Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ತಮ್ಮ ಧಾರ್ಮಿಕ ಅಭ್ಯಾಸದ ಭಾಗವಾಗಿ ಈ ಸಾಧನೆಯಲ್ಲಿ ತೊಡಗಿಕೊಂಡಿದ್ದಾರಂತೆ!

Team Udayavani, Jan 16, 2025, 3:42 PM IST

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಆರಂಭಗೊಂಡಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ ಸಾಧು, ಸಂತರು, ಅಘೋರಿಗಳು ಹಾಗೂ ಭಕ್ತರು ಸೇರಿದಂತೆ ಕೋಟ್ಯಂತರ ಜನರು ಶಾಹಿ ಸ್ನಾನದಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಹಲವು ಸಾಧು-ಸಂತರು ತಮ್ಮ ವಿಶಿಷ್ಟವಾದ ವೇಷಭೂಷಣ, ಆಚರಣೆಯ ಮೂಲಕ ಗಮನಸೆಳೆಯುತ್ತಿದ್ದಾರೆ. ಅವರಲ್ಲಿ ಕಾಂಟೆ ವಾಲೆ (ಮುಳ್ಳಿನ ಮೇಲೆ ಮಲಗುವ) ಬಾಬಾ ಅಲಿಯಾಸ್‌ ರಮೇಶ್‌ ಕುಮಾರ್‌ ಮಾಂಝಿ ಕೂಡಾ ಒಬ್ಬರಾಗಿದ್ದಾರೆ.

ಪ್ರಮುಖ ಆಕರ್ಷಣೆ ಈ ಬಾಬಾ!

“ಕಾಂಟೆ ವಾಲೆ ಬಾಬಾ” ಚೂಪಾದ ಮುಳ್ಳಿನ ಹಾಸಿಗೆ ಮೇಲೆ ಮಲಗಿರುವ ಅದ್ಭುತ ಸಾಧಕರಾಗಿದ್ದು, ಇವರು ಕುಂಭಮೇಳದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಕಳೆದ 50ವರ್ಷಕ್ಕಿಂತಲೂ ಅಧಿಕ ಕಾಲದಿಂದ ತಮ್ಮ ಧಾರ್ಮಿಕ ಅಭ್ಯಾಸದ ಭಾಗವಾಗಿ ಈ ಸಾಧನೆಯಲ್ಲಿ ತೊಡಗಿಕೊಂಡಿದ್ದಾರಂತೆ!

ಗುರುವಿನ ಆಶೀರ್ವಾದದ ಬಲ:

ನಾನು ನನ್ನ ಗುರುವಿಗೆ ಮಾಡಿದ ಸೇವೆಯ ಪ್ರತಿಫಲವಾಗಿ ನನಗೆ ಅವರು ಈ ಮುಳ್ಳಿನ ಹಾಸಿಗೆಯ ಮೇಲೆ ಮಲಗುವ ಸಿದ್ಧಿಯನ್ನು ಕರುಣಿಸಿದ್ದಾರೆ. ಇದು ದೇವರ ಇಚ್ಛೆಯಾಗಿದ್ದು, ಪ್ರತಿ ಕುಂಭಮೇಳದಲ್ಲೂ ಯಾವುದೇ ನೋವನ್ನು ಅನುಭವಿಸದೇ ಈ ಸಾಧನೆ ಮಾಡುವ ಅವಕಾಶ ಒದಗಿಸಿಕೊಟ್ಟಿದೆ. ನಿಜ ಹೇಳಬೇಕೆಂದರೆ ಇದರಿಂದ ನನ್ನ ದೇಹಕ್ಕೆ ಲಾಭವಿದೆ ಎಂದು ಕಾಂಟೆ ವಾಲೆ ಬಾಬಾ ಹೇಳುತ್ತಾರೆ.

ತಾನು ಸ್ವೀಕರಿಸುವ ದಕ್ಷಿಣೆಯಲ್ಲಿ ಅರ್ಧದಷ್ಟನ್ನು ದಾನವಾಗಿ ಕೊಡುತ್ತಾರಂತೆ. ಉಳಿದ ಹಣವನ್ನು ತನ್ನ ದೈನಂದಿನ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಅವರ ಈ ವಿಧೇಯತೆ ಮತ್ತು ಆಧ್ಯಾತ್ಮಿಕತೆಯ ಸಮರ್ಪಣಾ ಭಾವ ಭಕ್ತರ ಮೆಚ್ಚುಗೆ ಗಳಿಸಿದೆ.

ಜ.16ರಂದು ಸಂಜೆ 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ:

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗುತ್ತಿದ್ದಾರೆ. ಗುರುವಾರ ಭಾರತ ಸರಕಾರವೇ  ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.

ಫಿಜಿ, ಫಿನ್ ಲ್ಯಾಂಡ್, ಗಯಾನಾ, ಮಲೇಶಿಯಾ, ಮಾರಿಷಸ್‌, ಸಿಂಗಾಪುರ, ದ.ಆ‌ಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್‌ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.

ಟಾಪ್ ನ್ಯೂಸ್

Supreme Court

ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ

Husband-wife fight: Wife hits husband on the head with a whip

Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

1-saif

Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!

Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!

1-baba

Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!

6-kumbamela

Maha Kumbh Mela 2025: ಬಾಬಾ ವೇಷ

Kumbh Mela: First Shahi Snan: 3.5 crore people participated

Kumbh Mela: ಮೊದಲ ಶಾಹಿ ಸ್ನಾನ: 3.5 ಕೋಟಿ ಮಂದಿ ಭಾಗಿ; ಎರಡನೇ ಶಾಹಿಸ್ನಾನ ಜ.29ಕ್ಕೆ ನಿಗದಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Supreme Court

ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ

Husband-wife fight: Wife hits husband on the head with a whip

Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ

ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.