ರಷ್ಯಾಕ್ಕೆ ಉಗ್ರ ಪಟ್ಟ ಕಟ್ಟಿ; ಅಮೆರಿಕ ಅಧ್ಯಕ್ಷ ಬೈಡನ್‌ಗೆ ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ
Team Udayavani, Apr 17, 2022, 8:15 AM IST
ಕೀವ್: ಉಕ್ರೇನ್ ಮೇಲೆ ಯುದ್ಧ ಸಾರುವುದರ ಜತೆಗೆ ಅನೇಕ ಯುದ್ಧಾಪರಾಧಗಳನ್ನು ಮಾಡಿ ರುವ ರಷ್ಯಾವನ್ನು ಉಗ್ರವಾದಕ್ಕೆ ಪ್ರಾಯೋಜಕತ್ವ ನೀಡುವ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟಬೇಕು ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಮೆರಿಕವನ್ನು ಆಗ್ರಹಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ಯುದ್ಧ 52ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶನಿವಾರದಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರಿಗೆ ಕರೆ ಮಾಡಿದ ಝೆಲೆನ್‌ಸ್ಕಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ರಷ್ಯಾಕ್ಕೆ ಉಗ್ರವಾದ ಪ್ರಾಯೋಜಕತ್ವ ನೀಡುವ ದೇಶವೆಂಬ ಹಣೆಪಟ್ಟಿ ಕಟ್ಟಬೇಕು.
ವಿಶ್ವಮಟ್ಟದಲ್ಲಿ ರಷ್ಯಾವನ್ನು ಏಕಾಂಗಿಯಾಗಿಸಲು ಅದು ನೆರವಾಗಬಹುದು ಎಂದು ಆಗ್ರಹಿಸಿದ್ದಾರೆ.ಇದಲ್ಲದೆ, ಉಕ್ರೇನ್‌ಗೆ ಅಗತ್ಯವಿರುವ ಮತ್ತಷ್ಟು ಸೇನಾ ಸವಲತ್ತುಗಳ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. ಝೆಲೆನ್‌ಸ್ಕಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಬೈಡನ್, ಮೊದಲು ಶಸ್ತ್ರಾಸ್ತ್ರ ಪೂರೈಕೆಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದು, ರಷ್ಯಾಕ್ಕೆ ಹಣೆಪಟ್ಟಿ ಕಟ್ಟುವ ಬಗ್ಗೆ ಮುಂದೆ ನಿರ್ಧರಿಸುವುದಾಗಿ ಹೇಳಿದ್ದಾರೆ ಎಂದು ಈ ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿವೆ.
ಪರಮಾಣು ಬಳಸಬಹುದು ಜಾಗ್ರತೆ: ರಷ್ಯಾವು ಯಾವುದೇ ಕ್ಷಣದಲ್ಲಿ ತನ್ನಲ್ಲಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಗಳಿವೆ. ಹಾಗಾಗಿ, ಜಗತ್ತಿನ ಎಲ್ಲ ರಾಷ್ಟ್ರಗಳು ಎಚ್ಚರಿಕೆಯಿಂದ ಇರಬೇಕು ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಸಿಎನ್‌ಎನ್‌ಗೆ ನೀಡಿರುವ ಸಂದರ್ಶ ನದಲ್ಲಿ ಮಾತನಾಡಿದ ಅವರು, ಪರಮಾಣು ಶಸ್ತ್ರಾಸ್ತ್ರಗಳ ಜತೆಗೆ ರಾಸಾಯನಿಕ ಅಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹಾವೇರಿ,ಗದಗ : ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ
ಸೇನಾ ಸಾಮಗ್ರಿ ಕಾರ್ಖಾನೆ ಮೇಲೆ ದಾಳಿ: ಉಕ್ರೇನ್‌ನ ರಾಜಧಾನಿ ಕೀವ್‌ನಗರದಲ್ಲಿರುವ ಸೇನಾ ಕಾರ್ಖಾನೆ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿವೆ. ಯುದ್ಧ ವಿಮಾನಗಳಿಗೆ ಬೇಕಾದ ಬಿಡಿಭಾಗಗಳ ತಯಾರಿ ಹಾಗೂ ರಿಪೇರಿಗಳು ಈ ಕಾರ್ಖಾನೆಯಲ್ಲಿ ನಡೆಯುತ್ತಿತ್ತು. ಇದೀಗ ಧ್ವಂಸಗೊಂಡಿದೆ ಎಂದು ಕೀವ್‌ನ ಮೇಯರ್ ವಿಟಾಲಿ ಕ್ಲಿಟ್ಸ್‌ಚೊRà ತಿಳಿಸಿದ್ದಾರೆ. ಅಲ್ಲದೆ, ಕೀವ್ ನಗರದ ಮೇಲೆ ಇನ್ನಷ್ಟು ದಾಳಿಗಳಾಗಬಹುದು ಎಂದು ಅವರು ಹೇಳಿದ್ದಾರೆ.
