತಾರೆ ಎಂದು ಪೋಪ್‌ ಹೇಳಿದ್ದಾರೆ.

ನಾಲ್ಕು ದೇಶಗಳ ಪ್ರವಾಸ ಮುಗಿಸಿ ರೋಮ್‌ ಗೆ ತೆರಳುತ್ತಿದ್ದ ವೇಳೆ ಏರ್‌ ಬೋರ್ನ್‌ (Airborne news) ಕಾನ್ಫರೆನ್ಸ್‌ ನಲ್ಲಿ ಅಮೆರಿಕನ್‌ ಕ್ಯಾಥೋಲಿಕರು ಯಾರಿಗೆ ಮತ ಚಲಾಯಿಸಬೇಕೆಂದು ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ ಪೋಪ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅಮೆರಿಕನ್‌ ಪ್ರಜೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಹೀಗಾಗಿ ನಾನು ಮತ ಚಲಾಯಿಸುವ ಪ್ರಶ್ನೆ ಇಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.

ರಿಪಬ್ಲಿಕನ್‌ ಅಭ್ಯರ್ಥಿ ಡೋನಾಲ್ಡ್‌ ಟ್ರಂಪ್‌ ಅಥವಾ ಡೆಮೋಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಪೋಪ್‌, ಅಮೆರಿಕ ಚುನಾವಣೆಯಲ್ಲಿ ಗರ್ಭಪಾತ ಮತ್ತು ವಲಸೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ವಿಚಾರ ಕ್ಯಾಥೋಲಿಕ್‌ ಚರ್ಚ್‌ ಗಳಿಗೆ ಹೆಚ್ಚು ಕಳವಳಕಾರಿಯಾಗಿದೆ ಎಂದು ಪೋಪ್‌ ಹೇಳಿದ್ದಾರೆ.

ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಮತ ಚಲಾಯಿಸುವ ಮೊದಲು ಯಾರು ಕಡಿಮೆ ಜೀವ ವಿರೋಧಿ ಎಂಬುದನ್ನು ಆಲೋಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು…ಅದು ಮಹಿಳೆಯೋ ಅಥವಾ ಪುರುಷನೋ? ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪೋಪ್‌ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

canada

Canada; ಟ್ರಾಡೊ ಸರಕಾರ ಪತನಕ್ಕೆ ಸಿದ್ಧ: ಸಂಸದ ಘೋಷಣೆ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.