Rain Alert: ರಾಜ್ಯದ 13 ಜಿಲ್ಲೆಗಳಲ್ಲಿ ಅ.21ರವರೆಗೆ ಭಾರೀ ಮಳೆ?

ಇನ್ನೆರಡು ದಿನ ಹಳದಿ ಅಲರ್ಟ್‌ ಘೋಷಣೆ, ಬೆಂಗಳೂರಿನಲ್ಲಿ 3 ದಿನ ವರುಣನ ಅಬ್ಬರ ಸಾಧ್ಯತೆ

Team Udayavani, Oct 19, 2024, 10:59 PM IST

Rain-12

ಬೆಂಗಳೂರು: ರಾಜ್ಯಾದ್ಯಂತ ಹಿಂಗಾರು ಮಳೆಯ ಅಬ್ಬರ ಜೋರಾಗಿದ್ದು ಭಾನುವಾರ ಉಡುಪಿ, ಉತ್ತರ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಸಿಯರ್‌ಝೋನ್‌ ಇದೆ. ಇದರ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಅ.22ರ ವರೆಗೆ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಅ.22ರ ವರೆಗೆ ಮಳೆಯಾಗಲಿದೆ.

ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಲಕ್ಷಣ ಗೋಚರಿಸಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಅ.21ರವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಅ.21ರ ವರೆಗೆ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಇನ್ನು ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 55 ಕಿ.ಮೀ ಇರಲಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಇಂದು ಬೆಂಗಳೂರಿನಲ್ಲಿ ಮಳೆ:
ರವಿವಾರ (ಅ.20) ಬೆಂಗಳೂರಿನಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಏನಿದು ಸಿಯರ್‌ಝೋನ್‌ ?
ಸಿಯರ್‌ಝೋನ್‌ ಎಂದರೆ ತೇವಾಂಶ ಆಗಸದತ್ತ ತೆಗೆದುಕೊಂಡು ಹೋಗುವ ಪ್ರಕ್ರಿಯೆಯಾಗಿದೆ. ತೇವಾಂಶಗಳಿಂದ ಮೋಡಗಳು ಸೃಷ್ಟಿಯಾಗಿ ಮೋಡಗಳಿಂದ ಮಳೆ ಸುರಿಯುತ್ತವೆ. ಇದು ಹವಾಮಾನದಲ್ಲಿ ನಡೆಯುವ ಒಂದು ಮಾದರಿಯ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದನ್ನು ಮೇಲ್ಮೆ ಸುಳಿಗಾಳಿ ಎಂದೂ ಕರೆಯಲಾಗುತ್ತದೆ. ಈ ಪ್ರಕ್ರಿಯೆ ಎಲ್ಲ ಪ್ರದೇಶಗಳಲ್ಲೂ ಸಾಮಾನ್ಯವಾಗಿ ನಡೆಯುತ್ತದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಟಾಪ್ ನ್ಯೂಸ್

EXpo

Handicrafts Expo: ಮಂಗಳೂರಿನಲ್ಲಿ ನ್ಯೂ ಇಂಡಿಯನ್‌ ಕ್ರಾಫ್ಟ್‌ ಎಕ್ಸ್‌ಪೋಗೆ ಚಾಲನೆ

theft-temple

Kundapura: ಮದ್ದುಗುಡ್ಡೆಯ ಭಜನ ಮಂದಿರದ ಚಿನ್ನಾಭರಣ ಕಳವು

1-a-ola

Delegation appeal; ಒಳಮೀಸಲಾತಿ ಜಾರಿ ತನಕ ನೇಮಕಾತಿ ಬೇಡ

1-a-ek

ಶೀಘ್ರ ಇ-ಖಾತಾ ಸಮಸ್ಯೆ ಬಗೆಹರಿಸಿ

police crime

Kalaburagi Honeytrap; ಇಬ್ಬರು ಜೈಲು ಅಧಿಕಾರಿಗಳ ಅಮಾನತು

Akhilesh

Maharashtra Election: ಎಂವಿಎ ಮುಂದೆ 12 ಕ್ಷೇತ್ರಕ್ಕೆ ಬೇಡಿಕೆ ಇಟ್ಟ ಅಖಿಲೇಶ್‌ ಯಾದವ್‌

Rain-12

Rain Alert: ರಾಜ್ಯದ 13 ಜಿಲ್ಲೆಗಳಲ್ಲಿ ಅ.21ರವರೆಗೆ ಭಾರೀ ಮಳೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-ola

Delegation appeal; ಒಳಮೀಸಲಾತಿ ಜಾರಿ ತನಕ ನೇಮಕಾತಿ ಬೇಡ

bk-Hari

Reservation ಪ್ರಮಾಣ ಶೇ. 75ಕ್ಕೆ ಏರಿಸುವ ಚರ್ಚೆ ಇದೆ: ಬಿ.ಕೆ. ಹರಿಪ್ರಸಾದ್‌

1-a-ek

ಶೀಘ್ರ ಇ-ಖಾತಾ ಸಮಸ್ಯೆ ಬಗೆಹರಿಸಿ

Muda Scam: ಮುಡಾ ಹಗರಣ ಸಿಬಿಐಗೆ ವಹಿಸಲಿ; ಯದುವೀರ್‌

Muda Scam: ಮುಡಾ ಹಗರಣ ಸಿಬಿಐಗೆ ವಹಿಸಲಿ; ಯದುವೀರ್‌

13

Job Fair : ಶಿರೂರು ಗುಡ್ಡ ಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

EXpo

Handicrafts Expo: ಮಂಗಳೂರಿನಲ್ಲಿ ನ್ಯೂ ಇಂಡಿಯನ್‌ ಕ್ರಾಫ್ಟ್‌ ಎಕ್ಸ್‌ಪೋಗೆ ಚಾಲನೆ

theft-temple

Kundapura: ಮದ್ದುಗುಡ್ಡೆಯ ಭಜನ ಮಂದಿರದ ಚಿನ್ನಾಭರಣ ಕಳವು

Electric

Belthangady: ವಿದ್ಯುತ್‌ ಸ್ಪರ್ಶ: ನಾರಾವಿಯ ವ್ಯಕ್ತಿ ಸಾವು

1-a-ola

Delegation appeal; ಒಳಮೀಸಲಾತಿ ಜಾರಿ ತನಕ ನೇಮಕಾತಿ ಬೇಡ

bk-Hari

Reservation ಪ್ರಮಾಣ ಶೇ. 75ಕ್ಕೆ ಏರಿಸುವ ಚರ್ಚೆ ಇದೆ: ಬಿ.ಕೆ. ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.