ಮಾಸ್ಕ್, ಪಿಪಿಇ ಕಿಟ್ ಧರಿಸಿ ಬಂದ ಪಾದ್ರಿ
Team Udayavani, May 31, 2020, 4:22 PM IST
ಇವಾನೋಫ್ರಾನ್ಸೆವಿಸ್ಕ್ (ಉಕ್ರೇನ್): ಕೋವಿಡ್ನಿಂದಾಗಿ ದೇಗುಲಗಳು, ಚರ್ಚ್, ಮಸೀದಿಗಳು ಬಂದ್ ಆಗಿವೆ. ಅಲ್ಲಿನ ಧಾರ್ಮಿಕ ನೇತಾರರಿಗೂ ಪ್ರಾರ್ಥನೆ ಸಹಿತ ಯಾವುದೇ ಕೆಲಸ ಇಲ್ಲ. ಆದರೆ ರೋಕ್ಮನ್ ಹೆಸರಿನ ಉಕ್ರೇನ್ ಈ ಪಾದ್ರಿ ಸುಮ್ಮನೆ ಕುಳಿತಿಲ್ಲ. ದೇಹಕ್ಕೊಂದು ಪಿಪಿಇ ಕಿಟ್, ಕೈಗೆ ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್ಗಳನ್ನು ಹಾಕಿಕೊಂಡು ತಿರುಗಾಡುತ್ತಿದ್ದಾರೆ.
ಇವರು ಹೀಗೆ ತಿರುಗಾಡುತ್ತಿರುವುದು ಕೋವಿಡ್ಗೆ ಹೆದರಿಯಲ್ಲ. ಬದಲಿಗೆ ಕೋವಿಂಡ್ ಸೋಂಕಿತರು ದಾಖಲಾಗಿರುವ ಆಸ್ಪತ್ರೆಗಳಿಗೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಧಾರ್ಮಿಕ, ಅಧ್ಯಾತ್ಮಿಕ, ಜೀವನ ಸಂದೇಶಗಳನ್ನು ತಿಳಿಸುತ್ತಿದ್ದಾರೆ. ಈ ಮೂಲಕ ರೋಗಿಗಳು ಶೀಘ್ರ ಚೇತರಿಕೆಯಾಗುವುದರೊಂದಿಗೆ ಚಿಕಿತ್ಸೆ ಪಡೆಯುವ ವೇಳೆ ಉಲ್ಲಸಿತರಾಗಿರುತ್ತಾರೆ ಎಂದು ಹೇಳುತ್ತಾರೆ. ಮೇ 22ರಿಂದ ಇವರು ಈ ಧಾರ್ಮಿಕ ಕೆಲಸ ಶುರುಮಾಡಿದ್ದು, ರೋಗಿಗಳನ್ನು ಭೇಟಿ ಮಾಡುತ್ತಾರೆ. ರೋಗಿಗಳಿಗೆ ಪ್ರಾರ್ಥನೆ ಅಗತ್ಯವಿದೆ. ಅವರೊಂದಿಗೆ ಮಾತುಕತೆ ನಡೆಸುವವರು ಯಾರೂ ಇಲ್ಲ. ರೋಕ್ಮನ್ ಅವರು ಕೈಯಲ್ಲಿ ಶಿಲುಬೆ ಹಿಡಿದು ರೋಗಿಗಳೊಂದಿಗೆ ಮಾತುಕತೆ ನಡೆಸಿ, ಸಂದೇಶಗಳನ್ನು ನೀಡುತ್ತಾರೆ. ಇದು ಹಲವಾರು ರೋಗಿಗಳಿಗೆ ಖುಷಿ ತಂದಿದೆ. ರೋಕ್ಮನ್ ಅವರು ಉಕ್ರೇನ್ನ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಸಮೂಹಗಳಿಗೆ ಸೇರಿದವರಾಗಿದ್ದು, ಈ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.