ಕ್ರಿಕೆಟ್ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ
Team Udayavani, May 15, 2021, 12:35 AM IST
ಮುಂಬಯಿ : ಕ್ರಿಕೆಟ್ ಬಿಡುವಿನ ವೇಳೆ ಗೋವಾದತ್ತ ಕಾರಿನಲ್ಲಿ ಟೂರ್ ಹೊರಟಿದ್ದ ಆರಂಭಕಾರ ಪೃಥ್ವಿ ಶಾ ಅವರನ್ನು ಪೊಲೀಸರು ತಡೆದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ದ್ವಿತೀಯ ಅಲೆ ಗಂಭೀರ ಮಟ್ಟದಲ್ಲಿರುವ ಕಾರಣ ಲಾಕ್‌ಡೌನ್ ಹೇರಲಾಗಿದೆ. ರಾಜ್ಯದೊಳಗೂ ಜನರು ಸಕಾರಣವಿಲ್ಲದೆ ತಿರುಗುವಂತಿಲ್ಲ. ಹೊರ ರಾಜ್ಯಕ್ಕೆ ತೆರಳಬೇಕಾದರೆ ಸ್ಥಳೀಯ ಆಡಳಿತದಿಂದ ಇ-ಪಾಸ್ ಪಡೆಯಬೇಕಾದುದು ಅಗತ್ಯ.
ಇಂಥ ಪರಿಸ್ಥಿತಿಯಲ್ಲಿ ರಜಾ ದಿನಗಳನ್ನು ಕಳೆಯಲು ಕೊಲ್ಹಾಪುರ ಮಾರ್ಗವಾಗಿ ಗೋವಾದತ್ತ ಪ್ರಯಾಣ ಬೆಳೆಸಿದ ಪೃಥ್ವಿ ಶಾ ಅವರನ್ನು ಸಿಂಧುದುರ್ಗ ಜಿಲ್ಲೆಯ ಅಂಬೋಲಿಯಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅವರ ಬಳಿ ಪಾಸ್ ಕೇಳಿದ್ದಾರೆ. ಆದರೆ ಶಾ ಬಳಿ ಪಾಸ್ ಇರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟಿಗನಾದರೂ ಅವರಿಗೆ ಯಾವುದೇ ರಿಯಾಯಿತಿ ತೋರದ ಪೊಲೀಸರು ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಇದನ್ನೂ ಓದಿ :ವೃದ್ಧಿಮಾನ್ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್; ಮೈಕಲ್ ಹಸ್ಸಿ ಫಲಿತಾಂಶ ನೆಗೆಟಿವ್
ಅಲ್ಲಿಂದಲೇ ಪಾಸ್‌ಗೆ ಅರ್ಜಿ
ಕೊನೆಗೆ ಪೃಥ್ವಿ ಶಾ ಮೊಬೈಲ್ ಮೂಲಕ ಇ-ಪಾಸ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸಿ ಇದನ್ನು ಪಡೆಯುವಲ್ಲಿ ಯಶಸ್ವಿಯಾದರು. ಅನಂತರವೇ ಅವರಿಗೆ ಪ್ರಯಾಣ ಮುಂದುವರಿಸಲು ಪೊಲೀಸರು ಅನುಮತಿ ನೀಡಿದರು. ಈ ಎಲ್ಲ ನಿಯಮ ಹಾಗೂ ಪ್ರಕ್ರಿಯೆಯಿಂದಾಗಿ ಪೃಥ್ವಿ ಶಾ ಪ್ರಯಾಣ ಒಂದು ಗಂಟೆಯಷ್ಟು ವಿಳಂಬಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.