ಪಿಪಿಎಫ್ ಖಾತೆ ಮೆಚ್ಯೂರಿಟಿ ಅನಂತರದ ಆಯ್ಕೆಗಳೇನು?
Team Udayavani, Dec 20, 2020, 6:30 AM IST
ಹೂಡಿಕೆದಾರರು 15 ವರ್ಷಗಳ ಬಳಿಕ ಮತ್ತೆ 5 ವರ್ಷಗಳಿಗೆ ಅದನ್ನು ವಿಸ್ತರಿಸುವ ಅವಕಾಶ ಇದೆ. ಇದಕ್ಕಾಗಿ ಖಾತೆ ವಿಸ್ತರಣೆಯ ಅರ್ಜಿ ಸಲ್ಲಿಸಬೇಕು. ಮೆಚ್ಯೂರಿಟಿ ಆದ ಒಂದು ವರ್ಷದೊಳಗೆ ಇದನ್ನು ಮಾಡಬೇಕು.
ಸುರಕ್ಷಿತ ಹೂಡಿಕೆಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್) ಅತ್ಯುತ್ತಮ ಆಯ್ಕೆ. ಸರಕಾರದ ಬೆಂಬಲ ಇರುವುದರಿಂದ ನಮ್ಮ ಉಳಿತಾಯಕ್ಕೆ ಹೆಚ್ಚಿನ ಖಾತರಿ ಲಭಿಸುತ್ತದೆ. ಇಷ್ಟಲ್ಲದೇ ನಿಶ್ಚಿತವಾದ ರಿಟರ್ನ್ಸ್ ಮತ್ತು ಬಡ್ಡಿ ದರ ಲಭಿಸುತ್ತದೆ. ಹದಿನೈದು ವರ್ಷಗಳಿಗೆ ಪಿಪಿಎಫ್ ಮೆಚ್ಯೂರಿಟಿ ಆಗುತ್ತದೆ.
ಇದರಲ್ಲಿ ಹೂಡಿಕೆ ಮಾಡುವ ಸಂದರ್ಭ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಡುವುದು ಆವಶ್ಯಕ. ಒಂದು ವರ್ಷಕ್ಕೆ ಕನಿಷ್ಠ ಎಂದರೆ 500 ರೂ. ಮತ್ತು ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು. ಇದು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ದೊರೆಯುತ್ತದೆ.
ಪಿಪಿಎಫ್ನಲ್ಲಿ ಮಾಡುವ ಹೂಡಿಕೆಗೆ ಆದಾಯ ತೆರಿಗೆಯಲ್ಲಿ ಸೆಕ್ಷನ್ 80ಇ ಅಡಿ ವಿನಾಯಿತಿ ಸಿಗುತ್ತದೆ. ಹೂಡಿಕೆ ಮಾಡುವ ಮೊತ್ತ, ಅದರಿಂದ ಗಳಿಸುವ ಬಡ್ಡಿ ಹಾಗೂ ಮೆಚ್ಯೂರಿಟಿ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ವಿನಾಯಿತಿ (Exempt) ನೀಡಲಾಗುತ್ತದೆ. ಒಂದು ಸಲ ಪಿಪಿಎಫ್ ಮೊತ್ತ ಮೆಚ್ಯೂರ್ ಆದ ಅನಂತರ ಹೂಡಿಕೆದಾರರ ಮುಂದೆ ಮೂರು ಆಯ್ಕೆಗಳಿರುತ್ತವೆ.
– ಪಿಪಿಎಫ್ ಖಾತೆಯನ್ನು ಕೊನೆಗೊಳಿಸುವುದು.
– ಹೊಸದಾಗಿ ಯಾವುದೇ ಮೊತ್ತ ಹೂಡಿಕೆ ಮಾಡದೆ ಇನ್ನೂ ಐದು ವರ್ಷ ಮುಂದುವರಿಸುವುದು.
– ಪಿಪಿಎಫ್ ಖಾತೆ ಕೊನೆಗೊಳಿಸುವುದು. ಪಿಪಿಎಫ್ ಖಾತೆ ಕೊನೆಗೊಳಿಸಿ, ಆ ಮೊತ್ತವನ್ನು ಉಳಿತಾಯ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.
ಇದಕ್ಕಾಗಿ ಆಯಾ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪಿಪಿಎಫ್ ಖಾತೆಯ ಒರಿಜಿನಲ್ ಪಾಸ್ ಬುಕ್, ಕ್ಯಾನ್ಸಲ್ ಆದ ಚೆಕ್ ಹಾಗೂ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಹೂಡಿಕೆದಾರರಿಗೆ ತತ್‌ಕ್ಷಣಕ್ಕೆ ಹಣದ ಅಗತ್ಯ ಇಲ್ಲ ಎಂದಾದಲ್ಲಿ ಪಿಪಿಎಫ್ ಖಾತೆಗೆ ಯಾವುದೇ ಹೆಚ್ಚುವರಿ ಹಣ ಹಾಕದೆ ಅದನ್ನು ಮುಂದುವರಿಸಬಹುದು. ಅದಕ್ಕೆ ಬಡ್ಡಿ ಬರುತ್ತದೆ. ಇದಕ್ಕೆ ಯಾವುದೇ ಅರ್ಜಿ ನೀಡುವ ಅಗತ್ಯ ಇಲ್ಲ. ಹೂಡಿಕೆದಾರರಿಗೆ ಆರ್ಥಿಕ ವರ್ಷದಲ್ಲಿ ಒಮ್ಮೆ ಹಣ ವಿಥ್ ಡ್ರಾ ಮಾಡುವ ಆಯ್ಕೆ ಇರುತ್ತದೆ.
ಪಿಪಿಎಫ್ ಖಾತೆಯನ್ನು ಐದು ವರ್ಷಗಳಂತೆ ಎಷ್ಟು ಅವಧಿಗಳಿಗೆ ಬೇಕಾದರೂ ವಿಸ್ತರಿಸಬಹುದಾಗಿದೆ. ಪಿಪಿಎಫ್ ಖಾತೆ ಎಪ್ರಿಲ್‌ನಲ್ಲಿ ಮೆಚ್ಯೂರಿಟಿ ಆಗುತ್ತದೆ. ಆದ್ದರಿಂದ ಹೊಸದಾಗಿ ಹೂಡಿಕೆ ಮಾಡುವತ್ತ ಚಿಂತಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.