ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು
Team Udayavani, Sep 26, 2021, 6:19 PM IST
ಪಾಂಡವಪುರ : ರೈತ ಹೋರಾಟಗಾರರಾದ ಕೆ.ಎಸ್. ಪುಟ್ಟಣ್ಣಯ್ಯರವರಂತಹವರೇ ನನ್ನನ್ನು ಕೆಡುವುದಕ್ಕೆ ಸಾಧ್ಯವಾಗಲಿಲ್ಲ. ಅಂತಹದರಲ್ಲಿ ನೀವು ಏನು ಮಾಡಲು ಸಾಧ್ಯವೆಂದು ರೈತ ಸಂಘದ ಕೆಂಪೂಗೌಡ್ರು ಅವರಿಗೆ ಸಾವಲೆಸೆದ ಶಾಸಕ ಸಿ.ಎಸ್.ಪುಟ್ಟರಾಜು.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಟಿಎಂಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಜೆ.ಡಿಎಸ್.ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಟ್ಟರಾಜು.
ರೈತಸಂಘದವರು ಹೋರಾಟದ ಹೆಸರಿನಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ. ದೊಡ್ಡಬ್ಯಾಡರಹಳ್ಳಿ ನೀರಿ ಟ್ಯಾಂಕ್ ವಿಚಾರದಲ್ಲಿ ಇಲ್ಲಸಲ್ಲದ ರಾಜಕೀಯ ಮಾಡಲು ಹೊರಟರೆ ಸಹಿಸುವುದಿಲ. ಅದರಲ್ಲೂ ಚುನಾವಣೆ ಒಂದು ವರ್ಷ ಅನ್ನುವಾಗಲೇ ಕೆಲವರು ನನ್ನ ವಿರುದ್ಧ ಷಡ್ಯಂತ್ರಗಳನ್ನು ಮಾಡಲು ಮುಂದಾಗುತ್ತಾರೆ. ಆದರೆ ಅವರ ಬೇಳೆ ಬೇಯೋದಿಲ್ಲ ಎಂದರು.
ರಾಜಕೀಯ ಮಾಡುವುದಕ್ಕೆ ಚುನಾವಣೆ ಇದೆ. ಚುನಾವಣಾ ಬಂದಾಗ ಅಲ್ಲಿ ರಾಜಕೀಯ ಮಾಡೋಣಾ. ಇನ್ನೂ ಒಂದುವರೆ ವರ್ಷಗಳವರೆಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಇದನ್ನೂ ಓದಿ :ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ
ಜೆಡಿಎಸ್.ಕಾರ್ಯಕರ್ತರು ಗ್ರಾಮಗಳಲ್ಲಿ ಯಾವುದೇ ಗಲಾಟೆಯಾಗದ ರೀತಿ ಉತ್ತಮ ರೀತಿಯಲ್ಲಿ ಶಾಂತಿಯುತ ವಾಗಿ ವರ್ತಿಸಿ.
ಮಂಡ್ಯದ ಕಲ್ಲಹಳ್ಳಿ ಗ್ರಾಮದಲ್ಲಿ ನಕಲಿ ಹೋರಾಟಗಾರ ಸೃಷ್ಟಿಯಾಗಿದ್ದು ಅವರ ಮೇಲೆ ನಾನು ಮಂತ್ರಿಯಾಗಿದ್ದಾಗಲೇ ಕಾನೂನು ರೀತಿಕ್ರಮ ಕೈಗೊಳ್ಳಲು ಮುಂದಾಗಿದೆ ಕೆಲ ನಾಯಕರು ಬುದ್ದಿ ಹೇಳುವುದಾಗಿ ತಿಳಿಸಿದ್ದರಿಂದ ನಾನು ಸುಮ್ಮನಾಗಿದ್ದೇನೆ ಎಂದರು.
ಜಕ್ಕನಹಳ್ಳಿ ಸರ್ಕಲ್ ನಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಲು ಹೊರಟ ನನ್ನ ಹಾಗೂ ಕಾರ್ಯಕರ್ತರ ವಿರುದ್ಧ ಅರೆಸ್ಟ್ ಮಾಡಿಸಲು ಮುಂದಾಗಿದ್ದ. ಅಲ್ಲಿ ಈ ಹಿಂದೆ ಗಣಪತಿ ಗುಡಿ ಇದ್ದ ಎಲ್ಲ ದಾಖಲಾತಿಗಳು ಇವೆ. ರವೀಂದ್ರ ಏನೇನೂ ಮಾಡಲು ಸಾಧ್ಯವಿಲ್ಲ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕನೂ ನಾನೇ ಮೊದಲ ಸಚಿವನೂ ನಾನೇ ಸಂಸದನಾಗಿಯೂ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಿದೇನೆ.
ಕ್ಷೇತ್ರ ಮತದಾರರ ನನಗೆ ಬಯಸಿದಕಿಂತಲ್ಲೂ ಹೆಚ್ಚು ಅಧಿಕಾರವನ್ನು ನೀಡಿದಾರೆ. ನನಗೆ ಅಧಿಕಾರ ದಾಹವಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಎಸ್.ಕೆ.ದೇವೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್, ಮುಖಂಡರಾದ ಕೆ.ಪುಟ್ಟೇಗೌಡ, ಎಂ.ಬಿ.ಶ್ರೀನಿವಾಸ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.