Raichur: ಲಾಡ್ಜ್ ನಲ್ಲಿ ಮಹಿಳೆ ನೇಣಿಗೆ ಶರಣು… ಕಾರಣ ನಿಗೂಢ
Team Udayavani, Dec 13, 2023, 12:43 PM IST
ರಾಯಚೂರು: ನಗರದ ಲಾಡ್ಜ್ ನಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಸೋನಿ (24) ಮೃತ ಮಹಿಳೆ. ನೇಣು ಬಿಗಿದ ಸ್ಥಿತಿಯಲ್ಲಿ ಹೊಟೆಲ್ ಕೋಣೆಯಲ್ಲಿ ಶವ ಪತ್ತೆಯಾಗಿದೆ.
ಪತಿ ಅವಿನಾಶ್ ಹಾಗೂ ಸೋನಿ ಕಳೆದ ಮೂರು ವರ್ಷದಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಸೋನಿ ಹೆರಿಗೆಯಾಗಿದ್ದು, 20 ದಿನಗಳ ಹಸುಗೂಸಿದೆ. ಸೋನಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಪತಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ ಪಿ, ಡಿವೈಎಸ್ ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಪತಿ ಸೇರಿದಂತೆ ಹೊಟೇಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Madhya Pradesh ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೋಹನ್ ಯಾದವ್, ಪ್ರಧಾನಿ ಉಪಸ್ಥಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.