ರಣಜಿ ಟ್ರೋಫಿ ವಿಳಂಬ ; ನ. 16ರ ಬದಲು ಜ. 5ಕ್ಕೆ ಆರಂಭ
Team Udayavani, Aug 21, 2021, 7:20 AM IST
ಹೊಸದಿಲ್ಲಿ : ಕೆಲವು ಕ್ರಿಕೆಟ್ ಮಂಡಳಿಗಳ ಸಲಹೆ ಮೇರೆಗೆ ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಒಂದೂವರೆ ತಿಂಗಳು ವಿಳಂಬವಾಗಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ನವಂಬರ್ 16ರ ಬದಲು ಮುಂದಿನ ವರ್ಷದ ಜನವರಿ 5ರಂದು ಆರಂಭಗೊಳ್ಳಲಿದೆ. ಮಾರ್ಚ್ 20ರ ತನಕ ಇದು ನಡೆಯಲಿದೆ.
ಅಭ್ಯಾಸ ಹಾಗೂ ತಯಾರಿಗೆ ಹೆಚ್ಚಿನ ಕಾಲಾವಕಾಶ ಬೇಕಿದೆ ಎಂಬ ರಾಜ್ಯ ಕ್ರಿಕೆಟ್ ಮಂಡಳಿಗಳ ಮನವಿಯನ್ನು ಪುರಸ್ಕರಿಸಿದ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಎಲ್ಲ ಪಂದ್ಯಗಳು ಜೈವಿಕ ಸುರಕ್ಷಾ ವಲಯದಲ್ಲಿ ನಡೆಯಲಿವೆ, ಒಟ್ಟು 38 ತಂಡಗಳು ಕಣಕ್ಕಿಳಿಯಲಿವೆ ಎಂದು ಬಿಸಿಸಿಐ ಹೇಳಿದೆ.
2021-22ರ ದೇಶಿ ಕ್ರಿಕೆಟ್ ಋತು ಅ. 27ರಂದು “ಸಯ್ಯದ್ ಮುಷ್ತಾಕ್ ಅಲಿ’ ಟ್ರೋಫಿ ಟೂರ್ನಿಯೊಂದಿಗೆ ಆರಂಭಗೊಳ್ಳಲಿದೆ. ಐಪಿಎಲ್ ಮುಗಿದ ಬಳಿಕ ಈ ಟೂರ್ನಿ ನಡೆಯಲಿರುವುದರಿಂದ ಪ್ರಮುಖ ಆಟಗಾರರು ತಮ್ಮ ರಾಜ್ಯ ತಂಡಗಳಲ್ಲಿ ಆಡುವ ಸಾಧ್ಯತೆ ಇದೆ. ಡಿ. ಒಂದರಿಂದ 29ರ ವರೆಗೆ “ವಿಜಯ್ ಹಜಾರೆ’ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಇದನ್ನೂ ಓದಿ :ದುಬಾೖನಲ್ಲಿ ಸಿಎಸ್‌ಕೆ ಅಭ್ಯಾಸ ಆರಂಭ : ಐಪಿಎಲ್ ಕೂಟಕ್ಕೆ ಇನ್ನೊಂದೇ ತಿಂಗಳು ಬಾಕಿ
ಕೊರೊನಾ ಮುನ್ನೆಚ್ಚರಿಕೆ
ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದೇಶಿ ಕ್ರಿಕೆಟ್ ಆವೃತ್ತಿಯಲ್ಲಿ ಪ್ರತಿಯೊಂದು ತಂಡ ಕೇವಲ 20 ಆಟಗಾರರು ಹಾಗೂ 10 ಮಂದಿ ಸಹಾಯಕ ಸಿಬಂದಿಯನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ.
ಕೊರೊನಾ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಪ್ರತಿಯೊಂದು ತಂಡವೂ ಪ್ರತ್ಯೇಕ ವೈದ್ಯರನ್ನು ಹೊಂದಿರಬೇಕೆಂದು ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಸೂಚಿಸಲಾಗಿದ್ದು, ಎಲ್ಲ ಸದಸ್ಯರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಬಿಸಿಸಿಐ ತಿಳಿಸಿದೆ.
ನಿರ್ದಿಷ್ಟ ಕ್ರಿಕೆಟ್ ಕೂಟದ ಆರಂಭಕ್ಕೂ 15 ದಿನ ಮೊದಲು ಅಂತಾರಾಜ್ಯ ವರ್ಗಾವಣೆ ಮತ್ತು ಅತಿಥಿ ಆಟಗಾರರ ನೋಂದಣಿ ಮಾಡಿಸಿಕೊಳ್ಳಬೇಕೆಂದೂ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.