ಮನೆಯ ತ್ಯಾಜ್ಯದಿಂದ ಜೈವಿಕ ಗೊಬ್ಬರ ತಯಾರಿ! ಕರಂಬಾರು ಕೃಷಿಕನ ಮಾದರಿ ವಿಧಾನ


Team Udayavani, Mar 8, 2022, 3:38 PM IST

ಮನೆಯ ತ್ಯಾಜ್ಯದಿಂದ ಜೈವಿಕ ಗೊಬ್ಬರ ತಯಾರಿ! ಕರಂಬಾರು ಕೃಷಿಕನ ಮಾದರಿ ವಿಧಾನ

ಬಜಪೆ : ತ್ಯಾಜ್ಯ ನಿರ್ವಹಣೆ ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣ ಮಿಸಿದೆ. ದಂಡದಂತ ಕಠಿನ ಕ್ರಮಗಳು ಜರಗಿಸಿದರೂ ಈ ಪ್ರವೃತ್ತಿ ಮುಂದು ವರಿದಿದೆ. ವೈಯಕ್ತಿಕ ಜವಾಬ್ದಾರಿ ಮೆರೆದು ಮನೆಯಿಂದಲೇ ತ್ಯಾಜ್ಯದ ನಿರ್ವಹಣೆ ಮಾಡಿದರೆ ಕಸ ಉತ್ಪತ್ತಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಹಾಗೂ ಕಸದಿಂದ ರಸ ತೆಗೆಯಬಹುದು ಎಂಬುದನ್ನು ಕರಂಬಾರಿನ ಕಂಗೂರಿ ನಿವಾಸಿ ತೋರಿಸಿಕೊಟ್ಟು ಮಾದರಿ ಯಾಗಿದ್ದಾರೆ.

ಬಜಪೆ ಪ.ಪಂ. ವ್ಯಾಪ್ತಿಯ ಕರಂಬಾರು ಕಂಗೂರಿ ಮನೆಯ ಪ್ರಸನ್ನ ಡಿ’ಸೋಜಾ ಅವರು ಎರಡು ವರ್ಷಗಳಿಂದ ಮನೆಯಲ್ಲಿ ಅಡುಗೆ ತ್ಯಾಜ್ಯ, ದ್ರವ ತ್ಯಾಜ್ಯ ಹಾಗೂ ಕಸವನ್ನು ವಿಭಿನ್ನ ರೀತಿಯಲ್ಲಿ ವಿಂಗಡಿಸಿ ಜೈವಿಕ ಗೊಬ್ಬರವನ್ನಾಗಿಸಲಾಗುತ್ತಿದೆ.

3 ವಿಧಾನದಲ್ಲಿ ತ್ಯಾಜ್ಯ ವಿಂಗಡಣೆ
ಮನೆಯ ತ್ಯಾಜ್ಯವನ್ನು ಮೂರು ವಿಧಾನ ಗಳಲ್ಲಿ ಗೊಬ್ಬರವನ್ನು ತಯಾರಿಸಲಾ ಗುತ್ತಿದೆ. ಅಡುಗೆ ತ್ಯಾಜ್ಯವನ್ನು ವಿಲೇವಾರಿಗೆ ಒಂದು ಡ್ರಮ್‌ ಅನ್ನು ಉಪ ಯೋಗಿಸಿ, ಡ್ರಮ್‌ನ ಬದಿಯ ಕೆಳಭಾಗದಲ್ಲಿ ರಂಧ್ರ ತೆಗೆದು ಪೈಪ್‌ ಬಳಕೆ ಮಾಡಿದ್ದಾರೆ. ಆ ಡ್ರಮ್‌ನ ಬದಿಯ ಮೇಲ್ಭಾಗದಲ್ಲಿ ಇನ್ನೊಂದು ರಂಧ್ರ ತೆಗೆದು ಪೈಪ್‌ ಅಳವಡಿಸಿ ದ್ದಾರೆ. ಗಾಳಿ ಆಡಲು ಮುಚ್ಚಳದ ಮಧ್ಯೆ ರಂಧ್ರ ತೆಗೆದು ಅಲ್ಲೊಂದು ಪೈಪ್‌ ಅಳವಡಿಸಲಾಗಿದೆ. ಪ್ರತೀ ದಿನ ಅಡುಗೆ ತ್ಯಾಜ್ಯವನ್ನು ಈ ಡ್ರಮ್‌ಗೆ ಹಾಕಿ ಮುಚ್ಚಲಾಗುತ್ತದೆ. ಡ್ರಮ್‌ನ ಬದಿಯ ಕೆಳಭಾಗದಲ್ಲಿ ಪೈಪ್‌ ಮೂಲಕ ಉತ್ಪತ್ತಿಯಾದ ತ್ಯಾಜ್ಯ ದ್ರವವನ್ನು ತೆಗೆದು ಗಿಡಗಳ ಬುಡಕ್ಕೆ ಹಾಕಲಾ ಗುತ್ತದೆ. ಈ ತ್ಯಾಜ್ಯ ದ್ರವ ಗಿಡಗಳಿಗೆ ಒಳ್ಳೆಯ ಗೊಬ್ಬರ. ಇದರಿಂದ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಡ್ರಮ್‌ ಬದಿಯ ಮೇಲ್ಭಾಗದಲ್ಲಿರುವ ರಂಧ್ರದ ಮೂಲಕ ಉತ್ಪತ್ತಿಯಾದ ತ್ಯಾಜ್ಯದಿಂದ ಹುಳು ಬರುತ್ತವೆ. ಅಲ್ಲಿರಿಸಲಾದ ಟಬ್‌ನಲ್ಲಿ ಆ ಹುಳುಗಳು ಶೇಖರಣೆಯಾಗುತ್ತವೆ. ಇದು ನಾಟಿ ಕೋಳಿಗೆ ಪೋಷಕಾಂಶದ ಆಹಾರವಾಗಿದೆ ಎನ್ನುತ್ತಾರೆ ಪ್ರಸನ್ನ.

