ಪುಣೆ ಮೆಟ್ರೋ ರೈಲು ನಿಲ್ದಾಣ ಲೋಕಾರ್ಪಣೆ : ಟಿಕೆಟ್ ಖರೀದಿಸಿ ಪ್ರಧಾನಿ ಪ್ರಯಾಣ
Team Udayavani, Mar 6, 2022, 9:35 PM IST
ಪುಣೆ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುಣೆ ಮೆಟ್ರೋ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಲೋಕಾರ್ಪಣೆ ಮಾಡಿದರು. ಪುಣೆಯ ಗಾರ್ವಾರೆ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ನಂತರ, ನಿಲ್ದಾಣದಲ್ಲಿರುವ ಕಿಯೋಸ್ಕ್ನಿಂದ ಖುದ್ದು ಟಿಕೆಟ್ ಖರೀದಿಸಿದ ಮೋದಿ, ಅಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ಆನಂದನಗರ್ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಪ್ರಧಾನಿಯಿದ್ದ ಬೋಗಿಯಲ್ಲಿದ್ದ ದಿವ್ಯಾಂಗರ ಜೊತೆಯಲ್ಲಿ ಮೋದಿ ಉಭಯಕುಶಲೋಪರಿ ನಡೆಸಿದರು.
ಒಟ್ಟು 32 ಕಿ.ಮೀ. ಉದ್ದದ ಈ ಯೋಜನೆಗೆ 2016ರಲ್ಲಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ ಹಂತದಲ್ಲಿ 12 ಕಿ.ಮೀ. ದೂರದವರೆಗಿನ ಯೋಜನೆ ಸಿದ್ಧವಾಗಿದ್ದು, ಉಳಿದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.
ಶಿವಾಜಿ ಪುತ್ಥಳಿ ಅನಾವರಣ
ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿವಾಜಿ ಪುತ್ಥಳಿಯನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. 9.5 ಅಡಿ ಎತ್ತರದ 1,850 ಕೆಜಿ ತೂಕದ ಕಂಚು ಲೋಹದ ಮತ್ತೂಂದು ಸ್ವರೂಪವಾದ ಗನ್ ಮೆಟಲ್‌ನಿಂದ ನಿರ್ಮಿಸಲಾಗಿದೆ. ಇದೇ ವೇಳೆ, ಮೋದಿಯವರು ಪಾಲಿಕೆ ಆವರಣದಲ್ಲಿರುವ ಜ್ಯೋತಿಭಾಯಿ ಫುಲೆಯವರ ಪುತ್ಥಳಿಗೂ ಮಾಲಾರ್ಪಣೆ ಮಾಡಿದರು.
ಮ್ಯೂಸಿಯಂ ಉದ್ಧಾಟನೆ
ಖ್ಯಾತ ವ್ಯಂಗ್ಯಚಿತ್ರಕಾರ ದಿ. ಆರ್.ಕೆ. ಲಕ್ಷ್ಣಣ್‌ರವರ ಜೀವನವನ್ನು ಕಟ್ಟಿಕೊಡುವ ಹೊಸ ವಸ್ತುಸಂಗ್ರಹಾಲಯವನ್ನು ಮೋದಿ ಉದ್ಘಾಟಿಸಿದರು. ಇದರಲ್ಲಿ ಲಕ್ಷ್ಮಣ್ ಅವರು ಕಾಮನ್ ಮ್ಯಾನ್ ಪರಿಕಲ್ಪನೆಯಡಿ ರಚಿಸಿದ 30,000 ವ್ಯಂಗ್ಯಚಿತ್ರಗಳನ್ನು ಕಾಣಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.