Public Works: ವಿದ್ಯಾರ್ಥಿಗಳು ಬಳಸುವ ದಾರಿಯಲ್ಲಿ ಕಾಂಕ್ರೀಟ್‌ ಕಾಲುಸಂಕ

ಇಂಥ 22 ಕಾಲುಸುಂಕ ಗುರುತಿಸಿದ ಲೋಕೋಪಯೋಗಿ ಇಲಾಖೆ

Team Udayavani, Sep 12, 2024, 7:15 AM IST

Kalusanka

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಅವಲಂಬಿಸಿರುವಂತಹ ಕಚ್ಚಾ ಕಾಲು ಸಂಕಗಳನ್ನು ತೆರವುಗೊಳಿಸಿ, ಕಾಂಕ್ರೀಟ್‌ ಕಾಲು ಸಂಕಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.

ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ 22 ಕಡೆಗಳಲ್ಲಿ ಇಂತಹ ಕಾಲು ಸಂಕಗಳನ್ನು ನಿರ್ಮಿಸಲಾಗುವುದು. ಆಯಾ ಕ್ಷೇತ್ರವಾರು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು, ಶಾಸಕರು, ಜನಪ್ರತಿನಿಧಿಗಳಿಂದ ಬಂದಿರುವ ಅಹವಾಲುಗಳ ಆಧಾರದಲ್ಲಿ ಈ ಪಟ್ಟಿ ಮಾಡಿಕೊಳ್ಳಲಾಗಿದೆ. ಇನ್ನೆರಡು ತಿಂಗಳಲ್ಲಿ ಟೆಂಡರ್‌ ಅಂತಿಮಗೊಳಿಸಿ ಮುಂದಿನ ಮಳೆಗಾಲದೊಳಗೆ ಜನರ ಉಪಯೋಗಕ್ಕೆ ಸಿಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

22 ಕಾಲು ಸಂಕ, 3 ಕೋ.ರೂ.
ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ 22 ಕಾಲು ಸಂಕ ಮಂಜೂರಾಗಿದ್ದು, ಅವುಗಳಿಗೆ 404 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ತಾಲೂಕು ಕಿನ್ಯ ಬೆಳರಿಂಗೆ ಬಳಿ (8 ಲಕ್ಷರೂ), ಪಾವೂರು ಗ್ರಾಮ ಕಿಲ್ಲೂರು ಬೈದರ್‌ಲಚ್ಚಿಲ್‌(8 ಲಕ್ಷರೂ.), ಕೊಣಾಜೆ ಗ್ರಾಮದ ಅಡ್ಕೆರೆಪಡ್ಪು -ಮುಲರ ರಸ್ತೆ (22 ಲಕ್ಷ ರೂ.), ಬಂಟ್ವಾಳ ತಾಲೂಕು ಪಿಲಿಮೊಗರು ಗ್ರಾಮದ ಪೆಜಕಳದಲ್ಲಿ (10 ಲಕ್ಷ ರೂ.), ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಬೈಲತೋಟಕ್ಕೆ ಹೋಗಲು ಪರಂಬೋಕು ತೋಡಿಗೆ ಕಾಲುಸಂಕ (10 ಲಕ್ಷ ರೂ.), ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯ ನಿಸರ್ಗಧಾಮ ಸೀತಾ ಸೋಂಪ ಮನೆ ಹತ್ತಿರ(10 ಲಕ್ಷ ರೂ.),

ಕಲ್ಲಮುಂಡ್ಕೂರು ದೈಲಬೆಟ್ಟು ದೇವಸ್ಥಾನ ಬಳಿ (14 ಲಕ್ಷ ರೂ.), ಮಂಗಳೂರು ಉತ್ತರ ವ್ಯಾಪ್ತಿಯ ಮಂಗಳೂರು ತಾಲೂಕು ಅಡ್ಯಾರ್‌ ಗ್ರಾ.ಪಂ. ಅರ್ಕುಳ ಸೀತಾರಾಮ ಅವರ ಮನೆ ಬಳಿ (15 ಲಕ್ಷ ರೂ), ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಕೊಳವೂರು ಪಂಜ ಸದಾಶಿವ ಶೆಟ್ಟಿ ಮನೆ ಬಳಿ (8 ಲಕ್ಷ ರೂ.), ಗಂಜಿಮಠ ಗ್ರಾ.ಪಂ. ಬಡಗುಳಿಪಾಡಿ ಗ್ರಾಮದ ಚಂದ್ರಾವತಿ ಮನೆ ಬಳಿ, ಕೆಳಗಿನಬೈಲು ಮಟ್ಟಿ ಯತೀಶ್‌ ಶೆಟ್ಟಿ ಮನೆ ಬಳಿ (15 ಲಕ್ಷ ರೂ.), ಅಡ್ಯಾರ್‌ ಗ್ರಾ.ಪಂ. ವ್ಯಾಪ್ತಿಯ ಅಡ್ಯಾರ್‌ ಆನಂದ ಬೆಳ್ಚಾಡರ ಮನೆ ಬಳಿ( 15 ಲಕ್ಷ ರೂ.), ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮನಪಾ ಮಣ್ಣಗುಡ್ಡ ವಾರ್ಡ್‌ ಬರ್ಕೆ ರಾಮಮೇಸ್ತ್ರಿ ಕಾಂಪೌಂಡ್‌ ರಾಜಕಾಲುವೆ ಬಳಿ ಕಾಲು ಸಂಕ (8 ಲಕ್ಷ ರೂ.),

