Health; ಪೋಷಕರೇ ಎಚ್ಚರ;ಮಕ್ಕಳಲ್ಲಿ ಹೆಚ್ಚುತ್ತಿರುವ Online Game ಚಟ… ವೈದ್ಯರ ಸಲಹೆ ಏನು?
ಆನ್ ಲೈನ್ ಗೇಮ್ ಚಟದಿಂದಾಗಿ ಬಾಲಕನೊಬ್ಬ ಜ್ಞಾಪಕಶಕ್ತಿ ಕಳೆದುಕೊಂಡಿರುವ ಘಟನೆ ವರದಿಯಾಗಿದೆ
Team Udayavani, Jul 13, 2023, 12:24 PM IST
ಅತಿಯಾದ ಆನ್ ಲೈನ್ ಗೇಮ್ ಚಟದಿಂದಾಗಿ ಬಾಲಕನೊಬ್ಬ ಜ್ಞಾಪಕಶಕ್ತಿ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದ್ದು, ಇತ್ತೀಚೆಗೆ ಮಕ್ಕಳು ಆನ್ ಲೈನ್ ಗೇಮ್ ನತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿಯಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Delhi: ಪೊಲೀಸ್ ಎಂದು ಬೆದರಿಸಿ ಅಪಾರ್ಟ್‌ಮೆಂಟ್ ಮೆಟ್ಟಿಲಲ್ಲೇ ಅತ್ಯಾಚಾರವೆಸಗಿದ ವ್ಯಕ್ತಿ
ಈ ಬಾಲಕ PUBG ಮತ್ತು ಫ್ರೀ ಫೈಯರ್ ನಂತಹ ಆನ್ ಲೈನ್ ಗೇಮ್ ಗಳ ವ್ಯಸನಿಯಾಗಿದ್ದು, ಇದರ ಪರಿಣಾಮ ಈತ ಮಾನಸಿಕ ಸಮತೋಲನ ಕಳೆದುಕೊಂಡಿದ್ದು, ಜ್ಞಾಪಕಶಕ್ತಿಗೂ ಹೊಡೆತ ಬಿದ್ದಿದೆ. ಬಾಲಕನನ್ನು ರಾಜಸ್ಥಾನದ ವಿಶೇಷ ಶಾಲೆಗೆ ದಾಖಲಿಸಲಾಗಿದ್ದು, ಅಲ್ಲಿ ಆತನ ಸ್ಥಿತಿಗತಿಯನ್ನು ಪರಿಶೀಲಿಸುತ್ತಿರುವುದಾಗಿ ವರದಿ ವಿವರಿಸಿದೆ.
ಬಾಲಕ ಪೋಷಕರ ಗಮನಕ್ಕೆ ಬಾರದಂತೆ ನೆರೆಹೊರೆಯವರ ವೈ-ಫೈ ಕನೆಕ್ಷನ್ ಉಪಯೋಗಿಸಿಕೊಂಡು ಆನ್ ಲೈನ್ ಗೇಮ್ ಗಳನ್ನು ಆಡುತ್ತಿದ್ದ. ಒಂದು ಗೇಮ್ಸ್ ನಲ್ಲಿ ಬಾಲಕ ಸೋತ ಕಾರಣ ಅದು ಆತನ ಮೇಲೆ ಗಂಭೀರ ಪರಿಣಾಮ ಬೀರಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತೆ ಮಾಡಿರುವುದಾಗಿ ಮತ್ತೊಬ್ಬ ಶಿಕ್ಷಕ ರಾಜೀವ್ ಶರ್ಮಾ ಮಾಹಿತಿ ನೀಡಿದ್ದಾರೆ.
#WATCH | Rajasthan | Case study of a child in Alwar who is suffering from severe tremors after being addicted to online gaming.
