36 ಲಕ್ಷ ಕಾರ್ಮಿಕರ ಪ್ರಯಾಣಕ್ಕೆ ಸಿದ್ಧತೆ
2,600 ಶ್ರಮಿಕ್ ರೈಲುಗಳ ನಿಯೋಜನೆಗೆ ರೈಲ್ವೆ ಇಲಾಖೆ ನಿರ್ಧಾರ
Team Udayavani, May 24, 2020, 6:10 AM IST
ನವದೆಹಲಿ: ಮುಂದಿನ ಹತ್ತು ದಿನಗಳಲ್ಲಿ 19 ರಾಜ್ಯಗಳಿಂದ 2,600 ಶ್ರಮಿಕ್ ವಿಶೇಷ ರೈಲುಗಳಲ್ಲಿ ಒಟ್ಟು 36 ಲಕ್ಷ ವಲಸೆ ಕಾರ್ಮಿಕರನ್ನು 16 ರಾಜ್ಯಗಳಿಗೆ ಕರೆದುಕೊಂಡು ಹೋಗಲು ರೈಲ್ವೆ ಇಲಾಖೆ ವೇಳಾಪಟ್ಟಿ ಸಿದ್ಧಪಡಿಸಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ. ಶನಿವಾರ ಮಾಧ್ಯಮ ಭಾಷಣದಲ್ಲಿ ರೈಲ್ವೆ ಸಚಿವಾಲಯವು ಈ ವಿಷಯವನ್ನು ಬಹಿರಂಗಪಡಿಸಿತು.
ಮೇ1ರಿಂದ ಇದುವರೆಗೆ ವಿವಿಧ ರಾಜ್ಯಗಳ ಒಳಗಡೆ ಹಾಗೂ ಹೊರಗಡೆಗೆ ಒಟ್ಟಾರೆ 45 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂದು ತಿಳಿಸಿದ್ದಲ್ಲದೆ ಜೂನ್ 1ರಿಂದ ಪ್ರಯಾಣಿಕರಿಗೆ ರೈಲ್ವೆ ಸೇವೆಗಳನ್ನು ಆರಂಭಿಸುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ ಶ್ರಮಿಕ್ ರೈಲಿನ ದರದ ಬಗೆಗಿನ ವಿವಾದವನ್ನು ರೈಲ್ವೆ ಸಚಿವಾಲಯ ಬಗೆಹರಿಸಿದೆ, “ಶ್ರಮಿಕ್ ರೈಲಿನ ಪ್ರಯಾಣದ ಶೇ.85ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ, ಶೇ.15ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ. ವಲಸೆ ಕಾರ್ಮಿಕರಿಗಾಗಿ ರೈಲ್ವೆ ಸಚಿವಾಲಯ ಉಚಿತ ಆಹಾರ ವ್ಯವಸ್ಥೆಯನ್ನು ಮಾಡಿದೆ ಎಂದು ಸಚಿವಾಲ ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
13 ದಿನದಲ್ಲಿ 66 ಲಕ್ಷ ಮಂದಿ ಪ್ರಯಾಣ
ವಲಸಿಗರು ಅವರವರ ಮನೆ ತಲುಪಲು ಸರ್ಕಾರ ರೈಲುಗಳ ವ್ಯವಸ್ಥೆ ಮಾಡಿದ ಬಳಿಕ ಏಪ್ರಿಲ್ 30ರಿಂದ ಮೇ 12ರವರೆಗೆ ಸುಮಾರು 66 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಾರತೀಯರು ವಿವಿಧ ರಾಜ್ಯಗಳ ನಡುವೆ ಪ್ರಯಾಣಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಏ.30ರಿಂದ ಮೇ 6ರನಡುವೆ ಒಟ್ಟು 27.15 ಲಕ್ಷ ಭಾರತೀಯರು ಒಂದು ರಾಜ್ಯದಿಂದ ಮತ್ತೂಂದು ರಾಜ್ಯದ ನಡುವೆ ಸಂಚರಿಸಿದ್ದಾರೆ. ಇನ್ನೊಂದೆಡೆ ಮೇ 7ರಿಂದ 12ರ ನಡುವೆ, ಅಂದರೆ ಕೇವಲ ಆರು ದಿನಗಳ ಅವಧಿಯಲ್ಲಿ ಬರೋಬ್ಬರಿ 39.71 ಲಕ್ಷ ಮಂದಿ ವಿವಿಧ ರಾಜ್ಯಗಳ ನಡುವೆ ಪ್ರಯಾಣಿಸಿದ್ದಾರೆ. ಕೋವಿಡ್-19 ಲಾಕ್‌ಡೌನ್‌ನ ಪರಿಣಾಮ ದೇಶಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ನಡುವೆ ಲಾಕ್‌ಡೌನ್ 3ರ ವೇಳೆ ವಲಸಿಗರನ್ನು ಅವರ ತವರಿಗೆ ಕಳುಹಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೂರಕ ವ್ಯವಸ್ಥೆ ಮಾಡಿದ್ದರಿಂದ ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಇಷ್ಟೋಂದು ಜನ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.