Rajyotsava Award: ಅರುಣ್ ಯೋಗಿರಾಜ್ ಸೇರಿ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಈ ಬಾರಿ ಹೆಚ್ಚುವರಿ 100 ಮಂದಿಗೆ ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿ: ಸಚಿವ ಶಿವರಾಜ್ ತಂಗಡಗಿ
Team Udayavani, Oct 30, 2024, 5:08 PM IST
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಈ ಬಾರಿ 69 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಸಂಸ್ಥೆ ಸೇರಿ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಇದರ ಜೊತೆ ಈ ಬಾರಿ ಸುವರ್ಣ ಕರ್ನಾಟಕ (50 ವರ್ಷ) ವರ್ಷವಾದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಪುರುಷರು ಹಾಗೂ 5೦ ಮಂದಿ ಮಹಿಳಾ ಸಾಧಕರಿಗೆ ವಿಶೇಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬಿ.ಟಿ.ಲಲಿತಾ ನಾಯಕ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೆಸರು ಘೋಷಿಸಲಾಗಿದೆ. ಈ ಸಾಧಕರಿಗೆ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು.
ಜಾನಪದ ಕ್ಷೇತ್ರ
ಇಮಾಮಸಾಬ ಎಂ. ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್.ಜಿ. ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
ಹೇಮಾ ಚೌಧರಿ
ಎಂಎಸ್ ನರಸಿಂಹಮೂರ್ತಿ
ಸಾಹಿತ್ಯ
ಬಿ.ಟಿ.ಲಲಿತಾ ನಾಯಕ್,
ಎಂ.ವೀರಪ್ಪ ಮೊಯಿಲಿ
ಆಡಳಿತ
ಎಸ್.ವಿ.ರಂಗನಾಥ್ (ಐಎಎಸ್)
ಶಿಲ್ಪಕಲೆ
ಅರುಣ್ ಯೋಗಿರಾಜ್
ಬಸವರಾಜ್ ಬಡಿಗೇರ
ಯಕ್ಷಗಾನ
ಕೇಶವ ಹೆಗಡೆ ಕೊಳಗಿ
ಸೀತಾರಾಮ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
MUST WATCH
ಹೊಸ ಸೇರ್ಪಡೆ
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ
Online Shopping Effect: ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್
Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್ʼ ಆದ ಕನ್ನಡದ ರಿಷಬ್ ಶೆಟ್ಟಿ
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.