‘ಪೇಜಾವರ ಶ್ರೀಗಳು ಸೇವೆ ಹಾಗೂ ಧಾರ್ಮಿಕತೆಯ ಶಕ್ತಿ ಕೇಂದ್ರ’: ಪ್ರಧಾನಿ ಮೋದಿ ಸಂತಾಪ ಟ್ವೀಟ್
Team Udayavani, Dec 29, 2019, 10:47 AM IST
ನವದೆಹಲಿ: ಇಂದು ಉಡುಪಿಯಲ್ಲಿ ಕೃಷ್ಣೈಕ್ಯರಾದ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರ ಅಗಲುವಿಕೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಾರ್ಯಾಲಯದಲ್ಲಿ ತಾವು ಶ್ರೀಗಳನ್ನು ಭೇಟಿ ಮಾಡಿದ ಸಂದರ್ಭದ ಎರಡು ಫೊಟೋಗಳನ್ನು ಹಾಕಿಕೊಂಡು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ತಾವು ಮಾರ್ಗದರ್ಶನದ ಬೆಳಕಾಗಿದ್ದ ಲಕ್ಷಾಂತರ ಜನರ ಹೃದಯದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಗಳು ಯಾವತ್ತೂ ಇರುತ್ತಾರೆ. ಶ್ರೀಗಳು ಸೇವೆ ಹಾಗೂ ಧಾರ್ಮಿಕತೆಯ ಶಕ್ತಿ ಕೇಂದ್ರವಾಗಿದ್ದರು ಹಾಗೂ ಸಮಾಜದ ಉದ್ಧಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟದ್ದರು. ಓಂ ಶಾಂತಿ ಎಂದು ಮೋದಿ ಅವರು ತಮ್ಮ ಮೊದಲ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Sri Vishvesha Teertha Swamiji of the Sri Pejawara Matha, Udupi will remain in the hearts and minds of lakhs of people for whom he was always a guiding light. A powerhouse of service and spirituality, he continuously worked for a more just and compassionate society. Om Shanti. pic.twitter.com/ReVDvcUD6F
— Narendra Modi (@narendramodi) December 29, 2019
I consider myself blessed to have got many opportunities to learn from Sri Vishvesha Teertha Swamiji. Our recent meeting, on the pious day of Guru Purnima was also a memorable one. His impeccable knowledge always stood out. My thoughts are with his countless followers. pic.twitter.com/sJMxIfIUSS
— Narendra Modi (@narendramodi) December 29, 2019
ಮೋದಿ ಅವರ ಇನ್ನೊಂದು ಟ್ವೀಟ್ ನಲ್ಲಿ ತಮ್ಮ ಮತ್ತು ಶ್ರೀಗಳ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಪೇಜಾವರ ಶ್ರೀಗಳಿಂದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವ ಹಲವು ಅವಕಾಶಗಳು ನನಗೆ ಲಭಿಸಿತ್ತು. ಗುರುಪೂರ್ಣಿಮಾ ದಿನದಂದು ನಾನು ಶ್ರೀಗಳನ್ನು ಭೇಟಿ ಮಾಡಿದ್ದು ಸಹ ನನ್ನ ಪಾಲಿಗೆ ವಿಶೇಷ ಅನುಭವವಾಗಿತ್ತು ಮತ್ತು ಅದೇ ನಮ್ಮಿಬ್ಬರ ಅಂತಿಮ ಭೇಟಿಯಾಗಿತ್ತು. ಎಂದು ಪ್ರಧಾನಿಯವರು ಎರಡನೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.