ಕೋವಿಡ್ ನಿಂದ ಮೃತಪಟ್ಟವರಿಗೆ ಸರಕಾರದಿಂದಲೇ ಗೌರವಪೂರ್ವಕ ಅಂತಿಮ ವಿದಾಯ
ಮೃತರ ಮನೆ ಮಗನಾಗಿ ಉಸ್ತುವಾರಿ ವಹಿಸುವೆ ಎಂದ ಸಚಿವ ಅಶೋಕ್
Team Udayavani, May 26, 2021, 7:10 AM IST
ಬೆಂಗಳೂರು: ಕೊರೊನಾದಿಂದ ಇಹಲೋಕ ತ್ಯಜಿಸುವವರ ಮೃತದೇಹಗಳು ಕುಟುಂಬದವರಿಗೂ ಬೇಡವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರಕಾರವೇ ಗೌರವ ಪೂರ್ವಕ ಅಂತ್ಯಕ್ರಿಯೆ ನಡೆಸುವ ಚಿಂತನೆಯಲ್ಲಿದೆ.
ಕೊರೊನಾ ಕಾಲದಲ್ಲಿ ಮಾನವೀಯ ಸಂಬಂಧಗಳ ಪತನದ ದರ್ಶನವೂ ಆಗುತ್ತಿದೆ. ಮೃತರ ಅಂತ್ಯ ಸಂಸ್ಕಾರ ಗೌರವಯುತವಾಗಿ ನೆರವೇರಲಿ ಎಂಬ ಸದಾಶಯ ಸರಕಾರದ್ದು.
ಆದರೆ, ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧ ಇಲ್ಲದಂತೆ ಇದ್ದರೂ ಭವಿಷ್ಯದಲ್ಲಿ ಆಸ್ತಿ ಪಾಲು ಮತ್ತಿತರ ವಾರಸುದಾರಿಕೆ ವಿಚಾರ ಬಂದಾಗ ಮರಣ ಪ್ರಮಾಣಪತ್ರ ಇಲ್ಲದಿದ್ದರೆ ಕಷ್ಟವಾಗಲಿದೆ. ಆ ಬಗ್ಗೆ ಕುಟುಂಬ ಸದಸ್ಯರು ಯೋಚಿಸಬೇಕಾದ್ದು ಅಗತ್ಯ.
ರಾಜ್ಯಾದ್ಯಂತ ಕೊರೊನಾದಿಂದ ಮರಣಿಸುವವರ ಸಮುದಾಯದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸುವ ಹೊಣೆಗಾರಿಕೆಯನ್ನು ಕಂದಾಯ ಇಲಾಖೆಗೆ ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಕೊರೊನಾದಿಂದ ಸಾವನ್ನಪ್ಪುವವರ ಮನೆ ಮಗನಾಗಿ ಈ ಕಾರ್ಯದ ಮೇಲುಸ್ತುವಾರಿ ವಹಿಸಲು ಸಚಿವ ಆರ್. ಅಶೋಕ್ ತೀರ್ಮಾನಿಸಿದ್ದಾರೆ.
ಕಂದಾಯ ಅಧಿಕಾರಿಗಳಿಗೂ ಜವಾಬ್ದಾರಿ ನೀಡುವ ಪ್ರಸ್ತಾವವೂ ಇದ್ದು, ಒಂದೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ದಾಖಲೆ ಸಮಸ್ಯೆ
ಕೊರೊನಾದಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರ ಪಡೆಯುವುದು ಕಷ್ಟವಾಗಲಿದೆ. ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಬಾರದಿದ್ದರೆ ಅನಾಥ ಶವ ಎಂದು ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹಾಗೆ ಆದಾಗ ಮರಣ ಪ್ರಮಾಣ ಪತ್ರ ಮತ್ತಿತರ ದಾಖಲೆ ಪಡೆಯಲು ಕಷ್ಟವಾಗಬಹುದು.
ಆಸ್ಪತ್ರೆಯಿಂದ ಕೊರೊನಾದಿಂದ ಮೃತಪಟ್ಟ ಡಿಸಾcರ್ಜ್ ಸಮ್ಮರಿ ಪಡೆದು ಸರಕಾರವೇ ಅಂತ್ಯ ಸಂಸ್ಕಾರ ಮಾಡಿದರೂ ಕುಟುಂಬದವರ ಸಹಿ ಮತ್ತು ಒಪ್ಪಿಗೆ ಇದ್ದರೆ ಚಿತಾಗಾರದಲ್ಲಿ ವಿವರಗಳು ದಾಖ ಲಾಗಿ ಮುಂದೆ ಮರಣ ಪ್ರಮಾಣಪತ್ರ ಪಡೆ ಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆಸ್ತಿ ಪಾಲು ಅಥವಾ ಇತರ ವಾರಸುದಾರಿಕೆ ವಿಚಾರ ಬಂದಾಗ ಸಮಸ್ಯೆ ಎದುರಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಹಿಂದೂ ಸಮುದಾಯದವರ ಅಂತ್ಯಕ್ರಿಯೆಯ ಅನಂತರ ಕಾವೇರಿ ನದಿಯಲ್ಲಿ ನಾನೇ ಅಸ್ತಿ ವಿಸರ್ಜನೆ ಮಾಡುತ್ತೇನೆ. ಇತರ ಸಮುದಾಯಗಳ ಸಂಪ್ರದಾಯದಂತೆಯೂ ಅಂತಿಮ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಆರ್. ಅಶೋಕ್, ಕಂದಾಯ ಸಚಿವ
– ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.