ಇದನ್ನೂ ಓದಿ : ನನೆಗುದಿಗೆ ಬಿದ್ದ ವಾರಾಹಿ ಎಡದಂಡೆ ಉಪ ಕಾಲುವೆ ಕಾಮಗಾರಿ : ಜನರನ್ನು ಕಾಡುತ್ತಿದೆ ಬರದ ಭಯ :

ತ್ಯಾಜ್ಯ ದ್ರವ ನೀರಿಗೆ ಡ್ರಮ್‌ ಅಳವಡಿಕೆ: ಹಟ್ಟಿಯ ನೀರು ಶೇಖರಣೆಗೆ ಒಂದು ಸಾವಿರ ಲೀಟರ್‌ ಸಾಮರ್ಥ್ಯದ ಡ್ರಮ್‌ ಇಡಲಾಗಿದೆ. ಇದಕ್ಕೆ ಹಟ್ಟಿಯಿಂದ ಬರುವ ದನಗಳ ಮೂತ್ರ ಹಾಗೂ ನೀರು ಬೀಳುತ್ತದೆ. ಇದನ್ನು 15 ದಿನಗಳಿಗೊಮ್ಮೆ ನೆಲಗಡಲೆಯ ಹಿಂಡಿ ಹಾಕಿ ಅಡಕೆ, ತೆಂಗು ಮರಗಳಿಗೆ ಹಾಕುವುದರಿಂದ ಪೋಷಕಾಂಶ ದೊರೆಯುತ್ತದೆ. ಡ್ರಮ್‌ಗೆ
ಮುಚ್ಚಳ ಹಾಕುವ ಕಾರಣ ಯಾವುದೇ ವಾಸನೆ ಬರುವುದಿಲ್ಲ.

ಕಲ್ಲುಗಳಿಂದ ಕಟ್ಟಿದ ಟ್ಯಾಂಕ್‌: ಮನೆಯ ಸುತ್ತಮುತ್ತ ಇರುವ ಕಸ, ಅಡಕೆ ಸೋಗೆ, ಮರದ ಎಲೆಗಳನ್ನು ಹಾಕಿ ಅದಕ್ಕೆ ಸೆಗಣಿ, ನೀರು ಚುಮುಕಿಸಲಾಗುತ್ತದೆ. ಪ್ಲ್ರಾಸ್ಟಕ್‌, ಗಾಜು ಹಾಗೂ ಕಬ್ಬಿಣದಂಥ ಘನ ತ್ಯಾಜ್ಯಗಳನ್ನು ಹೊರತುಪಡಿಸಿ ಉಳಿದ ಕಸವನ್ನು ಟ್ಯಾಂಕ್‌ಗೆ ಹಾಕಲಾಗುತ್ತದೆ. ಅದಕ್ಕೆ ನೆರಳು ಮುಖ್ಯವಾಗಿರುವುದರಿಂದ ಮೇಲ್ಭಾಗಕ್ಕೆ ಹೊದಿಕೆ ಹಾಕಲಾಗುತ್ತದೆ. ಈ ರೀತಿಯ ಎರಡು ಟ್ಯಾಂಕ್‌ಗಳು ಪ್ರಸನ್ನ ಅವರ ಮನೆಯಲ್ಲಿವೆ. ಒಂದು ಮನೆಯ ತಾರಸಿ ಮೇಲೆ ಒಂದು, ಮನೆಯ ಬದಿಯಲ್ಲಿ ಇನ್ನೊಂದು ಟ್ಯಾಂಕ್‌ ಕಲ್ಲಿನಿಂದ ನಿರ್ಮಿಸಲಾಗಿದೆ. ಪ್ರತೀ ಟ್ಯಾಂಕ್‌ನಿಂದ 3 ತಿಂಗಳಲ್ಲಿ ಸುಮಾರು 50 ಬಟ್ಟಿ ಗೊಬ್ಬರ ತೆಗೆಯಲಾಗುತ್ತದೆ.

