ಆನ್‌ಲೈನ್ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ
ಆರ್‌ಟಿಒ ಕಚೇರಿಯಲ್ಲಿ ತಂತ್ರಜ್ಞಾನದ ಉಪಯೋಗ
Team Udayavani, Jan 29, 2022, 6:05 AM IST
ಉಡುಪಿ: ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ನೀಡಲಾಗುವ ಬಹುತೇಕ ಎಲ್ಲ ಸೇವೆಗಳು ಆನ್‌ಲೈನ್ ಮೂಲಕ ಲಭ್ಯವಾಗುತ್ತಿದ್ದು, ಜನರು ಕಚೇರಿಗೆ ಅಲೆದಾಡುವುದು ತಪ್ಪಿದೆ. ತಾಂತ್ರಿಕ ಸಮಸ್ಯೆ ಎದುರಾದರೆ ಕಚೇರಿಗೆ ಹೋಗಲೇಬೇಕು.
ವಿಳಾಸ ಬದಲಾವಣೆ, ಸಾಲ ನಮೂದು ವಿವರ,ಆರ್‌ಸಿ, ಎನ್‌ಒಸಿ ಬದಲಾವಣೆ, ವಾಹನ ಪರಿಶೀಲನೆ, ವಾಹನ ಚಾಲನ ಪರವಾನಿಗೆ ಪತ್ರ ವಿತರಣೆಗೂ ಮುನ್ನ ಪರೀಕ್ಷೆ ಸಹಿತವಾಗಿ ಟ್ರಾನ್ಸ್‌ಪೋರ್ಟ್ ಸಂಬಂಧಿ ಸೇವೆಗಳಿಗೆ ಜನರು ಆರ್‌ಟಿಒಗೆ ಬರಬೇಕು. ಉಳಿದಂತೆ ಎಲ್ಲ ಸೇವೆಗಳೂ “ಪರಿವಾಹನ್’ನಲ್ಲಿ ಲಭ್ಯವಿವೆ.
ತ್ವರಿತ ಸೇವೆ
ಈ ಹಿಂದೆ “ಆಧಾರ್’ ಆಧರಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬಹುತೇಕ ಸೇವೆ ನೀಡಲು ಅವಕಾಶತ್ತು, ಆದರೆ ತಂತ್ರಜ್ಞಾನದ ಉಪಯೋಗ ಪಡೆದುಕೊಂಡಿರಲಿಲ್ಲ. ಇದರಿಂದ ಜನರು ಅನಾವಶ್ಯಕವಾಗಿ ಆರ್‌ಟಿಒಗೆ ಅಲೆಯುವಂತಾಗಿತ್ತು. ಅಧಿಕಾರಿಗಳೂ ಒತ್ತಡಕ್ಕೊಳಗಾಗಿ ಕಾಲಮಿತಿಯಲ್ಲಿ ಜನರಿಗೆ ಸೇವೆ ನೀಡಲು ಆಗುತ್ತಿರಲಿಲ್ಲ. ಈಗ 30 ಸೇವೆಗಳು ಆನ್‌ಲೈನ್‌ನಲ್ಲಿ ಸಿಗುತ್ತಿವೆ.
ಯಾವೆಲ್ಲ ಸೇವೆ ಲಭ್ಯ?
ಕಲಿಕೆ ಚಾಲನೆ ಪರವಾನಿಗೆ ಸಹಿತ 30 ಸೇವೆಗಳು ಆನ್‌ಲೈನ್ ಮೂಲಕ ಲಭ್ಯ. ಆರ್‌ಟಿಒ ಅಧಿಕೃತ ಜಾಲ
ತಾಣದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ದಾಖಲೆ ಅಪ್‌ಲೋಡ್ ಮಾಡಿ ಸೇವೆ ಪಡೆಯಬಹುದು. ಕಲಿನೆ ಚಾಲನೆ ಅನುಜ್ಞಾಪತ್ರ, ಹೊಸ ವರ್ಗಗಳ ಸೇರ್ಪಡೆ, ಕಲಿಕೆ ಚಾಲನೆ ಅನುಜ್ಞಾಪತ್ರದಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಕಲಿಕೆ ಚಾಲನೆ ಅನುಜ್ಞಾಪತ್ರದ ನಕಲು, ನಿರ್ವಾಹಕ ಚಾಲನ ಅನುಜ್ಞಾಪತ್ರ, ಸಾರಥಿ ವಿಭಾಗದ 11 ಸೇವೆಗಳು, ಮಾರಾಟಗಾರರ ಹಂತದಲ್ಲಿ ಹೊಸ ವಾಹನ ನೋಂದಣಿ, ವಾಹನ ಮಾಲಕತ್ವ ವರ್ಗಾವಣೆ, ನಕಲು ನೋಂದಣಿ ಪ್ರಮಾಣಪತ್ರ, ಮೋಟಾರ್ ಕ್ಯಾಬ್ ಪರ್ಮಿಟ್ ನೀಡುವಿಕೆ ಮತ್ತು ನವೀಕರಣ, ಸರಕು ಸಾಗಣೆ ವಾಹನ ಪರವಾನಿಗೆ ನೀಡುವಿಕೆ ಮತ್ತು ನವೀಕರಣ, ಅಟೋರಿಕ್ಷಾ ಕ್ಯಾಬ್ ಪರ್ಮಿಟ್ ನವೀಕರಣ ಸಹಿತ ಹಲವಾರು ಸೇವೆಗಳನ್ನು ಆನ್‌ಲೈನ್ ಮೂಲಕವೇ ಮಾಡಬಹುದಾಗಿದೆ.
ಕೆಲವೊಮ್ಮೆ ತಾಂತ್ರಿಕ ಸಮಸ್ಯೆ
ಆದರೂ ಕೆಲವೊಮ್ಮೆ ತಾಂತ್ರಿಕ ದೋಷ, ಸರ್ವರ್ ಸಮಸ್ಯೆಯಿಂದ ಕೆಲವು ಸೇವೆಗಳ ಲಿಂಕ್ ತೆರೆದುಕೊಳ್ಳುವುದಿಲ್ಲ. ಕೆಲವು ಲಿಂಕ್‌ಗಳಲ್ಲಿ ದಾಖಲೆ ಅಪ್‌ಲೋಡ್ ಮಾಡಿದ ಬಳಿಕ ಸರ್ವರ್ ಎರರ್ ಎದುರಾಗುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.