ಸ್ಲಿಮ್ ಆಗಿ ರೀ ಎಂಟ್ರಿ ಕೊಡ್ತಾರಂತೆ ರಮ್ಯಾ!
ಮಾರ್ಚ್ ತಿಂಗಳಿನಲ್ಲಿ ನಾನು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ
Team Udayavani, Feb 3, 2022, 1:31 PM IST
ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಮತ್ತೆ ಸಿನಿಮಾಕ್ಕೆ ಬರುತ್ತಾರಾ? ಎಂದು ಹಲವು ವರ್ಷಗಳಿಂದ ಅಭಿಮಾನಿಗಳು ಕೇಳುತ್ತ ಬಂದಿರುವ ಪ್ರಶ್ನೆಗೆ ಇದೀಗ ಸ್ವತಃ ರಮ್ಯಾ ಅವರೇ “ಹೌದು’ ಎಂದು ಉತ್ತರಿಸಿದ್ದಾರೆ! ಚಿತ್ರರಂಗದಿಂದ ದೂರವಾಗಿ, ಬಳಿಕ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಆ ನಂತರ ರಾಜಕೀಯದಿಂದಲೂ ದೂರವಾಗಿರುವ ರಮ್ಯಾ ಇದೀಗ ಮತ್ತೆ ಬೆಳ್ಳಿತೆರೆಗೆ ಬರಲು ತಯಾರಿ ನಡೆಸುತ್ತಿದ್ದಾರಂತೆ.
ಇದನ್ನೂ ಓದಿ:ಜೇಮ್ಸ್ ಡಬ್ಬಿಂಗ್ ಮುಗಿಸಿದ ಶಿವರಾಜ್ ಕುಮಾರ್;ಅಪ್ಪು ವಾಯ್ಸ್ ಉಳಿಸಿಕೊಳ್ಳಲು ಶತಪ್ರಯತ್ನ
ಇದೀಗ ಅವರೇ ಹೇಳಿರುವಂತೆ, “ಕಳೆದ ಕೆಲವು ವರ್ಷಗಳಿಂದಲೂ ಸಾಕಷ್ಟು ಆಫರ್ ಬರುತ್ತಲೇ ಇವೆ. ಆದರೆ, ನಾನಾಗಿಯೇ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಸದ್ಯಕ್ಕೆ ನಾನು ಕೆಲವು ಸ್ಕ್ರಿಪ್ಟ್ಗಳನ್ನು ಓದುತ್ತಿದ್ದೇನೆ. ಆದಷ್ಟು ಬೇಗ ಈ ಬಗ್ಗೆ ಖಚಿತವಾದ ಮಾಹಿತಿ ನೀಡುತ್ತೇನೆ. ನನ್ನ ಕಮ್ ಬ್ಯಾಕ್ ಸಿನಿಮಾದ ಬಗ್ಗೆ ಮಾರ್ಚ್ ತಿಂಗಳಿನಲ್ಲಿ ನಾನು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ’ ಎನ್ನುವ ಮೂಲಕ ತಾವು ಚಿತ್ರರಂಗಕ್ಕೆ ಮರಳುತ್ತಿರುವ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ.
ಇನ್ನು ಸಿನಿಮಾ ರಂಗಕ್ಕೆ ರೀ-ಎಂಟ್ರಿ ಕೊಡಲು ರಮ್ಯಾ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ, “ಆಪರೇಶನ್ ಆದ ಬಳಿಕ ನನ್ನ ದೇಹ ತೂಕ ಸ್ವಲ್ಪ ಹೆಚ್ಚಾಗಿದೆ. ಮೊದಲು ನನ್ನ ದೇಹ ತೂಕವನ್ನು ಇಳಿಸಿಕೊಳ್ಳಬೇಕಾಗಿದೆ. ಆ್ಯಕ್ಟಿಂಗ್‌ಗೆ ಬೇಕಾದ ಫಿಸಿಕಲ್ ಫಿಟ್ನೇಸ್ ಪಡೆದುಕೊಳ್ಳಬೇಕಾಗಿದೆ. ಇನ್ನೂ ಸ್ಲಿಮ್ ಆಗಬೇಕಾಗಿದೆ. ಈಗಾಗಲೇ ಅದಕ್ಕಾಗಿ ವರ್ಕೌಟ್ ಶುರು ಮಾಡಿದ್ದೇನೆ’ ಎಂದಿದ್ದಾರೆ ನಟಿ ರಮ್ಯಾ.
ಒಟ್ಟಾರೆ ರಮ್ಯಾ ಅವರ ಇಂಥದ್ದೊಂದು ನುಡಿಮುತ್ತು ಕೇಳಿ ಖುಷಿಯಾಗಿರುವ ಅವರ ಫ್ಯಾನ್ಸ್, ಈಗ ರಮ್ಯಾ ಹೇಳಿರುವ ಮಾರ್ಚ್ ತಿಂಗಳ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.