ಮತ್ತೆ ಕಂಗೊಳಿಸಲಿದೆ ಪಂಪ್‌ವೆಲ್ : ಮಹಾವೀರ ವೃತ್ತದ ಕಲಶ ನಿರ್ಮಾಣ ಸದ್ಯದಲ್ಲಿಯೇ ಆರಂಭ
Team Udayavani, Feb 23, 2022, 2:20 PM IST
ಮಹಾನಗರ : ಒಂದು ಕಾಲದಲ್ಲಿ ನಗರದ ಆತ್ಮದಂತೆ ಕಂಗೊಳಿಸುತ್ತಿದ್ದ ಪಂಪ್‌ವೆಲ್‌ನ ಮಹಾವೀರ ವೃತ್ತದ ಕಲಶ ಮತ್ತೂಮ್ಮೆ ಅದೇ ಜಾಗದಲ್ಲಿ ಕಂಗೊಳಿಸುವ ನಿರೀಕ್ಷೆಯಲ್ಲಿದೆ.
ಜೈನ ಸಮುದಾಯದ ವತಿಯಿಂದ ನೂತನ ಕಲಶ ನಿರ್ಮಾಣವಾಗಲಿದೆ. ಮೇಲ್ಸೇತುವೆ ಕಾಮಗಾರಿ ವೇಳೆ ಕೆಲವು ವರ್ಷಗಳ ಹಿಂದೆ ಪಂಪ್‌ವೆಲ್ ಪ್ರದೇಶದಲ್ಲಿದ್ದ ಕಲಶವನ್ನು ತೆರವುಗೊಳಿಸಲಾಗಿತ್ತು. ಆ ವೇಳೆ ತೀವ್ರ ಆಕ್ಷೇಪ ಬಂದರೂ, ಬಳಿಕ ಅದೇ ಪ್ರದೇಶದಲ್ಲಿ ಕಲಶ ಮರು ಸ್ಥಾಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಭರವಸೆ ಬಂದಿತ್ತು. ಆದರೆ, ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡರೂ, ಕಲಶ ನಿರ್ಮಾಣಕ್ಕೆ ಮಾತ್ರ ಮುಂದಾಗಿರಲಿಲ್ಲ. ಜೈನ ಸಮುದಾಯ ಮತ್ತೆ ಪಾಲಿಕೆಗೆ ಮನವಿ ಸಲ್ಲಿಸಿದ್ದು, ಪಾಲಿಕೆ ಕೂಡ ಬಹುತೇಕ ಸಮ್ಮತಿ ನೀಡಿದೆ. ಅದರಂತೆ ಸದ್ಯದಲ್ಲೇ ಕಲಶ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾ ಣೋತ್ಸವವನ್ನು ರಾಷ್ಟ್ರದ್ಯಂತ 2001ರಿಂದ 2002ರ ವರೆಗೆ ಆಚ ರಿ ಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಅದÃ ಂತೆ ಮಂಗಳೂರು ಮಹಾನಗರ ಪಾಲಿಕೆಯು “ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ ಹಾಗೂ 20 ಟನ್ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಯಿತು.
ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ 2003ರ ಜನವರಿ ತಿಂಗಳಿನಲ್ಲಿ ಆರಂಭಗೊಂಡು 6 ತಿಂಗಳ ಬಳಿಕ ಉದ್ಘಾಟನೆ ನೆರವೇರಿತ್ತು. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವೇಳೆ ಈ ಕಲಶವನ್ನು ತೆರವು ಗೊಳಿ ಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇಡಲಾಗಿದೆ. ಇದೀಗ ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.
ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ಮತ್ತೆ ಪ್ರಾರಂಭ : ಡಿ.ಕೆ.ಶಿವಕುಮಾರ್
ಕಲಶ ನಿರ್ಮಾಣವೆಲ್ಲಿ?
ನಗರವನ್ನು ಪ್ರವೇಶಿಸುವ ಪಂಪ್‌ವೆಲ್‌ನಲ್ಲೇ ಕಲಶ ಮತ್ತೆ ಮರುಸ್ಥಾಪನೆಗೊಳ್ಳಲಿದೆ. ಪಂಪ್ ವೆಲ್ ಮೇಲ್ಸೇತುವೆ ಪಕ್ಕದಲ್ಲಿ ಅಂದರೆ ಪಂಪ್‌ವೆಲ್-ಪಡೀಲು ತಿರುವು ಪಡೆ ಯುವ ಜಾಗದಲ್ಲಿ ಸ್ಥಾಪನೆ ಮಾಡಲು ಉದ್ದೇಶಿ ಸಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಐಲ್ಯಾಂಡ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಕಲಶ ಸ್ಥಾಪನೆ ಜತೆಗೆ ಸುಂದರೀಕರಣ ಮತ್ತು ಮಹಾವೀರ ವೃತ್ತ ಫಲಕ ಹಾಕಲಾಗುತ್ತದೆ. ಇದರ ಖರ್ಚು ವೆಚ್ಚವನ್ನು ಮಂಗಳೂರಿನ ಜೈನ ಸಮಾಜವೇ ಭರಿಸಲು ಉದ್ದೇಶಿಸಲಾಗಿದೆ.
ಸೂಕ್ತ ಕ್ರಮ
ಮಹಾವೀರ ವೃತ್ತದಲ್ಲಿ ಜನಾಕರ್ಷಣೆ ಪಡೆದಿದ್ದ ಕಲಶವನ್ನು ಪಂಪ್‌ವೆಲ್ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣದ ವೇಳೆ ತೆರವು ಗೊಳಿಸಲಾಗಿತ್ತು. ಇದೀಗ ಪಂಪ್‌ವೆಲ್‌ನಲ್ಲಿ ಮತ್ತೆ ಕಲಶ ಸ್ಥಾಪನೆ ಕುರಿತಂತೆ ಜೈನ ಸಮುದಾಯದಿಂದ ಮನವಿ ಬಂದಿದೆ. ಆ ಪ್ರದೇಶದಲ್ಲಿ ಕಲಶ ನಿರ್ಮಾಣ ಅನುಮತಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
ಜೈನ ಸಮುದಾಯದಿಂದ ಸ್ಥಾಪನೆ
ಪಂಪ್‌ವೆಲ್‌ನಲ್ಲಿ ಜೈನ ಸಮುದಾಯದ ವತಿಯಿಂದ ಮತ್ತೆ ಕಲಶ ಮರು ಸ್ಥಾಪನೆಗೊಳ್ಳಲಿದೆ. ಈಗಾಗಲೇ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದ್ದು, ಈ ಕುರಿತು ಮಾತುಕತೆ ನಡೆಸಿ ತೀರ್ಮಾನಿಸಲಾಗಿದೆ. ಇದರ ಖರ್ಚು ವೆಚ್ಚವನ್ನು ನಗರದ ಜೈನ ಸಮಾಜವೇ ಭರಿಸಲಿದೆ. ವೃತ್ತದಲ್ಲಿ (ಐಲ್ಯಾಂಡ್) ಕಲಶ ಇಟ್ಟು ಸುಂದರೀಕರಣಗೊಳಿಸಲಾಗುತ್ತದೆ. ಈ ಪ್ರದೇಶದಲ್ಲಿ ಮಹಾವೀರ ವೃತ್ತ ಎಂಬ ಹೆಸರಿಸಲಾಗುವುದು.
-ಪುಷ್ಪರಾಜ್ ಜೈನ್, ಭಾರತೀಯ ಜೈನ್ ಮಿಲನ್ ರಾಜ್ಯಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.