ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆಯೇ ಪ್ರವಿಣ್ ತಾಂಬೆ
Team Udayavani, Sep 13, 2020, 7:00 PM IST
ಕೋಲ್ಕತಾ: ಅತೀ ಹಿರಿಯ ಕ್ರಿಕೆಟಿಗ ಪ್ರವೀಣ್ ತಾಂಬೆ ಮತ್ತೆ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಸಹಾಯಕ ಸಿಬಂದಿಯಾಗಿ.
ತಂಡಕ್ಕೆ ತಾಂಬೆ ಅವರಂಥ ಹಿರಿಯರ ಮಾರ್ಗದರ್ಶನದ ಅಗತ್ಯವನ್ನು ಮನಗಂಡು ಫ್ರಾಂಚೈಸಿಯ ಸಿಇಒ ವೆಂಕಿ ಮೈಸೂರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
2020ರ ಐಪಿಎಲ್ ಹರಾಜಿನಲ್ಲಿ 48 ವರ್ಷದ ಪ್ರವೀಣ್ ತಾಂಬೆ ಅವರನ್ನು ಕೆಕೆಆರ್ 20 ಲಕ್ಷ ರೂ.ಗೆ ಬಿಡ್ ಮಾಡಿ ಖರೀದಿಸಿತ್ತು. ಆದರೆ ವಿದೇಶಿ ಕ್ರಿಕೆಟ್ ಲೀಗ್‌ನಲ್ಲೂ ಪಾಲ್ಗೊಳ್ಳುತ್ತಿರುವ ಕಾರಣ ಅವರಿಗೆ ಬಿಸಿಸಿಐ ಐಪಿಎಲ್ ನಿಷೇಧ ಹೇರಿತ್ತು. ಕೇವಲ ನಿವೃತ್ತ ಕ್ರಿಕೆಟಿಗರಷ್ಟೇ ವಿದೇಶಿ ಲೀಗ್‌ಗಳಲ್ಲಿ ಆಡಬಹುದೆಂಬುದು ಬಿಸಿಸಿಐ ನಿಯಮವಾಗಿದೆ.
ಸಿಪಿಎಲ್‌ನಲ್ಲಿ ಆಟ
ಬಳಿಕ ಪ್ರವೀಣ್ ತಾಂಬೆ “ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್) ತಂಡವನ್ನು ಪ್ರತಿನಿಧಿಸಿದರು. ಸಿಪಿಎಲ್‌ನಲ್ಲಿ ಆಡಿದ ಮೊದಲ ಭಾರತೀಯನೆಂಬ ಹಿರಿಮೆಗೂ ಪಾತ್ರರಾದರು. ಕೈರನ್ ಪೊಲಾರ್ಡ್ ನಾಯಕತ್ವದ ಟಿಕೆಆರ್ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿತು. ವಯಸ್ಸನ್ನೂ ಮೀರಿ ಗಮನಾರ್ಹ ಪ್ರದರ್ಶನ ನೀಡಿದ ತಾಂಬೆ ಈಗ ಕೆಕೆಆರ್ ಸಿಇಒ ಅವರ ಗಮನ ಸೆಳೆದಿದ್ದಾರೆ.
“ತಾಂಬೆ ಅವರ ಸಕಾರಾತ್ಮಕ ಚಿಂತನೆ, ಜೀವನ ಉತ್ಸಾಹವೆಲ್ಲ ಟಿಕೆಆರ್ ಕ್ರಿಕೆಟಿಗರ ಮೇಲೆ ಉತ್ತಮ ಪರಿಣಾಮ ಬೀರಿದೆ. ಅವರ ಫೀಲ್ಡಿಂಗ್, ಬೌಲಿಂಗ್ ಕೂಡ ಯಾವುದೇ ಯುವ ಆಟಗಾರರಿಗೆ ಕಡಿಮೆ ಇರಲಿಲ್ಲ. ಅವರ ಈ ಉತ್ಸಾಹ ನಮ್ಮ ಆಟಗಾರರಿಗೂ ಸ್ಫೂರ್ತಿ ಆಗಬೇಕಿದೆ. ಹೀಗಾಗಿ ತಾಂಬೆ ಕೆಕೆಆರ್ ತಂಡೊಂದಿಗೆ ಇರಲಿದ್ದಾರೆ’ ಎಂಬುದಾಗಿ ವೆಂಕಿ ಮೈಸೂರ್ ಹೇಳಿದರು.
41ರಲ್ಲಿ ಪದಾರ್ಪಣೆ
ಪ್ರವೀಣ್ ತಾಂಬೆ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಪದಾರ್ಪಣೆ ಮಾಡಿದ್ದರು. ಆಗಲೇ ಅವರಿಗೆ 41 ವರ್ಷವಾಗಿತ್ತು. 33 ಪಂದ್ಯಗಳಿಂದ 28 ವಿಕೆಟ್ ಹಾರಿಸಿದ್ದು ತಾಂಬೆ ಸಾಧನೆ. 2016ರಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ ಬಳಿಕ ಐಪಿಎಲ್‌ನಿಂದ ದೂರ ಉಳಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.