ಪ್ರೊ ಕಬಡ್ಡಿ: ತೆಲುಗು ಟೈಟಾನ್‌ಗೆ ಏಳನೇ ಸೋಲು
Team Udayavani, Jan 15, 2022, 10:30 PM IST
ಬೆಂಗಳೂರು: ಪ್ರಸಕ್ತ ಋತುವಿನ ಪ್ರೊ ಕಬಡ್ಡಿಯಲ್ಲಿ ಈವರೆಗೆ ಗೆಲುವಿನ ಮುಖ ಕಾಣುವಲ್ಲಿ ವಿಫಲವಾದ ತೆಲುಗು ಟೈಟಾನ್ಸ್ 7ನೇ ಸೋಲಿನೊಂದಿಗೆ ದಿಕ್ಕು ತಪ್ಪಿದೆ.
ಶನಿವಾರದ ಮುಖಾಮುಖಿಯಲ್ಲಿ ಯುಪಿ ಯೋಧ 39-33 ಅಂತರದಿಂದ ಟೈಟಾನ್ಸ್‌ಗೆ ಆಘಾತವಿಕ್ಕಿತು. ಇದು ಟೈಟಾನ್ಸ್‌ನ 9ನೇ ಪಂದ್ಯ.ಉಳಿದೆರಡು ಪಂದ್ಯಗಳನ್ನು ಅದು ಟೈ ಮಾಡಿಕೊಂಡಿದೆ.
ಯುಪಿ ಪರ ಶ್ರೀಕಾಂತ್ ಜಾಧವ್, ಸುರೇಂದರ್ ಗಿಲ್, ನಿತೀಶ್ ಕುಮಾರ್ ಸಾಂ ಕ ಪ್ರದರ್ಶನ ನೀಡಿ ತಲಾ 7 ಅಂಕ ಗಳಿಸಿ ಕೊಟ್ಟರು. ತೆಲುಗು ಟೈಟಾನ್ಸ್‌ನ ರೈಡರ್‌ಗಳಾದ ರಜನೀಶ್ ಮತ್ತು ಅಂಕಿತ್ ಬೇನಿವಾಲ್ (ತಲಾ 9 ಅಂಕ) ಉತ್ತಮ ಹೋರಾಟ ನೀಡಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು.
ಅಂತಿಮ ಕ್ಷಣದಲ್ಲಿ ಗೆದ್ದ ದಿಲ್ಲಿ
ದಿನದ ಮೊದಲ ಪಂದ್ಯದಲ್ಲಿ ವಿಜಯ್ ಕುಮಾರ್ ಅವರ ಸೂಪರ್ ರೈಡಿಂಗ್ ಸಾಹಸದಿಂದ ಹರ್ಯಾಣ ಸ್ಟೀಲರ್ ವಿರುದ್ಧ ದಬಾಂಗ್ ದಿಲ್ಲಿ 28-25 ಅಂತರದಿಂದ ಗೆಲುವು ಸಾಧಿಸಿ ಮತ್ತೆ ಹಳಿ ಏರಿತು.
ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದು ನಿಮಿಷ ಬಾಕಿ ಇರುವಾಗ 2 ಅಂಕದಮುನ್ನಡೆ ಹೊಂದಿದ್ದ ಹರ್ಯಾಣ ತನ್ನ ಅತಿಯಾದ ಆತ್ಮವಿಶ್ವಾಸದ ಆಟಕ್ಕಿಳಿದು ಕೈ ಸುಟ್ಟುಕೊಂಡಿತು.
ಇದನ್ನೂ ಓದಿ:ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ
ಗಾಯದ ಸಮಸ್ಯೆಯಿಂದ ಚೇತರಿಸಿ ಆಡಲಿಳಿದ ನವೀನ್ ಕುಮಾರ್ ಅಷ್ಟೇನೂ ಯಶಸ್ವಿಯಾಗಲಿಲ್ಲ. ಅವರು ಕೇವಲ 5 ಅಂಕಕ್ಕೆ ಸೀಮಿತರಾದರು. ಆದರೆ ಮತ್ತೋರ್ವ ರೈಡರ್ ವಿಜಯ್ ಕುಮಾರ್ 11 ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಯಾಣ ಪರ ಆಶಿಷ್, ಮೀತೂ ರೈಡಿಂಗ್‌ನಲ್ಲಿ ತಲಾ 5 ಅಂಕ ಸಂಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.