“ತೇಜಸ್’ನಲ್ಲಿ “ಪೈಥಾನ್-5′ ಕ್ಷಿಪಣಿ ಅಳವಡಿಸಲು ಅನುಮತಿ
Team Udayavani, Apr 29, 2021, 7:30 AM IST
ಹೊಸದಿಲ್ಲಿ: ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಹಗುರ ಯುದ್ಧ ವಿಮಾನ, “ತೇಜಸ್’ನಲ್ಲಿ “ಪೈಥಾನ್-5′ ಕ್ಷಿಪಣಿ ಅಳವಡಿಸಲು ಅನುಮತಿ ನೀಡಲಾಗಿದೆ. ಅದಕ್ಕಿಂತ ಮೊದಲು ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್ಡಿಒ) “ಪೈಥಾನ್-5′ ಕ್ಷಿಪಣಿಯನ್ನು ವಿವಿಧ ರೀತಿಯ ಪರೀಕ್ಷೆಗೆ ಒಳ ಪಡಿಸಿದೆ.
ತೇಜಸ್ನಲ್ಲಿ ಈಗಾಗಲೇ ಅಳವಡಿಸಲಾಗಿರುವ “ಡರ್ಬಿ ಬಿಯಾಂಡ್ ವಿಷ್ಯುವಲ್ ರೇಂಜ್’ (ಬಿವಿಆರ್) ಕ್ಷಿಪಣಿ ಗಿಂತ ಹೆಚ್ಚು ಕ್ಷಮತೆಯಿಂದ ಕೂಡಿದೆಯೇ ಎಂದು ಪರಿಶೀಲಿಸಲಾಯಿತು. ಮಂಗಳವಾರ ಗೋವಾದಲ್ಲಿ ಈ ಪರೀಕ್ಷೆಗಳು ನಡೆದಿವೆ ಎಂದು ಡಿಆರ್ಡಿಒ ತಿಳಿಸಿದೆ. ಡರ್ಬಿ ಮತ್ತು ಪೈಥಾನ್ ಕ್ಷಿಪಣಿಗಳು ಶೇ.100 ಕರಾರುವಾಕ್ಕಾಗಿ ಗುರಿ ಛೇದಿಸುವಲ್ಲಿ ಸಫಲವಾಗಿವೆ. ಯುದ್ಧ ವಿಮಾನದಿಂದ ಮತ್ತೂಂದು ವಿಮಾನಗಳನ್ನು ಹೊಡೆದು ಉರುಳಿಸಲು ಅವುಗಳನ್ನು ಬಳಕೆ ಮಾಡಲಾಗುತ್ತದೆ.
ಗೋವಾದಲ್ಲಿ ಅಂತಿಮ ಪರೀಕ್ಷೆ ನಡೆಸುವ ಮೊದಲು ಬೆಂಗಳೂರಿನಲ್ಲಿ ಏವಿಯಾನಿಕ್ಸ್, ಫೈರ್- ಕಂಟ್ರೋಲ್ ರಾಡಾರ್, ಮಿಸೈಲ್ ವೆಪನ್ ಡೆಲಿವರಿ ಸಿಸ್ಟಮ್ ಮತ್ತು ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಪರೀಕ್ಷೆಗಳಿಗೆ ಪೈಥಾನ್-5 ಅನ್ನು ಒಳಪಡಿಸಲಾಗಿತ್ತು. ಐಎಎಫ್ ವಿಮಾನಗಳು ಕ್ಷಿಪಣಿಯನ್ನು ಹೊತ್ತೂಯ್ದು “ತೇಜಸ್’ ವಿಮಾನಕ್ಕೆ ಪೂರೈಕೆ ಮಾಡಿವೆ. ನ್ಯಾಶನಲ್ ಫ್ಲೈಟ್ ಟೆಸ್ಟ್ ಸೆಂಟರ್ನ ಪೈಲಟ್ಗಳು ಅದಕ್ಕೆ ನೆರವು ನೀಡಿದ್ದಾರೆ.
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಮತ್ತು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ವಿಜ್ಞಾನಿಗಳು ಜಂಟಿಯಾಗಿ ಪೈಥಾನ್ ಅನ್ನು ಅಭಿವೃದ್ಧಿಪಡಿಸಿವೆ. ರಕ್ಷಣ ಸಚಿವ ರಾಜನಾಥ್ ಸಿಂಗ್ ಈ ಸಾಧನೆ ಮಾಡಿದ ಡಿಆರ್ಡಿಒ, ಏಡಿಎ, ಐಎಎಫ್, ಎಚ್ಎಎಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.