ಇತರರಿಗೆ ಮಾದರಿ
ಪ್ರಸನ್ನ ಡಿ’ಸೋಜಾ ಅವರ ತ್ಯಾಜ್ಯ ವಿಲೇವಾರಿಯನ್ನು ಜತೆ ಗೊಬ್ಬರವನ್ನು ಕಂಡು ಪರಿಸರದ ನಾಲ್ಕೆ çದು ಮನೆಯವರು ಈ ವಿಧಾನವನ್ನು ಅಳವಡಿಸಿ, ತ್ಯಾಜ್ಯ ದಿಂದ ಗೊಬ್ಬರ ತಯಾರಿಸಿದ್ದಾರೆ. ಮಂಗಳೂರಿನಲ್ಲಿರುವ ಇವರ ಸಂಬಂಧಿಕರು ಕೂಡ ಈ ಪ್ರಯೋಗ ಮಾಡಿದ್ದಾರೆ.

ತ್ಯಾಜ್ಯ ನಿರ್ವಹಣೆಗೆ ಮುಂದಾಗಿ
ತ್ಯಾಜ್ಯವನ್ನು ಸಮಸ್ಯೆ ಎಂದು ತಿಳಿಯದೇ ಅದರ ನಿರ್ವಹಣೆಗೆ ಮುಂದಾಗಬೇಕು. ನನ್ನ ಮಗಳು ಸೈಂಟ್‌ ಜೋಸೆಫ್‌ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರಿನ್ಸಿಟಾ ಈ ಬಗ್ಗೆ ಪರಿಸರದಲ್ಲಿ ಜಾಗೃತಿ ಮೂಡಿಸಿದ್ದು ಅವರ ಶಾಲೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ. ಶಾಲಾ ಮಕ್ಕಳು, ಯುವ ಜನಾಂಗ ಇದಕ್ಕೆ ಮುಂದೆ ಬಂದು ಅವರ ತ್ಯಾಜ್ಯ ಅವರ ಮನೆಯಲ್ಲಿಯೇ ವಿಲೇವಾರಿಯಾಗುವಂತೆ ಕಟ್ಟಿ ಬದ್ಧರಾಗಬೇಕು.
– ಪ್ರಸನ್ನ ಡಿ’ಸೋಜಾ, ಕೃಷಿಕ

ಸಹಭಾಗಿತ್ವ ಅಗತ್ಯ
ಬಜಪೆ ಪ.ಪಂ.ನಲ್ಲಿ ತಿಂಗಳಿಗೆ 2.25 ಲಕ್ಷ ರೂ. ತ್ಯಾಜ್ಯ ವಿಲೇವಾರಿಗೆ ಖರ್ಚು ಮಾಡಲಾಗುತ್ತದೆ. ಹಸಿ ಹಾಗೂ ಒಣ ಕಸ ಬೇರೆ ಬೇರೆಯಾಗಿ ನೀಡಬೇಕು. ತ್ಯಾಜ್ಯ ವಿಲೇವಾರಿಯಲ್ಲಿ ಜನರ ಸಹಭಾಗಿತ್ವ ಅಗತ್ಯ. ಬಜಪೆಯಲ್ಲಿ ಸುಮಾರು 64 ವಸತಿ ಸಮುಚ್ಚಯಗಳಿದ್ದು ಅವರು ತ್ಯಾಜ್ಯ ವಿಲೇವಾರಿಯನ್ನು ಅವರಲ್ಲಿಯೇ ಮಾಡಿದರೆ ಉತ್ತಮ.
– ಪೂರ್ಣಕಲಾ ವೈ.ಕೆ., ಮುಖ್ಯಾಧಿಕಾರಿ, ಬಜಪೆ ಪಟ್ಟಣ ಪಂಚಾಯತ್‌

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.