![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 24, 2022, 10:25 PM IST
ಬೆಂಗಳೂರು: ನಾಯಕ ನವೀನ್ ಕುಮಾರ್ ಗೈರಲ್ಲಿ ಅರ್ಧ ಶಕ್ತಿಯನ್ನೇ ಕಳೆದುಕೊಂಡ ದಬಾಂಗ್ ದಿಲ್ಲಿ ತಂಡ 4ನೇ ಸೋಲನುಭವಿಸಿದೆ.
ಸೋಮವಾರದ ಮುಖಾಮುಖಿಯಲ್ಲಿ, 11ನೇ ಸ್ಥಾನಿಯಾಗಿದ್ದ ಪುನೇರಿ ಪಲ್ಟಾನ್ 42-25 ಅಂತರದಿಂದ ದಿಲ್ಲಿಯನ್ನು ಕೆಡವಿ 6ನೇ ಜಯ ಸಾಧಿಸಿತು. ಜತೆಗೆ ಒಂದು ಸ್ಥಾನ ಮೇಲೇರಿತು.
ಪುನೇರಿ ಸಾಂ ಕ ಆಟದ ಮೂಲಕ ಗಮನ ಸೆಳೆಯಿತು. ರೈಡರ್‌ಗಳಾದ ಮೋಹಿತ್ ಗೋಯತ್ (10), ಅಸ್ಲಾಮ್ ಇನಾಮಾರ್ (8), ನಾಯಕ ನಿತಿನ್ ತೋಮರ್ ಮತ್ತು ಡಿಫೆಂಡರ್ ಸೋಮ್‌ಬೀರ್ (ತಲಾ 6 ಅಂಕ) ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಆದರೆ ದಿಲ್ಲಿ ಕಳಪೆ ಪ್ರದರ್ಶನ ನೀಡಿ ದೊಡ್ಡ ಸೋಲನ್ನು ಹೊತ್ತುಕೊಂಡಿತು. ಆಲ್‌ರೌಂಡರ್ ವಿಜಯ್ (8) ಮತ್ತು ರೈಡರ್ ನೀರಜ್ ನರ್ವಾಲ್ (6)ಒಂದಿಷ್ಟು ಹೋರಾಟ ತೋರಿದರು.
ಮಣಿಂದರ್ 900 ಅಂಕ
ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 41-22 ಭರ್ಜರಿ ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಆಘಾತವಿಕ್ಕಿತು. ಈ ಪಂದ್ಯದ ವಿಶೇಷವೆಂದರೆ ಬೆಂಗಾಲ್ ನಾಯಕ ಮಣಿಂದರ್ ಸಿಂಗ್ ಪ್ರೊ ಕಬಡ್ಡಿಯಲ್ಲಿ 900 ರೈಡಿಂಗ್ ಅಂಕ ಪೂರ್ತಿಗೊಳಿಸಿದ್ದು. ಈ ಪಂದ್ಯದಲ್ಲಿ ಅವರ ಗಳಿಕೆ 13 ಅಂಕ. ಆಲ್‌ರೌಂಡರ್ ರಾಣಾ ಸಿಂಗ್ 4 ಅಂಕ ಗಳಿಸಿ ತಮ್ಮ ಟ್ಯಾಕಲ್ ಅಂಕಗಳನ್ನು 200ಕ್ಕೆ ವಿಸ್ತರಿಸಿದರು. ಮೊಹಮ್ಮದ್ ನಬಿಬಕ್Ò 6 ಅಂಕ ಗಳಿಸಿ ಕೊಟ್ಟರು. ಜೈಪುರ್ ಪರ ಮಿಂಚಿದ್ದು ರೈಡರ್‌ಗಳಾದ ಅರ್ಜುನ್ ದೇಶ್ವಾಲ್ (10) ಮತ್ತು ಅಮಿತ್ ನಗರ್ (6) ಮಾತ್ರ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.