Special Teacher Bhavani Sharma says, “A child has come to our special school. As per our assessment and the statements of his relatives, he is a victim… pic.twitter.com/puviFlEW6f
— ANI MP/CG/Rajasthan (@ANI_MP_CG_RJ) July 12, 2023
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ವಿಶೇಷ ಶಾಲೆಯ ಶಿಕ್ಷಕ ಭವಾನಿ ಶರ್ಮಾ ಅವರು, ಬಾಲಕನ ಸಂಬಂಧಿಕರು ನೀಡಿರುವ ಹೇಳಿಕೆಯ ಆಧಾರದ ಮೇಲೆ ಆತನ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದೇವೆ. ಈತ ಫೈಯರ್ ಗೇಮ್ಸ್ ಅನ್ನು ಹೆಚ್ಚು ಆಡುತ್ತಿದ್ದ ಪರಿಣಾಮ, ಆತ ಗೇಮ್ ನಲ್ಲಿ ಸೋತಿದ್ದ. ಒಂದು ವೇಳೆ ಇಂತಹ ಗೇಮ್ ನಲ್ಲಿ ಆಟಗಾರ ಸೋತರೆ ಅವರು ಅದನ್ನು ಸಹಿಸಿಕೊಳ್ಳುವುದಿಲ್ಲ. ಒಂದೊ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ, ಇಲ್ಲವೇ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ. ಈ ಬಾಲಕನು ಕೂಡಾ ಆನ್ ಲೈನ್ ಗೇಮ್ ಚಟದಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ. ಅದಕ್ಕಾಗಿ ನಾವು ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಯ ಫಾರ್ಮ್ಯಾಟ್ ಸಿದ್ದಪಡಿಸಿದ್ದು, ಅದರಂತೆ ಮಕ್ಕಳನ್ನು ಕೂಡಾ ನಾವು ಅದರಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತೇವೆ. ಅವರು ಆ ಕ್ರೀಡೆಯಲ್ಲಿ ಗೆದ್ದಾಗ ಮತ್ತೆ ಜ್ಞಾಪಕಶಕ್ತಿ ಮರಳಿ ಬರುವಲ್ಲಿ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಆನ್ ಲೈನ್ ಗೇಮ್ ಗಳು:
ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳು ಅತೀಯಾಗಿ ಆನ್ ಲೈನ್ ಗೇಮ್ ಗಳ ಚಟಕ್ಕೆ ಬಲಿಯಾಗುತ್ತಿರುವುದು ಹೆಚ್ಚಳವಾಗುತ್ತಿದೆ. ಇದರಿಂದಾಗಿ ಹೃದಯಾಘಾತ ಸಂಭವಿಸಬಹುದು, ಅಷ್ಟೇ ಅಲ್ಲ ಮಾನಸಿಕ ಒತ್ತಡ, ಖಿನ್ನತೆ ಸೇರಿದಂತೆ ಹಲವು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಪೋಷಕರ ಪಾತ್ರ ಮಹತ್ವ:
ಆನ್ ಲೈನ್ ಗೇಮ್ ವ್ಯಸನ ಗುಣಪಡಿಸಲು ಯಾವುದೇ ವೈದ್ಯಕೀಯ ಔಷಧಗಳಿಲ್ಲ ಎಂಬುದಾಗಿ ಲಕ್ನೋ ಮೂಲದ ಮನೋವೈದ್ಯ ಡಾ.ಅಬ್ಬಾಸ್ ಮೆಹ್ದಿ ತಿಳಿಸಿದ್ದು, ಆನ್ ಲೈನ್ ಗೇಮ್ ಗಳನ್ನು ಅತಿಯಾಗಿ ಬಳಸುವುದರಿಂದ ಇದು ಮೆದುಳಿನಲ್ಲಿರುವ ಸಿರೊಟೋನಿನ್ ಮತ್ತು ಡೋಪಮೈನ್ ಸಮತೋಲನಕ್ಕೆ ಅಡ್ಡಿ ಉಂಟು ಮಾಡುತ್ತದೆ. ಇದರ ಪರಿಣಾಮ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಮಾನಸಿಕ ಒತ್ತಡ, ಖಿನ್ನತೆಗೆ ಚಿಕಿತ್ಸೆ ನೀಡಬಹುದಾಗಿದೆ. ಆದರೆ ಆನ್ ಲೈನ್ ಗೇಮ್ ಗಳ ಚಟವನ್ನು ಬಿಡಿಸುವುದು ಕಷ್ಟ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇಂತಹ ಗೇಮ್ ಗಳತ್ತ ಮಕ್ಕಳು ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಮೇಲೆ ಸದಾ ನಿಗಾ ವಹಿಸುತ್ತಿರಬೇಕು. ಆನ್ ಲೈನ್ ಗೇಮ್ ಗಳ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.