ಟೆನಿಸ್ ರ್‍ಯಾಂಕಿಂಗ್: ಆ್ಯಶ್ಲಿ ಬಾರ್ಟಿ ನಂ.1, ರಫೆಲ್ ನಡಾಲ್ ನಂ.5
Team Udayavani, Feb 1, 2022, 5:50 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಬಳಿಕ ಪರಿಷ್ಕೃತ ಟೆನಿಸ್ ರ್‍ಯಾಂಕಿಂಗ್ ಯಾದಿ ಪ್ರಕಟಗೊಂಡಿದೆ. ಚಾಂಪಿಯನ್‌ಗಳಾದ ಆ್ಯಶ್ಲಿ ಬಾರ್ಟಿ ಮತ್ತು ರಫೆಲ್ ನಡಾಲ್ ಕ್ರಮವಾಗಿ ಮೊದಲ ಹಾಗೂ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಈಗಾಗಲೇ ಎರಡು ವರ್ಷಗಳಿಗೂ ಅಧಿಕ ಕಾಲ ವನಿತಾ ಸಿಂಗಲ್ಸ್ ವಿಭಾಗದ ಅಗ್ರಸ್ಥಾನ ಕಾಯ್ದುಕೊಂಡು ಬಂದಿದ್ದಾರೆ. ಬೆಲರೂಸ್‌ನ ಅರಿನಾ ಸಬಲೆಂಕಾ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಫ್ರೆಂಚ್ ಓಪನ್ ಚಾಂಪಿಯನ್ ಬಾಬೊìರಾ ಕ್ರೆಜಿಕೋವಾ ಒಂದು ಸ್ಥಾನದ ಪ್ರಗತಿಯೊಂದಿಗೆ ಮೂರಕ್ಕೆ ಏರಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರು ಕ್ವಾರ್ಟರ್ ತನಕ ಬಂದಿದ್ದರು.
ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಅವರದು ಭರ್ಜರಿ 5 ಸ್ಥಾನಗಳ ನೆಗೆತ. ಅವರೀಗ 4ನೇ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ರನ್ನರ್ ಅಪ್ ಡೇನಿಯಲ್ ಕಾಲಿನ್ಸ್ ಮೊದಲ ಸಲ ಟಾಪ್-10 ಯಾದಿಗೆ ಆಗಮಿಸಿದ್ದಾರೆ. 10ನೇ ಸ್ಥಾನದಲ್ಲಿರುವ ಅವರದು 10 ಸ್ಥಾನಗಳ ಜಿಗಿತ.
ಇದನ್ನೂ ಓದಿ:ಪ್ರೊ ಕಬಡ್ಡಿ: ಗುಜರಾತ್, ದಬಾಂಗ್ ದಿಲ್ಲಿ ಗೆಲುವಿನ ಆಟ
ಪುರುಷರ ಸಿಂಗಲ್ಸ್
ಪುರುಷರ ಸಿಂಗಲ್ಸ್‌ನಲ್ಲಿ ವಿಶೇಷ ಪರಿವರ್ತನೆಗಳೇನೂ ಕಂಡುಬಂದಿಲ್ಲ. ಇಟಲಿಯ ಮ್ಯಾಟಿಯೊ ಬೆರೆಟಿನಿ ಅಗ್ರ ಹತ್ತರ ಯಾದಿಗೆ ಆಗಮಿಸಿದ್ದು, ಜೀವನಶ್ರೇಷ್ಠ 6ನೇ ರ್‍ಯಾಂಕಿಂಗ್ ಪಡೆದಿದ್ದಾರೆ. ರಶ್ಯದ ಆ್ಯಂಡ್ರೆ ರುಬ್ಲೇವ್ 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲಾಗದೆ ವಾಪಸಾದ ನೊವಾಕ್ ಜೊಕೋವಿಕ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.