ಕಾವೇರಿ ತಂತ್ರಾಂಶ 2.0 ಜಾರಿ: 10 ನಿಮಿಷದಲ್ಲಿ ಆಸ್ತಿ ನೋಂದಣಿ
Team Udayavani, Mar 3, 2023, 7:10 AM IST
ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಶ 2.0 ಜಾರಿಗೆ ತರಲಾಗುತ್ತಿದ್ದು, ಇನ್ನು ಮುಂದೆ ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿ ನೋಂದಣಿ ಕಾರ್ಯ ಮುಕ್ತಾಯಗೊಳ್ಳುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ತಂತ್ರಾಂಶ ವಿನೂತನ, ನಾಗರೀಕ ಸ್ನೇಹಿಯಾಗಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ ವ್ಯವಸ್ಥೆ ಜಾರಿ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಕಾರ್ಯಾರಂಭಿಸಲಿದೆ. ಆಸ್ತಿ, ವಿವಾಹ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ರೀತಿಯ ನೋಂದಣಿಗಳು ಆನ್ ಲೈನ್ ಮಾಡಲಾಗುವುದು ಎಂದರು.
ಮೊದಲು ಬೆಳಗ್ಗೆಯಿಂದ ಸಂಜೆವರೆಗೂ ಕಾಯಬೇಕಿತ್ತು. ವಿದ್ಯಾವಂತರೂ ಕೂಡ ಅನೇಕ ದೂರು ನೀಡಿದ್ದರು. ಅದಕ್ಕೆ ಪರಿಹಾರ ಮಾಡಿದ್ದೇವೆ. ನೋಂದಣಿ ಮಾಡುವ ಮೊದಲು, ಮನೆಯಲ್ಲೇ ಕುಳಿತು ಡೀಡ್ ಅನ್ನು ಉಪನೋಂದಣಾಕಾರಿ ಕಚೇರಿಗೆ ಕಳಿಸಿದರೆ ಅದರಲ್ಲಿ ಉಪನೋಂದಣಾಧಿಕಾರಿ ತಪ್ಪಿದ್ದರೆ ತಿದ್ದಿ ಕಳುಹಿಸುತ್ತಾರೆ. ಬಳಿಕ ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚಿಸುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುವುದು. ಆ ಸಮಯದಲ್ಲಿ ಹೋಗಿ, ಮುಖ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಅನ್ ಲೈನ್‌ನಲ್ಲೇ ಇ.ಸಿ ಮತ್ತು ಪ್ರಮಾಣಪತ್ರ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಕಾವೇರಿ ತಂತ್ರಾಂಶ 2 ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಡಿ.ಡಿ ಮತ್ತು ಚಲನ್ ವಿಚಾರದಲ್ಲೂ ಹಿಂದೆ ಹಗರಣವಾಗಿತ್ತು. ಯಾರ¨ªೋ ಹೆಸರಿಗೆ ಡಿ.ಡಿ ಹೋಗುತ್ತಿತ್ತು. ಈಗ ಅವರ ಬ್ಯಾಂಕ್ ಅಕೌಂಟಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಆಗಲಿದೆ. ಉಪನೋಂದಣಾಕಾರಿ ಕಚೇರಿಯಲ್ಲಿ ಜನರ ಗುಂಪು ಕೂಡ ಇರುವುದಿಲ್ಲ ಎಂದರು.
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ನಮಗೆ 17 ಸಾವಿರ ಕೋಟಿ ರೂ. ಗುರಿ ನೀಡಲಾಗಿತ್ತು. ಅದಕ್ಕಿಂತ ಹೆಚ್ಚು ತಲುಪಿದ್ದೇವೆ.
ಕಂದಾಯ ಕಟ್ಟಲು ರಿಯಾಯಿತಿ ನೀಡಿದ್ದೆವು. ಮುದ್ರಾಂಕ ಶುಲ್ಕದಲ್ಲೂ ರಿಯಾಯಿತಿ ನೀಡಲಾಗಿತ್ತು. ಇನ್ನು ಮುಂದೆ ಖಾತೆ, ಪಹಣಿ, ಸರ್ವೆ ನಂಬರ್ ಎಲ್ಲಾ ದಾಖಲೆ ಸಬ್ ರಿಜಿಸ್ಟ್ರೇಷನ್ ಕಚೇರಿಯಲ್ಲೇ ಇರಲಿದೆ. ನೋಂದಣಿ ಆದ ಬಳಿಕ ದಾಖಲೆಗಳು ಮಾಲೀಕರ ಡಿಜಿ ಲಾಕರ್‌ಗೆ ಹೋಗಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಹಲವಾರು ಸುಧಾರಣೆ ತರಲಾಗಿದೆ. ಕಂದಾಯ ಇಲಾಖೆಯಲ್ಲಿ ಬದಲಾವಣೆ ಪರ್ವ ಮಾಡಲಾಗಿದೆ. 79ಎ, ಬಿ ತೆಗೆಯಲಾಗಿದೆ. ಮನೆ ಬಾಗಿಲಿಗೆ ಖಾತೆ ನೀಡುವುದು. ಪೋಡಿ ಮಾಡುವುದು, ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿ ಬಾಡಿಗೆ ನೀಡುವುದು, ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.