ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್
Team Udayavani, Aug 27, 2021, 8:36 PM IST
ಚಿಂತಾಮಣಿ : ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ ಘಟನೆ ನಡೆಯಿತು.
ಶುಕ್ರವಾರ ನಗರ ಠಾಣಾ ಎಸ್‌ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದು, ಈ ವೇಳೆ ಶ್ರೀನಿವಾಸಪುರದಿಂದ ಬೆಂಗಳೂರಿನ ಕಡೆ ಬಂದ ರಮೇಶ್ ಕುಮಾರ್ ರವರು ತಮ್ಮ ವಾಹನ ನಿಲ್ಲಿಸಿ ಬಂದು ದಂಡ ವಸೂಲಿ ಮಾಡುತ್ತಿದ್ದ ಪೋಲಿಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಂಡ ವಸೂಲಿ ಮಾಡದಂತೆ ಹೇಳಿದರು.
ಇದನ್ನೂ ಓದಿ:ಅತ್ಯಾಚಾರದಂಥ ಪ್ರಕರಣಗಳು ನಡೆಯುತ್ತಿರುತ್ತವೆ,ಇದಕ್ಕೆ ಏನೂ ಮಾಡೋಕೆ ಆಗಲ್ಲ : ಸಚಿವ ಕತ್ತಿ
ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗೋದು ಹೇಗೆ ? : ಮೊನ್ನೆಯಲ್ಲಾ ಗೃಹ ಮಂತ್ರಿಗಳು ಆದೇಶ ಮಾಡಿದ್ದಾರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ನೀವೇಕೆ ಹಾಕುತ್ತೀರ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೋದು. ಏನು ಡಾಕ್ಯುಮೆಂಟ್ಟ್ ಚೆಕ್ ಮಾಡ್ತೀರ ನೀವು ?, ನಾಚಿಕೆಯಾಗ ಬೇಕು ನಿಮಗೆ, ಮಿನಿಸ್ಟರ್ ಮೊನ್ನೆತಾನೆ ಬಾಯಿಬಡ್ಕೊಂಡು ಹೇಳ್ತಾನೆ ನೀವು ಏನು ಮಾಡುವುದು ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೊದು ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಉತ್ತರಿಸಿದ ಎಎಸ್‌ಐ ಮುಕ್ತಿಯಾರ್ ರವರು ಹೆಲ್ಮೆಟ್ ಹಾಕದೆ ಇರುವವರನ್ನು ಮತ್ತು ದಾಖಲೆಗಳು ಇಲ್ಲದವರನ್ನು ಪರಿಶೀಲನೆ ಮಾಡುತ್ತಿದ್ದೆವೆ ಸಾರ್ ಇನ್ನು ಮಾಡಲ್ಲ ಎಂದು ವಾಪಸ್ಸಾದರು.
ಇನ್ನು ಪೊಲೀಸ್ ರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ರಮೇಶ್ ಕುಮಾರ್ ರವರ ಆಡಳಿತ ವೈಖರಿಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.