ಕೊಡಿಯಾಲ್‌ಬೈಲ್‌ ವಾರ್ಡ್‌ ಚಂದ್ರಿಕಾ ಬಡಾವಣೆ ಬಳಿ (15 ಲಕ್ಷ ರೂ.), ಅಳಪೆ ದಕ್ಷಿಣ ವಾರ್ಡ್‌ ವಿಜಯ ನಗರ ಬಳಿ (15 ಲಕ್ಷ ರೂ.), ಕದ್ರಿ ದಕ್ಷಿಣದ ದಿಗಂತ ಮುದ್ರಣ ಬಳಿ(15 ಲಕ್ಷ ರೂ.), ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಿಲಿಮೊಗರು ಪೆಜಕಳ(10 ಲ.ರೂ.), ನೆಟ್ಲಮುಟ್ನೂರು ಉರ್ದಿಲ (11 ಲ.ರೂ.), ಕರಿಯಂಗಳ ಆಚಾರಿದೋಟ (8 ಲ.ರೂ.), ಸರಪಾಡಿಯ ಅರ್ಬಿ ಬಜ (9 ಲ.ರೂ), ಪುತ್ತೂರಿನ ಕೊಳ್ತಿಗೆ ಮಣಿಕ್ಕರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ (40 ಲಕ್ಷ ರೂ.), ಸುಳ್ಯ ಕ್ಷೇತ್ರದಲ್ಲಿ ಕಡಬ ತಾಲೂಕು ಕೊಂಬಾರು ಅಲ್ವೆ-ಕಟ್ಟೆ ಹೊಳೆಗೆ ಬಿರ್ಮರೆಗುಂಡಿಯಲ್ಲಿ(50 ಲ.ರೂ.), ಮುಜೂರು ಮುಂಡಡ್ಕ ಓಟಿಕಜಿಯ ಶಾಲಾ ಮಕ್ಕಳಿಗಾಗಿ (60 ಲ.ರೂ.) ಕಾಲುಸಂಕ ನಿರ್ಮಾಣವಾಗಲಿದೆ.

ಅಪಾಯಕಾರಿ ಇರುವ ಕಡೆ
ಕಾಲುಸಂಕಗಳು ಬಹುತೇಕ ಕಡೆ ತೋಡುಗಳಿಗೆ ರಚನೆಯಾಗಲಿವೆ. ಜನರು, ಮುಖ್ಯವಾಗಿ ವಿದ್ಯಾರ್ಥಿಗಳು ಓಡಾಡುವ ಕಡೆ ಇರುವ ಕಚ್ಚಾ ಕಾಲುಸಂಕಗಳು ಅಪಾಯಕಾರಿ ಇರುವ ಹಿನ್ನೆಲೆಯಲ್ಲಿ ಈ ಕಾಲು ಸಂಕ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ.

301 ಕಡೆಗಳಲ್ಲಿ ಕಾಲು ಸಂಕಕ್ಕೆ ಪ್ರಸ್ತಾವ
ಜಿಲ್ಲೆಯಲ್ಲಿ 22 ಕಾಲುಸಂಕಕ್ಕೆ ಅನುಮೋದನೆ ಬಂದಿದ್ದರೆ, ಇನ್ನೂ 301 ಕಡೆಗಳಲ್ಲಿ ಕಾಲುಸಂಕಕ್ಕೆ ಪ್ರಸ್ತಾವನೆ ಮುಖ್ಯ ಎಂಜಿನಿಯರ್‌ಕಚೇರಿಗೆ ಸಲ್ಲಿಕೆಯಾಗಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ. 64 ಕೋಟಿ ರೂ. ಮೊತ್ತದ ಈ ಯೋಜನೆಗೆ ಮುಂದೆ ಹಂತ ಹಂತವಾಗಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.
-ಅಮರ್‌ನಾಥ್‌ ಜೈನ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಮಂಗಳೂರು

ಉಡುಪಿಗೆ 3 ಕೋ.ರೂ
ಉಡುಪಿಯಲ್ಲಿ 30 ಕಾಲು ಸಂಕಗಳಿಗೆ 3 ಕೋಟಿ ರೂ. ಮಂಜೂರಾಗಿದೆ. ಉಡುಪಿ-2, ಕಾಪು-7, ಬ್ರಹ್ಮಾವರ-2, ಬೈಂದೂರು-4, ಕುಂದಾಪುರ-2, ಹೆಬ್ರಿ-2 ಹಾಗೂ ಕಾರ್ಕಳ ವ್ಯಾಪ್ತಿಯಲ್ಲಿ 11 ಕಾಲುಸಂಕಗಳನ್ನು ನಿರ್ಮಿಸಲಾಗುವುದು.


– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

PDO-Arrest

Mangaluru: ನಿವೃತ್ತ ಪಿಡಿಒ ಕೊಲೆ ಆರೋಪಿ ಬಂಧನ

Adyar: ಹೊಂಡ ಗುಂಡಿಯಿಂದ ಸಂಕಷ್ಟ, ಪಾದಚಾರಿಗಳಿಗೆ ಕೆಸರಿನ ಸಿಂಚನ

Adyar: ಹೊಂಡ ಗುಂಡಿಯಿಂದ ಸಂಕಷ್ಟ, ಪಾದಚಾರಿಗಳಿಗೆ ಕೆಸರಿನ ಸಿಂಚನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.