Railway Track; ಎಡಕುಮೇರಿ: ರೈಲು ಮಾರ್ಗ ದುರಸ್ತಿ ಚುರುಕು
ಚಾರ್ಮಾಡಿ ಘಾಟಿ: ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ
Team Udayavani, Jul 31, 2024, 6:10 AM IST
ಮಂಗಳೂರು: ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ರೈಲು ಮಾರ್ಗದಲ್ಲಿ ಆಗಿರುವ ಭೂಕುಸಿತದ ಪ್ರದೇಶಲ್ಲಿ ದುರಸ್ತಿ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ.
ಇದುವರೆಗೆ 1900 ಘನ ಅಡಿಗಳಷ್ಟು ಬಂಡೆಗಳನ್ನು ಜೋಡಿಸಲಾಗಿದೆ. ಸಂಪೂರ್ಣ ಸುಧಾರಣೆಗೆ ಇನ್ನೂ 2000 ಘನ ಅಡಿ ಬಂಡೆಗಳ ಅಗತ್ಯವಿದೆ. 1 ಲಕ್ಷ ಮರಳ ಚೀಲಗಳು ಅಗತ್ಯವಿದ್ದು ಈಗಾಗಲೇ 93,200 ಚೀಲಗಳನ್ನು ಒದಗಿಸಲಾಗಿದೆ. ಅರ್ತ್‌ಮೂವರ್ ಮತ್ತಿತರ ಯಂತ್ರೋಪರಕಣಗಳ ಚಾಲನೆಗಾಗಿ 26 ಬ್ಯಾರೆಲ್ ಡೀಸೆಲ್ ಪೂರೈಸಲಾಗಿದೆ.
ಒಟ್ಟಾರೆ ಈಗಾಗಲೇ ಕಾರ್ಯೋನ್ಮು ಖವಾಗಿರುವ 11 ಹಿಟಾಚಿ/ಪಾಕ್‌ಲೈನ್ ಅರ್ತ್‌ಮೂವರ್ ಮಷಿನ್‌ಗಳ ಜತೆಗೆ ಎರಡು ಹೆಚ್ಚುವರಿ ಹಿಟಾಚಿಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಸುರಿಯುತ್ತಿರುವ ಮಳೆಯ ಹೊರತಾಗಿಯೂ ಮಂಗಳವಾರ ಕಾರ್ಮಿಕರು 23 ವ್ಯಾಗನ್‌ಗಳಷ್ಟು ಬಂಡೆಗಳನ್ನು ಕೆಳಗಿಳಿಸಿದ್ದಾರೆ. ಇದುವರೆಗೆ ಒಟ್ಟು 94 ವ್ಯಾಗನ್ ಬಂಡೆಗಳನ್ನು ಈ ಪ್ರದೇಶಕ್ಕೆ ಇಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಚಾರ್ಮಾಡಿ ಘಾಟಿ: ರಸ್ತೆಗೆ ಉರುಳಿದ ಮರ, ತೆರವು
ಬೆಳ್ತಂಗಡಿ: ಚಿಕ್ಕಮಗಳೂರು ಹಾಗೂ ಬೆಳ್ತಂಗಡಿ ಭಾಗದಲ್ಲಿ ಮಳೆ ಹೆಚ್ಚಿದ ಪರಿಣಾಮ ಜು.30ರಂದು ಮುಂಜಾನೆ ಚಾರ್ಮಾಡಿ ಘಾಟಿಯ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತತ್‌ಕ್ಷಣ ಕೊಟ್ಟಿಗೆಹಾರ ಭಾಗದಲ್ಲಿ ವಾಹನ ಸಂಚಾರ ತಡೆಹಿಡಿಯಲಾಯಿತು. ಬಳಿಕ ತೆರವು ಕಾರ್ಯ ನಡೆಸಿ ಮಧ್ಯಾಹ್ನದೊಳಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.