Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
ಪಿಕೆಎಲ್ 11ನೇ ಆವೃತ್ತಿಯಲ್ಲಿ ಪ್ಲೇ ಆಫ್ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳು
Team Udayavani, Oct 18, 2024, 12:41 AM IST
ಹೈದರಾಬಾದ್: ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) 11ನೇ ಆವೃತ್ತಿ ಶುಕ್ರವಾರ ಆರಂಭಗೊಳ್ಳಲಿದೆ. ಇಲ್ಲಿಂದ ಡಿ. 24ರ ವರೆಗೆ, ಒಟ್ಟು 68 ದಿನಗಳ ಕಾಲ ಕಬಡ್ಡಿ ಪ್ರೇಮಿಗಳನ್ನು ರಂಜಿಸಲಿದೆ. ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ಬೆಂಗಳೂರು ಬುಲ್ಸ್ ಎದುರಾಗಲಿವೆ.
ಒಟ್ಟು 12 ತಂಡಗಳನ್ನೊಳಗೊಂಡ 11ನೇ ಆವೃತ್ತಿಯ ಆರಂಭಿಕ ಹಂತದ ಪಂದ್ಯಗಳು ಅ. 18ರಿಂದ ಹೈದರಾಬಾದ್‌ನ ಗಚಿಬೌಲಿ ಮೈದಾನದಲ್ಲಿ ನಡೆದರೆ, 2ನೇ ಹಂತದ ಸ್ಪರ್ಧೆಗಳು ನ. 10ರಿಂದ ನೋಯ್ಡಾದ ವಿಜಯ್ ಸಿಂಗ್ ಮೈದಾನದಲ್ಲಿ, 3ನೇ ಹಂತದ ಪಂದ್ಯಗಳು ಡಿ. 3ರಿಂದ ಪುಣೆಯ ಛತ್ರಪತಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಿಕೆಎಲ್ 11ನೇ ಆವೃತ್ತಿಯಲ್ಲಿ ಪ್ಲೇ ಆಫ್ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳನ್ನು ಆಡಲಾಗುವುದು.
ಟೈಟಾನ್ಸ್ ವರ್ಸಸ್ ಬುಲ್ಸ್
ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳು ಕಣಕ್ಕಿಳಿಯಲಿವೆ. ಟೈಟಾನ್ಸ್‌ನಲ್ಲಿ ತಾರಾ ಆಟಗಾರ ಪವನ್ ಕುಮಾರ್ ಶೆಹ್ರಾವತ್, ಬುಲ್ಸ್‌ನಲ್ಲಿ ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್ ಇರುವುದರಿಂದ ಆರಂಭಿಕ ಪಂದ್ಯವೇ ಕುತೂಹಲ ಮೂಡಿಸಿದೆ.
ಕಳೆದ ಸೀಸನ್‌ನಲ್ಲಿ ಬೆಂಗಳೂರು 8ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತ್ತು. ತೆಲುಗು ಟೈಟಾನ್ಸ್ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇತ್ತಂಡಗಳ ಈವರೆಗಿನ 23 ಮುಖಾಮುಖೀ ಗಳಲ್ಲಿ ಬೆಂಗಳೂರು 16ರಲ್ಲಿ ಜಯಿಸಿದ್ದರೆ, ಟೈಟಾನ್ಸ್ ಕೇವಲ 3ರಲ್ಲಿ ಮೇಲುಗೈ ಸಾಧಿಸಿದೆ. 4 ಪಂದ್ಯಗಳು ಟೈ ಆಗಿವೆ.
3 ಕೋಟಿ ರೂ. ಬಹುಮಾನ
ಪ್ರೊ ಕಬಡ್ಡಿ ಲೀಗ್ ವಿಜೇತರಿಗೆ 3 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 1.80 ಕೋಟಿ ರೂ. ಮೊತ್ತ ಲಭಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.