ಬೋರಿಸ್ ಜಾನ್ಸನ್‌ಗೆ ನಿಷೇಧ
ಮಹತ್ವದ ಬೆಳವಣಿಗೆಯೊಂದರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಯು.ಕೆ. ಸರಕಾರದ ಅನೇಕ ಹಿರಿಯ ಅಧಿಕಾರಿಗಳಿಗೆ ರಷ್ಯಾ ಪ್ರವೇಶಿಸದಂತೆ ನಿಷೇಧ ಹೇರಿರುವುದಾಗಿ ಪುತಿನ್ ಸರಕಾರ ಪ್ರಕಟಿಸಿದೆ. ಇತ್ತೀಚೆಗೆ, ರಷ್ಯಾದ ಅಧ್ಯಕ್ಷ ಪುತಿನ್ ಹಾಗೂ ಉನ್ನತ ಅಧಿಕಾರಿಗಳ ಮೇಲೆ
ಯು.ಕೆ. ನಿಷೇಧ ಹೇರಿತ್ತು. ಅದಕ್ಕೆ ಪ್ರತಿಯಾಗಿ, ರಷ್ಯಾ ಈ ನಿರ್ಧಾರ ಕೈಗೊಂಡಿದೆ.
ಸಮರಾಂಗಣದಲ್ಲಿ
-ಕೀವ್ ನಗರದ ಮಿಲಿಟರಿ ಕಾರ್ಖಾನೆಯ ಮೇಲೆ ರಷ್ಯಾ ದಾಳಿ.
-ಮರಿಯುಪೋಲ್‌ನ “ಎಕ್ಸಿಟ್ ವೇ’
ಗಳನ್ನು ಮುಚ್ಚಲು ಮುಂದಾದ ರಷ್ಯಾ.
-ರಷ್ಯಾಕ್ಕೆ ಉಗ್ರವಾದಿ ಪ್ರಾಯೋಜಕತ್ವ ಹಣೆಪಟ್ಟಿ ಕಟ್ಟಲು ಉಕ್ರೇನ್ ಅಧ್ಯಕ್ಷರ ಆಗ್ರಹ.
-ಬೋರಿಸ್ ಜಾನ್ಸನ್‌ಗೆ ನಿಷೇಧ ಹೇರಿದ ರಷ್ಯಾ ಸರಕಾರ.
-24 ಗಂಟೆಗಳಲ್ಲಿ ಉಕ್ರೇನ್‌ನಿಂದ 40 ಸಾವಿರ ನಿರಾಶ್ರಿತರು ನೆರೆ ದೇಶಗಳಿಗೆ.
-ಮರಿಯೋಪೋಲ್ ನಗರವನ್ನು ಮತ್ತೆ ಕಟ್ಟುವೆ ಎಂದ ಉಕ್ರೇನ್‌ನ ದೈತ್ಯ ಉದ್ಯಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.