Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್
ಹೊಳೆ ತಟದ ಕೃಷಿ ತೋಟಗಳು ಜಲಾವೃತ
Team Udayavani, Oct 7, 2024, 1:42 AM IST
ಪುತ್ತೂರು: ಪುತ್ತೂರು, ಸುಳ್ಯ ತಾಲೂಕಿನಲ್ಲಿ ರವಿವಾರ ಸಂಜೆ ದಿಢೀರ್ ಆಗಿ ಒಂದು ತಾಸು ಭಾರೀ ಮಳೆಯಾಗಿದ್ದು ಹೊಳೆ, ತೋಡು ಉಕ್ಕಿ ಹರಿಯಿತು.
ಸಂಜೆ 3.30ರಿಂದ 4.30ರ ತನಕ ಮಳೆ ಸುರಿಯಿತು. ಗುಡುಗು, ಮಿಂಚು, ಗಾಳಿಯೊಂದಿಗೆ ಅಬ್ಬರದ ಮಳೆಯಾಗಿದ್ದು ನೋಡ ನೋಡುತ್ತಿದ್ದಂತೆ ತೋಡು, ಹೊಳೆ ಉಕ್ಕಿ ಹರಿದಿದೆ. ಬೆಳ್ಳಾರೆ, ಸರ್ವೆ ಭಾಗದಲ್ಲಿ ಹರಿಯುವ ಗೌರಿ ಹೊಳೆಯಲ್ಲಿ ಏಕಾಏಕಿ ಪ್ರವಾಹದ ರೂಪದಲ್ಲಿ ನೀರು ಹರಿದಿದೆ. ಹೊಳೆ ತಟದ ಕೃಷಿ ತೋಟಗಳು ಜಲಾವೃತಗೊಂಡಿವೆ.
ಇನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶದ ರಸ್ತೆಗಳ ಬದಿಯ ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ರಸ್ತೆಯಲ್ಲೇ ಹರಿದಿದ್ದು ಅಪಾರ ಕಸ ಕಡ್ಡಿಗಳು ರಸ್ತೆಯಲ್ಲಿ ತುಂಬಿದೆ. ಪುತ್ತೂರು, ಸುಳ್ಯ ಭಾಗದಲ್ಲಿ ಗಾಳಿ ಮಳೆಯಿಂದ ಅಡಿಕೆ ತೋಟಕ್ಕೆ ಹಾನಿ ಆಗಿದೆ.
ರಸ್ತೆ ಸಂಚಾರ ಬಂದ್
ಗೌರಿ ಹೊಳೆ ಉಕ್ಕಿ ಹರಿದ ಪರಿಣಾಮ ಬೆಳ್ಳಾರೆ ಪೆರುವಾಜೆ ಸವಣೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು. ಪೆರುವಾಜೆ ಗ್ರಾಮದ ಮಾಪ್ಲಮಜಲು ಬಳಿ ಹೊಳೆ ನೀರು ರಸ್ತೆಗೆ ನುಗ್ಗಿದ ಪರಿಣಾಮ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಎದುರಾಯಿತು.
ಕಲಾಯಿ: ಸೋಲಾರ್ ಧರಾಶಾಯಿ
ಪುತ್ತೂರು: ಕೊಳ್ತಿಗೆ ಗ್ರಾಮದ ಕಲಾಯಿ ಬಳಿ ಮಹಾಬಲ ರೈ ಅವರ ಜಾಗದ ಸುತ್ತ ನಿರ್ಮಿಸಿದ ಮಣ್ಣಿನ ಗೋಡೆ ಒಡೆದು ಮನೆ ಅಂಗಳದಲ್ಲಿ ನಿರ್ಮಿಸಿದ ಅಡಿಕೆ ಒಣಗಿಸುವ ಸೋಲಾರ್ ಸಂಪೂರ್ಣ ಧರಾಶಾಹಿಯಾಗಿದೆ.
ಅಂಗಡಿಗೆ ನುಗ್ಗಿದ ಮಳೆ ನೀರು
ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡಿಚ್ಚಾರಿನ ಎಸ್. ಇಸ್ಮಾಯಿಲ್ ಹಾಜಿ ಅವರ ಜಿನಸು ಅಂಗಡಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಸಾಮಗ್ರಿಗಳು, ಕಾಳು ಮೆಣಸು, ಅಡಿಕೆ ಮೊದಲಾದ ವಸ್ತುಗಳು ನೀರುಪಾಲಾಗಿದ್ದು
ಚಿಕನ್ ಸೆಂಟರ್‌ಗೆ ನುಗ್ಗಿದ ಮಳೆ ನೀರು
ಪೆರ್ಲಂಪಾಡಿ ಪೇಟೆಯಲ್ಲಿನ ಚಿಕನ್ ಸೆಂಟರ್‌ಗೆ ಮಳೆ ನೀರು ನುಗ್ಗಿ ನೂರಾರು ಕೋಳಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ ಘಟನೆ ನಡೆದಿದೆ.
ಬೆಳ್ಳಾರೆ: ಹೊಳೆಯಂತಾದ ರಸ್ತೆ
ಸುಳ್ಯ ತಾಲೂಕಿನ ಸುಳ್ಯ ನಗರ, ಬೆಳ್ಳಾರೆ ಸೇರಿದಂತೆ ತಾಲೂಕಿನಲ್ಲಿ ರವಿವಾರ ಅಪರಾಹ್ನ ಬಳಿಕ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.ಭಾರೀ ಮಳೆಗೆ ಬೆಳ್ಳಾರೆ ಪೇಟೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು, ಚರಂಡಿ ನೀರು ರಸ್ತೆಯಲ್ಲೇ ಹರಿದು ರಸ್ತೆ ತೋಡಿನಂತಾಗಿ ವಾಹನ ಸವಾರರು ಸಮಸ್ಯೆ ಅನುಭವಿಸಿದರು.
ಬೆಳ್ಳಾರೆಯ ಹೊಳೆಯಲ್ಲಿ ಭಾರೀ ನೀರು ಹರಿದು ನೇಲ್ಯಮಜಲು-ಕುರುಂಬುಡೇಡು ಸಂಪರ್ಕ ಸೇತುವೆ ಹಾನಿಯಾಗಿದೆ. ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ ರಸ್ತೆಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು. ಬೆಳ್ಳಾರೆಯ ಗೌರಿ ಹೊಳೆ ಉಕ್ಕಿ ಹರಿದ ಪರಿಣಾಮ ಹೊಳೆ ನೀರು ರಸ್ತೆಗೆ ನುಗ್ಗಿ ಬೆಳ್ಳಾರೆ – ಸವಣೂರು ಸಂಪರ್ಕ ಕಡಿತಗೊಂಡಿತು. ಸುಳ್ಯ ನಗರ, ಸುಳ್ಯ ತಾಲೂಕಿನ ಜಾಲ್ಸೂರು, ಅರಂತೋಡು, ಸಂಪಾಜೆ, ಕೊಲ್ಲಮೊಗ್ರು, ಬೆಳ್ಳಾರೆ, ಕಲ್ಮಡ್ಕ ಎಡಮಂಗಲ ಪರಿಸದಲ್ಲಿ ಗುಡುಸಹಿತ ಧಾರಕಾರ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.