ಕೋವಿಡ್ ಬಗ್ಗೆ ಸರಿಯಾದ ಮಾಹಿತಿ ನೀಡಿ: ಚೀನಾಗೆ WHO ತರಾಟೆ
Team Udayavani, Mar 18, 2023, 1:47 PM IST
ಜಿನೇವಾ: 2020ರಲ್ಲಿ ಚೀನಾದ ವುಹಾನ್ ಮಾರುಕಟ್ಟೆಯಿಂದ ಸಂಗ್ರಹಿಸಲಾದ ಕೋವಿಡ್-19 ಸಂಬಂಧಿತ ಸ್ಯಾಂಪಲ್‌ಗಳ ಬಗ್ಗೆ ಚೀನಾ ಪಾರದರ್ಶಕ ಮಾಹಿತಿಗಳನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಎಚ್ಚರಿಕೆ ನೀಡಿದೆ.
ಕೋವಿಡ್-19 ಬಗ್ಗೆ ಚೀನಾ ನಡೆಸಿದ್ದ ತನಿಖೆಗಳ ಬಗ್ಗೆಯೂ ತಿಳಿಸುವಂತೆ ಡಬ್ಲೂಎಚ್‌ಒ ಸೂಚನೆ ನೀಡಿದೆ. ಕೇಂದ್ರ ಚೀನಾದ ವುಹಾನ್ ಮಾರುಕಟ್ಟೆಯ ದಿ ಹುಆನನ್ ಮಾರುಕಟ್ಟೆ ಕೋವಿಡ್-19 ನ ಮೂಲ ಸ್ಥಾನ ಎಂದು ತಿಳಿದು ಬಂದಿತ್ತು. ಅಲ್ಲಿಂದಲೇ ಕೋವಿಡ್ ವೈರಸ್ 2019 ರಲ್ಲಿ ಚೀನಾದಾದ್ಯಂತ ಪಸರಿಸಿ ಆ ಬಳಿಕ ವಿಶ್ವದಾದ್ಯಂತ ಹಬ್ಬಿತ್ತು.
ಇದೀಗ ಕೋವಿಡ್-19 ಬಗೆಗಿನ ಪ್ರಾಥಮಿಕ ತನಿಖೆಯ ವರದಿಗಳನ್ನು ಚೀನಾ ನೀಡದ್ದಕ್ಕೆ ಚೀನಾ ವಿರುದ್ಧ ತಿರುಗಿ ಬಿದ್ದಿರುವ ವಿಶ್ವ ಆರೋಗ್ಯ ಸಂಸ್ಥೆ,ʻ ಚೀನಾ ತಕ್ಷಣವೇ ಕೋವಿಡ್-19 ಬಗೆಗಿನ ಪ್ರತಿಯೊಂದು ಮಾಹಿತಿಯನ್ನೂ ಜಗತ್ತಿಗೆ ನೀಡಬೇಕು.ನಿಜವಾಗಿಯೂ ಈ ಮಾಹಿತಿಗಳನ್ನು ಚೀನಾ ಮೂರು ವರ್ಷದ ಮೊದಲೇ ನೀಡಬೇಕಾಗಿತ್ತುʼ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಟೆಡ್ರಸ್ ಆಧನಮ್ ಗೇಬ್ರೆಯಾಸಸ್ ಶುಕ್ರವಾರ ಜಿನೇವಾದಲ್ಲಿ ಎಚ್ಚರಿಕೆ ನೀಡಿದ್ದಾರೆ.
ವೈರಸ್ ಬಗೆಗಿನ ಪ್ರತಿಯೊಂದು ಮಹಿತಿಗಳನ್ನೂ ಅತ್ಯಂತ ಪಾರದರ್ಶಕವಾಗಿ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಕೋವಿಡ್-19 ಬಗೆಗಿನ ತನಿಖೆಯಿಂದ ಹೊರಬಿದ್ದಿರುವ ಸತ್ಯಗಳನ್ನೂ ತಿಳಿಸುವಂತೆ ಸೂಚನೆ ನೀಡಿದ್ಧಾರೆ.
ಇದನ್ನೂ ಓದಿ: ವಿಷ್ಣು ರೂಪದ ಅದೃಷ್ಟದ ಕಲ್ಲೆಂದು 2 ಕೋಟಿ ರೂ. ವಂಚನೆಗೆ ಯತ್ನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.