ಸದನ ಬಿಕ್ಕಟ್ಟು ಪರಿಹಾರಕ್ಕೆ ಸಭೆ ಸೂತ್ರ? 18 ತಿಂಗಳ ಅನಂತರ ನಡೆಯುತ್ತಿರುವ ಅಧಿವೇಶನ
Team Udayavani, Jul 31, 2021, 7:05 AM IST
ಹೊಸದಿಲ್ಲಿ: ಮುಂಗಾರು ಅಧಿವೇಶನ ಶುರುವಾಗಿ ಶುಕ್ರವಾರಕ್ಕೆ 2 ವಾರಗಳು ಪೂರ್ತಿಯಾಗಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಗಮವಾಗಿ ಕಲಾಪಗಳು ನಡೆದಿಲ್ಲ. ಸರಿ ಸುಮಾರು 43 ಮಸೂದೆಗಳ ಪೈಕಿ ಅನುಮೋದನೆ ಪಡೆದದ್ದು ಕೇವಲ ಎಂಟು. ಆ.13ರಂದು ಅಧಿವೇಶನದ ಕೊನೆಯ ದಿನ. ಹೀಗಾಗಿ, ಒಟ್ಟು ಹತ್ತು ದಿನಗಳು ಮಾತ್ರ ಕಲಾಪ ನಡೆಸಲು ಸಿಗಲಿದೆ.
ಉಳಿದ ಅವಧಿಯಲ್ಲಾದರೂ ಸುಗಮ ಕಲಾಪ ನಡೆಸಿ, ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಎರಡೂ ಸದನಗಳ ವಿಪಕ್ಷಗಳ ನಾಯಕರ ಜತೆಗೆ ಸಭೆ ನಡೆಸಲು ಸರಕಾರ ನಿರ್ಧರಿಸಿದೆ. ಹೆಸರು ಬಹಿರಂಗಪಡಿಸ ಲಿಚ್ಛಿಸದ ವಿಪಕ್ಷ ನಾಯಕರ ಪ್ರಕಾರ ಸರಕಾರದ ಸಭೆಯಲ್ಲಿ ಭಾಗವಹಿಸಲಾಗುತ್ತದೆ. ಆದರೆ ಪೆಗಾಸಸ್ ಮತ್ತು ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಯಾಗಬೇಕು ಎಂಬ ಅಂಶವನ್ನು ಪ್ರಸ್ತಾವಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿ ಕಾರ್ಜುನ ಖರ್ಗೆ ಜತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಗುರುವಾರ ಮಾತುಕತೆ ನಡೆಸಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಿ ದ್ದಾರೆ. ಸೋಂಕು ದೇಶಕ್ಕೆ ಧಾಂಗುಡಿ ಇರಿಸಿದ ಬಳಿಕ ಬರೋಬ್ಬರಿ 18 ತಿಂಗಳ ಅನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ.
ಸೋಮವಾರಕ್ಕೆ ಕಲಾಪ: ಲೋಕಸಭೆಯಲ್ಲಿ ಶುಕ್ರವಾರವೂ ಪೆಗಾಸಸ್, ಕೃಷಿ ಕಾಯ್ದೆ ವಿರುದ್ಧದ ಗಲಾಟೆಯಿಂದಾಗಿ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ಬಳಿಕ ಎರಡು ಮಸೂದೆಗಳನ್ನು ಕೋಲಾಹಲದ ನಡುವೆಯೇ ಮಂಡಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಮಧ್ಯಾಹ್ನ 2.30ಕ್ಕೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಬೇಕಾಯಿತು. ಮೇಲ್ಮನೆ ಯಲ್ಲಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ ಸೇರಿದಂತೆ 2 ಮಸೂದೆಗಳನ್ನು ಮಂಡಿಸಲಾಗಿದೆ.
ದಾಖಲೆ ಇಲ್ಲದವರಿಗೆ ಲಸಿಕೆ: ಜು.26ರ ವರೆಗೆ ಕೋವಿನ್ ವೆಬ್‌ಸೈಟ್ ಮೂಲಕ ಯಾವುದೇ ದಾಖಲೆಗಳನ್ನು ಹೊಂದಿಲ್ಲದೇ ಇರುವ 3.8 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಈ ಬಗ್ಗೆ ರಾಜ್ಯಸಭೆಗೆ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತೀ ಪ್ರವೀಣ್ ಪವಾರ್ ಮಾಹಿತಿ ನೀಡಿದ್ದಾರೆ. ಯಾವುದೇ ಫೋಟೋ ಸಹಿತ ಗುರುತಿನ ಚೀಟಿ ಇಲ್ಲದವರಿಗೆ ಕೂಡ ಲಸಿಕೆ ನೀಡಲು ಕೇಂದ್ರ ಆದೇಶ ನೀಡಿತ್ತು.
ಸದನ ಸಾಧನೆ
ಶೇ.23 ಲೋಕಸಭೆ ಕಲಾಪ
ಶೇ.13 ರಾಜ್ಯಸಭೆ ಕಲಾಪ
08 ಅಂಗಿಕಾರಗೊಂಡ ಮಸೂದೆಗಳು
10 ಬಾಕಿ ಉಳಿದಿರುವ ಕಲಾಪದ ದಿನಗಳು
ಆ.13 ಕೊನೇಯ ದಿನ
ಜನಪರ ಚರ್ಚೆಗೆ ಸಿದ್ಧ
ಕೇಂದ್ರ ಸರಕಾರ ಸಂಸತ್‌ನಲ್ಲಿ ಜನ ಪರ-ಹಿತ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಪೆಗಾಸಸ್ ಚರ್ಚೆಯ ವಿಷಯವೇ ಅಲ್ಲ. ಈ ನಿಟ್ಟಿನಲ್ಲಿ ವಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ ಎಂದು ದೂರಿದ್ದಾರೆ. ಜನರಿಗೆ ಅನುಕೂಲ ವಾಗುವ ಕೆಲವು ಮಸೂದೆಗಳನ್ನು ಚರ್ಚೆ ನಡೆಸಿಯೇ ಅಂಗೀಕಾರ ಮಾಡುವುದು ಸರಕಾರ ಇರಾದೆ ಎಂದರು ಸಚಿವ ಜೋಶಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.