ಅಕಾಲಿಕ ಮಳೆ ಸಂಕಟ : ನಿಯಮ ತಪ್ಪಿದ ಹವೆ; ಭತ್ತ, ಕಾಫಿ, ಅಡಿಕೆ ಸಹಿತ ಎಲ್ಲ ಬೆಳೆಗೂ ತೊಂದರೆ
Team Udayavani, Nov 15, 2021, 7:05 AM IST
ಉಡುಪಿ/ಮಂಗಳೂರು : ಶರದೃತು ಆರಂಭವಾಗಿ ದೀಪಾವಳಿ ಕಳೆದರೂ ಮಳೆ ಹಿಂದೆ ಸರಿಯದೆ ಇರುವುದು ಉಡುಪಿ, ದಕ್ಷಿಣ ಕನ್ನಡ ಸಹಿತ ಕರಾವಳಿ, ಮಲೆನಾಡು ಭಾಗದ ರೈತರು-ಕೃಷಿಕರಿಗೆ ಕಣ್ಣೀರು ತರಿಸಿದೆ. ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ 2-3 ದಿನಗಳಿಂದ ಮೋಡ ಕವಿದ ವಾತಾವರಣ, ಭಾರೀ ಮಳೆಯಾಗುತ್ತಿದ್ದು, ಭತ್ತ ಬೇಸಾಯ ಗಾರರು, ಅಡಿಕೆ, ಕರಿಮೆಣಸು, ರಬ್ಬರ್ ಕೃಷಿಕರು, ಕಾಫಿ ಬೆಳೆಗಾರರು ಬೆಳೆದ ಬೆಳೆಯ ತುತ್ತು ಬಾಯಿಗೆ ಬಾರದಂತೆ ಆಗಿದೆ.
ರವಿವಾರ ಮುಂಜಾನೆಯಿಂದಲೇ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆರಂಭವಾಗಿದ್ದು, ಹಲವೆಡೆ ಕೊಯ್ಲು ಆದ ಭತ್ತದ ಬೆಳೆ ಗದ್ದೆಗಳಲ್ಲಿಯೇ ಕೊಳೆಯುವ ಸ್ಥಿತಿಯಲ್ಲಿದೆ. ಕಟಾವಿಗೆ ಸಿದ್ಧವಾದ ಪೈರು ನೆಲಕಚ್ಚಿದೆ. ಅಡಿಕೆ ಒಂದನೇ ಕೊಯ್ಲು ಆಗಿದ್ದು, ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೆ ಕೊಳೆಯುವ ಸ್ಥಿತಿಯಿದೆ. ಹಾಗೆಯೇ ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ಮಳೆ ಯಾಗಿದ್ದರಿಂದ ಮಲೆನಾಡಿನಲ್ಲಿ ಕಾಫಿ ಬೇಗನೆ ಹಣ್ಣಾಗಿದ್ದು, ಅಕಾಲಿಕ ಮಳೆಯಿಂದಾಗಿ ಉದುರಲು ಆರಂಭವಾಗಿದೆ.
ಬಿಸಿಲು, ಚಳಿ, ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಈ ನಡುವೆ ಥಾಯ್ಲಂಡ್ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಶನಿವಾರ ಮತ್ತೆ ಕಡಿಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಬಲಗೊಳ್ಳಲಿದೆ. ನ. 18ರಂದು ಅದು ಆಂಧ್ರ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸದ್ಯದ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಮತ್ತಷ್ಟು ಉತ್ತಮ ಆಡಳಿತಕ್ಕೆ ಶ್ರೀಕಾರ : ಹಳೇ ಬೇರು, ಹೊಸ ಚಿಗುರಿನ ಪರಿಕಲ್ಪನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.