ಶುಕ್ರವಾರ ಒಂದೇ ದಿನ ಪುರಿ ಜಗನ್ನಾಥ ದೇಗುಲಕ್ಕೆ ಹರಿದು ಬಂತು 28 ಲಕ್ಷ ರೂ. ಕಾಣಿಕೆ
Team Udayavani, Nov 13, 2021, 9:30 PM IST
ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ಶುಕ್ರವಾರ ಒಂದೇ ದಿನದಲ್ಲಿ ಹುಂಡಿಗೆ 28 ಲಕ್ಷ ರೂಪಾಯಿ ಗುಪ್ತ ಕಾಣಿಗೆ ಬಂದಿದೆ. ಕಳೆದ 2 ವರ್ಷಗಳಲ್ಲಿ ಒಂದೇ ದಿನದಲ್ಲಿ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆಯಿದು ಎಂದು ದೇಗುಲ ತಿಳಿಸಿದೆ.
“ಶುಕ್ರವಾರ ಪುರಿ ಜಗನ್ನಾಥ ದೇಗುಲದಲ್ಲಿ ಅನಾಲಾ ನವಮಿ ಆಚರಿಸಲಾಗಿದೆ. ಈ ದಿನದಂದು ದೇವರ ಹುಂಡಿಗೆ ಕಾಣಿಕೆ ಅರ್ಪಿಸುವುದರಿಂದ ಒಳಿತಾಗುತ್ತದೆ ಎನ್ನುವ ನಂಬಿಕೆಯಿದೆ. ಆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತಾದಿಗಳು ಹುಂಡಿಗೆ ಕಾಣಿಕೆ ಹಾಕಿದ್ದಾರೆ.
ಒಟ್ಟು 28,10,691 ರೂಪಾಯಿ ನಗದು, 550 ಮಿ.ಗ್ರಾಂ ಬಂಗಾರ ಹಾಗೂ 61.70 ಗ್ರಾಂ. ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಐವರು ಸಿಬ್ಬಂದಿ ಐದು ಗಂಟೆಗಳ ಕಾಲ ಕಾಣಿಕೆ ಎಣಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ 2.5-3 ಲಕ್ಷ ರೂಪಾಯಿ ಕಾಣಿಕೆ ಬರುತ್ತದೆ” ಎಂದು ದೇಗುಲದ ಮಂಡಳಿ ಹೇಳಿದೆ.
ಇದನ್ನೂ ಓದಿ : ಕಾರ್ಯಶೈಲಿ ಬದಲಿಸಿಕೊಳ್ಳಿ; ಹೆಚ್ ಡಿಕೆಯಿಂದ ಮುಖಂಡರಿಗೆ ಒಗ್ಗಟ್ಟು ಮತ್ತು ಸಂಘಟನೆ ಪಾಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.